ಮುಂಬೈ ಇಂಡಿಯನ್ಸ್‌ ವರ್ಸಸ್‌ ಡೆಲ್ಲಿ ಕ್ಯಾಪಿಟಲ್ಸ್‌ 


Team Udayavani, Mar 24, 2019, 7:05 AM IST

89

ಮುಂಬಯಿ: ಮೂರು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ನೂತನ ಹೆಸರಿನ “ಡೆಲ್ಲಿ ಕ್ಯಾಪಿಟಲ್ಸ್‌’ ತಂಡಗಳು ರವಿವಾರ ರಾತ್ರಿ ಐಪಿಎಲ್‌ ಅಖಾಡಕ್ಕಿಳಿಯಲಿವೆ.

“ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆಯುವ ಕಾರಣ ಇದು ರೋಹಿತ್‌ ಪಡೆಗೆ ತವರಿನ ಪಂದ್ಯ. ಇನ್ನೊಂದೆಡೆ ಡೆಲ್ಲಿ ನಾಯಕನಾಗಿರುವ ಶ್ರೇಯಸ್‌ ಅಯ್ಯರ್‌ ಹಾಗೂ ಯುವ ಆರಂಭಕಾರ ಪೃಥ್ವಿ ಶಾ ಮೂಲತಃ ಮುಂಬಯಿಯವರೇ ಆಗಿರುವುದರಿಂದ ಅವರಿಗೂ ಇದು ತವರು ಪಂದ್ಯ!

ಆರಂಭದಲ್ಲಿ ಸೋಲಿನಾಟವಾಡುತ್ತ, ನಾಕೌಟ್‌ ಸಮೀಪಿಸುತ್ತಿದ್ದಂತೆ ಒಮ್ಮೆಲೇ ಚಿಗುರಿಕೊಳ್ಳುವ ಮುಂಬೈ ಇಂಡಿಯನ್ಸ್‌ ಸ್ಟಾರ್‌ ಆಟಗಾರರನ್ನು ಹೊಂದಿರುವ ತಂಡ. ವಿಶ್ವಕಪ್‌ಗೆ ಅಣಿಯಾಗಿರುವ ಟೀಮ್‌ ಇಂಡಿಯಾದ 3 ಪ್ರಧಾನ ಆಟಗಾರರು ಇಲ್ಲಿದ್ದಾರೆ. ಇವರೆಂದರೆ ರೋಹಿತ್‌ ಶರ್ಮ, ಜಸ್‌ಪ್ರೀತ್‌ ಬುಮ್ರಾ ಮತ್ತು ಹಾರ್ದಿಕ್‌ ಪಾಂಡ್ಯ. ಒಂದಾನೊಂದು ಕಾಲದ ಹೀರೋ ಯುವರಾಜ್‌ ಸಿಂಗ್‌ ಕೂಡ ಈ ಬಾರಿ ಮುಂಬೈ ಪಾಲಾಗಿದ್ದಾರೆ. ಮುಂಬಯಿ ರಣಜಿಯ ಬಹುತೇಕ ಆಟಗಾರರ ಜತೆಗೆ ಕ್ವಿಂಟನ್‌ ಡಿ ಕಾಕ್‌, ಜಾಸನ್‌ ಬೆಹೆÅಂಡಾಫ್ì, ಬೆನ್‌ ಕಟಿಂಗ್‌, ಎವಿನ್‌ ಲೆವಿಸ್‌, ಕೈರನ್‌ ಪೊಲಾರ್ಡ್‌ ಅವರೆಲ್ಲ ಈ ತಂಡದ ಸ್ಟಾರ್‌ ಕ್ರಿಕೆಟಿಗರಾಗಿದ್ದಾರೆ.

ಇತ್ತೀಚೆಗೆ ಗಾಯಾಳಾಗಿ ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿದ್ದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ, ಪ್ರಮುಖ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರ ಫಾರ್ಮ್ ಮತ್ತು “ವರ್ಕ್‌ ಲೋಡ್‌’ ಮೇಲೆ ತಂಡದ ಆಡಳಿತ ಮಂಡಳಿ ಹೆಚ್ಚಿನ ನಿಗಾ ಇರಿಸಲು ನಿರ್ಧರಿಸಿದೆ. ಇವರಿಬ್ಬರೂ ವಿಶ್ವಕಪ್‌ ತಂಡದ ಪ್ರಧಾನ ಅಸ್ತ್ರಗಳಾಗಿರುವುದೇ ಇದಕ್ಕೆ ಕಾರಣ.

ಆದರೆ ಪ್ರಧಾನ ವೇಗಿ ಲಸಿತ ಮಾಲಿಂಗ ಮೊದಲ 6 ಪಂದ್ಯಗಳಿಗೆ ಲಭ್ಯರಿಲ್ಲದಿರುವುದು ತಂಡಕ್ಕೆ ಎದುರಾದ ದೊಡ್ಡ ಹಿನ್ನಡೆ. ಹೀಗಾಗಿ ಮೆಕ್ಲೆನಗನ್‌, ಮಾರ್ಖಂಡೆ, ಕೃಣಾಲ್‌ ಪಾಂಡ್ಯ, ಜಯಂತ್‌ ಯಾದವ್‌, ರಾಹುಲ್‌ ಚಹರ್‌, ಸ್ರಾನ್‌ ಹೆಚ್ಚಿನ ಭಾರ ಹೊರಬೇಕಿದೆ.

ಡೆಲ್ಲಿಯೂ ಬಲಿಷ್ಠ ತಂಡ
ಈವರೆಗೆ ಐಪಿಎಲ್‌ನಲ್ಲಿ ಗಮನಾರ್ಹ ಸಾಧನೆ ದಾಖಲಿಸದೇ ಹೋದರೂ ಡೆಲ್ಲಿ ಕೂಡ ಪ್ರಬಲ ತಂಡವಾಗಿ ಗೋಚರಿಸುತ್ತಿದೆ. ಬೌಲ್ಟ್, ಇಶಾಂತ್‌, ರಬಾಡ, ನಾಥು ಸಿಂಗ್‌, ಕೀಮೊ ಪೌಲ್‌ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗ ಹೆಚ್ಚು ಬಲಿಷ್ಠವಾಗಿದೆ.

ಬ್ಯಾಟಿಂಗ್‌ ವಿಭಾಗದಲ್ಲಿ ಹೈದರಾಬಾದ್‌ನಿಂದ ತವರಿಗೆ ಮರಳಿದ ಧವನ್‌, ಹಾರ್ಡ್‌ ಹಿಟ್ಟರ್‌ ಪಂತ್‌, ನಾಯಕ ಅಯ್ಯರ್‌, ಪೃಥ್ವಿ ಶಾ, ಮನ್‌ಜೋತ್‌ ಕಾರ್ಲಾ, ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌, ಕಾಲಿನ್‌ ಮುನ್ರೊ, ಹನುಮ ವಿಹಾರಿ, ಜಲಜ್‌ ಸಕ್ಸೇನಾ ಅವರೆಲ್ಲ ಡೆಲ್ಲಿ ಬೆಂಬಲಕ್ಕಿದ್ದಾರೆ.ಹೆಸರು ಬದಲಾದೊಡನೆ ಡೆಲ್ಲಿ ತಂಡದ ಅದೃಷ್ಟವೂ ಬದಲಾದೀತೇ ಎಂಬ ಕುತೂಹಲಕ್ಕೆ ರವಿವಾರ ರಾತ್ರಿಯಿಂದ ಉತ್ತರ ಲಭಿಸಲಿದೆ.

ಟಾಪ್ ನ್ಯೂಸ್

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಭಯೋತ್ಪಾದನೆ: ಕಠಿನ ಸಂದೇಶ ರವಾನಿಸಿದ ಅಮಿತ್‌ ಶಾ

ಭಯೋತ್ಪಾದನೆ: ಕಠಿನ ಸಂದೇಶ ರವಾನಿಸಿದ ಅಮಿತ್‌ ಶಾ

ವಿಧಾನಸಭೆ ಮಹಾಸಮರಕ್ಕೆ ಹಾನಗಲ್‌-ಸಿಂದಗಿ ಶಸ್ತ್ರಾಭ್ಯಾಸ

ವಿಧಾನಸಭೆ ಮಹಾಸಮರಕ್ಕೆ ಹಾನಗಲ್‌-ಸಿಂದಗಿ ಶಸ್ತ್ರಾಭ್ಯಾಸ

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಐಪಿಎಲ್‌: ಇಂದು ಹೊಸ ತಂಡಗಳ ಖರೀದಿಗೆ ಸ್ಪರ್ಧೆ

ಐಪಿಎಲ್‌: ಇಂದು ಹೊಸ ತಂಡಗಳ ಖರೀದಿಗೆ ಸ್ಪರ್ಧೆ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸೈಯದ್‌ ಮುಷ್ತಾಖ್‌ ಅಲಿ ಟಿ20 ಪಂದ್ಯಾವಳಿ : ಕೇರಳಕ್ಕೆ ಸಂಜು ಸ್ಯಾಮ್ಸನ್‌ ನಾಯಕ

ಸೈಯದ್‌ ಮುಷ್ತಾಖ್‌ ಅಲಿ ಟಿ20 ಪಂದ್ಯಾವಳಿ : ಕೇರಳಕ್ಕೆ ಸಂಜು ಸ್ಯಾಮ್ಸನ್‌ ನಾಯಕ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಧಾರವಾಡದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ: ಹೆಗ್ಗಡೆ

ಧಾರವಾಡದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ: ಹೆಗ್ಗಡೆ

ಹೊಸ ಗಡಿ ಕಾನೂನಿಗೆ ಚೀನ ಒಪ್ಪಿಗೆ

ಹೊಸ ಗಡಿ ಕಾನೂನಿಗೆ ಚೀನ ಒಪ್ಪಿಗೆ

ಹಾನಗಲ್‌ನಲ್ಲಿ ಮತ್ತೆ 3 ದಿನ ಸಿಎಂ ಮೊಕ್ಕಾಂ

ಹಾನಗಲ್‌ನಲ್ಲಿ ಮತ್ತೆ 3 ದಿನ ಸಿಎಂ ಮೊಕ್ಕಾಂ

“ನದಿ ಮೂಲ ಉಳಿದರೆ ಮನುಕುಲದ ಉಳಿವು’

“ನದಿ ಮೂಲ ಉಳಿದರೆ ಮನುಕುಲದ ಉಳಿವು’

ರಾಜ್ಯದಲ್ಲಿ ಏಕರೂಪ ದರ ನಿಗದಿಯಿಂದ ಕಡಿವಾಣ ಸಾಧ್ಯ

ರಾಜ್ಯದಲ್ಲಿ ಏಕರೂಪ ದರ ನಿಗದಿಯಿಂದ ಕಡಿವಾಣ ಸಾಧ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.