ಮುಂಬಯಿ ಸೀನಿಯರ್ ತಂಡಕ್ಕೆ ಜೂ. ತೆಂಡುಲ್ಕರ್
Team Udayavani, Jan 3, 2021, 12:12 AM IST
ಮುಂಬಯಿ: ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಮೊದಲ ಸಲ ಮುಂಬಯಿ ಸೀನಿಯರ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರನ್ನು “ಸಯ್ಯದ್ ಮುಷ್ತಾಕ್ ಅಲಿ ಟಿ20′ ಕೂಟದ ಹೆಚ್ಚುವರಿ ಸದಸ್ಯನನ್ನಾಗಿ ಸೇರಿಸಿಕೊಳ್ಳಲಾಗಿದೆ.
ಜೈವಿಕ ಸುರಕ್ಷಾ ವಲಯ ನಿಯಮವನ್ನು ಪಾಲಿಸುವ ಉದ್ದೇಶದಿಂದ ತಂಡದ ಸದಸ್ಯರ ಸಂಖ್ಯೆಯನ್ನು 20ರಿಂದ 22ಕ್ಕೆ ಹೆಚ್ಚಿಸಲು ಬಿಸಿಸಿಐ ಸೂಚಿಸಿದ ಬಳಿಕ ಜೂನಿಯರ್ ತೆಂಡುಲ್ಕರ್ ಮತ್ತು ಪೇಸ್ ಬೌಲರ್ ಕೃತಿಕ್ ಹನಗವಾಡಿ ಅವರನ್ನು ಸೇರಿಸಿಕೊಳ್ಳಲಾಯಿತು ಎಂದು ಮುಂಬಯಿ ಆಯ್ಕೆ ಸಮಿತಿ ಅಧ್ಯಕ್ಷ ಸಲಿಲ್ ಅಂಕೋಲಾ ತಿಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಮುಂಬಯಿ ತಂಡವನ್ನು ಮುನ್ನಡೆಸಲಿದ್ದಾರೆ.