ಮುಬಾಡಾಲ ವರ್ಲ್ಡ್ ಟೆನಿಸ್ ಆ್ಯಂಡರ್ಸನ್ ಚಾಂಪಿಯನ್
Team Udayavani, Jan 1, 2018, 6:25 AM IST
ಮುಬಾಡಾಲ (ಅಬುದಾಭಿ): ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ 10ನೇ “ಮುಬಾಡಾಲ ವರ್ಲ್ಡ್ ಟೆನಿಸ್’ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಶನಿವಾರ ರಾತ್ರಿಯ ಫೈನಲ್ನಲ್ಲಿ ಅವರು ಸ್ಪೇನಿನ ರಾಬರ್ಟೊ ಬುಟಿಸ್ಟ ಅಗುಟ್ ವಿರುದ್ಧ 6-4, 7-6 (7-0) ಅಂತರದ ಜಯ ಸಾಧಿಸಿದರು.
6 ಮಂದಿಯ ಈ ಪ್ರದರ್ಶನ ಪಂದ್ಯಾವಳಿಯಲ್ಲಿ ಆ್ಯಂಡರ್ಸನ್ ಅಜೇಯ ಸಾಧನೆಗೈದರು. ಎಲ್ಲರನ್ನೂ ನೇರ ಸೆಟ್ಗಳಲ್ಲಿ ಕೆಡವಿದರು. ಇದರಲ್ಲಿ 2 ಗೆಲುವು ಅವರಿಗಿಂತ ಉನ್ನತ ರ್ಯಾಂಕಿಂಗ್ ಆಟಗಾರರೆದುರು ಬಂದಿತ್ತು. ಇಲ್ಲಿ ಶರಣಾದವರೆಂದರೆ ಡೊಮಿನಿಕ್ ಥೀಮ್ (5) ಮತ್ತು ಪಾಬ್ಲೊ ಕರೆನೊ ಬುಸ್ಟ (10).
“ಸತತ 10 ವರ್ಷಗಳಿಂದ ಇಲ್ಲಿ ಆಡುತ್ತ ಬಂದಿರುವ ನಾನು ಮೊದಲ ಸಲ ಚಾಂಪಿಯನ್ ಆಗುತ್ತಿದ್ದೇನೆ. ಇದೊಂದು ಖುಷಿಯ ಸಂಗತಿ’ ಎಂದು ಕೆವಿನ್ ಆ್ಯಂಡರ್ಸನ್ ಪ್ರತಿಕ್ರಿಯಿಸಿದ್ದಾರೆ. ಅವರೀಗ ಮುಬಾಡಾಲ ಪ್ರಶಸ್ತಿಯೊಂದಿಗೆ ರಫೆಲ್ ನಡಾಲ್, ನೊವಾಕ್ ಜೊಕೋವಿಕ್, ಆ್ಯಂಡಿ ಮರ್ರೆ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.
2017ರ ಯುಎಸ್ ಓಪನ್ ರನ್ನರ್ ಅಪ್ ಆಗಿರುವ ಕೆವಿನ್ ಆ್ಯಂಡರ್ಸನ್ ಇನ್ನು ಪುಣೆಯಲ್ಲಿ ನಡೆಯುವ ಮಹಾರಾಷ್ಟ್ರ ಓಪನ್ ಪಂದ್ಯಾವಳಿಯಲ್ಲಿ ಆಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ