ಕ್ರೀಡಾ ಸಾಧಕರಿಗೆ ಪದ್ಮ ಪುರಸ್ಕಾರ
Team Udayavani, Jan 26, 2018, 9:44 AM IST
ಹೊಸದಿಲ್ಲಿ: ಕೇಂದ್ರ ಸರಕಾರ ಪ್ರಕಟಿಸಿರುವ ಪ್ರಸ್ತುತ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ದೇಶದ ಖ್ಯಾತ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಕರ್ನಾಟಕದ ಸ್ನೂಕರ್-ಬಿಲಿಯರ್ಡ್ಸ್ ಪಟು ಪಂಕಜ್ ಆಡ್ವಾಣಿ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉಳಿದಂತೆ ಪದ್ಮಶ್ರೀ ಪ್ರಶಸ್ತಿಗೆ ಖ್ಯಾತ ಟೆನಿಸಿಗ ಸೋಮ್‌ದೇವ್ ದೇವ್ ವರ್ಮನ್ ಅವರನ್ನು ಆರಿಸಲಾಗಿದೆ. ಪ್ಯಾರಾಲಿಂಪಿಕ್ಸ್ ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಈಜುಪಟು ಮುರಳಿಕಾಂತ್ ಪೆಟ್ಕರ್, ವನಿತಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕೆ. ಶ್ರೀಕಾಂತ್ ಅವರಿಗೂ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.
ಮುರಳಿಕಾಂತ್ ಪೆಟ್ಕರ್ ಅವರು 1972ರ ಜರ್ಮನಿ ಪ್ಯಾರಾಲಂಪಿಕ್ಸ್ 50 ಮೀ. ಫ್ರೀ ಸ್ಟೈಲ್ ಸ್ವಿಮ್ಮಿಂಗ್‌ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದರು. ಅದೇ ಪಂದ್ಯಾವಳಿಯ ಜಾವೆಲಿನ್‌ತ್ರೋ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗ್ರಾ.ಪಂ.ಗಳಲ್ಲಿ ಅಮೃತ ಆರೋಗ್ಯ ಅಭಿಯಾನ : ದಕ್ಷಿಣ ಕನ್ನಡ, ಉಡುಪಿ ಗ್ರಾ.ಪಂ.ಗಳಲ್ಲೂ ಜಾರಿ
ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ಪ್ರಕರಣ : ನಗರಸಭೆಯ ಕಾಂಗ್ರೇಸ್ ಸದಸ್ಯನ ವಿರುದ್ಧ FIR
ಮಹಾರಾಷ್ಟ್ರ:ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಢಿಕ್ಕಿ, 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ತಲಪಾಡಿ-ಕಾಸರಗೋಡು ಷಟ್ಪಥ 2024ರಲ್ಲಿ ಪೂರ್ತಿ : ರಿಯಾಸ್
ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಪಲ್ಟಿಯಾಗಿ ದಂಪತಿ ಸಾವು, 15 ಕ್ಕೂ ಹೆಚ್ಚು ಮಂದಿ ಗಾಯ