ಮುಂಬೈ ಮುಂದೆ ಭಾರೀ ಸವಾಲು: ಜಹೀರ್‌ ಖಾನ್‌

Team Udayavani, Nov 18, 2019, 11:35 PM IST

ಮುಂಬಯಿ: ಮುಂಬರುವ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಎದುರಾಗುವ ಸವಾಲು ಹಿಂದಿನಂತಿರದು ಎಂದು ತಂಡದ ನಿರ್ದೇಶಕ ಜಹೀರ್‌ ಖಾನ್‌ ಅಭಿಪ್ರಾಯಪಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಜಹೀರ್‌ ಖಾನ್‌, “ತಂಡದ ಸ್ಟಾರ್‌ ಆಟಗಾರರಾದ ಜಸ್‌ಪ್ರೀತ್‌ ಬುಮ್ರಾ, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇವರು ತಂಡಕ್ಕೆ ಮರಳುತ್ತಾರೋ ಇಲ್ಲವೋ ಎನ್ನುವುದು ಖಚಿತವಾಗಿಲ್ಲ. ಆದ್ದರಿಂದ ಹಾಲಿ ಚಾಂಪಿಯನ್‌ ಮುಂಬೈ ಹಾದಿ ಸುಗಮವಲ್ಲ’ ಎಂದು ಜಹೀರ್‌ ಖಾನ್‌ ಹೇಳಿದರು.

ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡ ಕಿವೀಸ್‌ ವೇಗಿ ಟ್ರೆಂಡ್‌ ಬೌಲ್ಟ್ ಮತ್ತು ಸ್ಥಳೀಯ ಬೌಲರ್‌ ಧವಳ್‌ ಕುಲಕರ್ಣಿ ಅವರ ಮೇಲೆ ಮುಂಬೈ ಇಂಡಿಯನ್ಸ್‌ ಹೆಚ್ಚಿನ ಭರವಸೆ ಇರಿಸಿದೆ.

ಮುಂಬೈ ಇಂಡಿಯನ್ಸ್‌ ಈ ಬಾರಿ 10 ಮಂದಿ ಕ್ರಿಕೆಟಿಗರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ಇದರಲ್ಲಿ ಆಸೀಸ್‌ ವೇಗಿ ಜಾಸನ್‌ ಬೆಹೆÅಂಡಾಫ್ì ಕೂಡ ಸೇರಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ