ನಾನು ಕೋರ್ಟ್ನಿ ವಾಲ್ಶ್ ಮಗನಲ್ಲ: ಹೇಡನ್ ವಾಲ್ಶ್
Team Udayavani, Dec 9, 2019, 11:23 PM IST
ತಿರುವನಂತಪುರ: “ಎಲ್ಲರೂ ನಾನು ಕೋರ್ಟ್ನಿ ವಾಲ್ಶ್ ಅವರ ಮಗನೆಂದೇ ತಿಳಿದುಕೊಂಡಿದ್ದಾರೆ. ಆದರೆ ಕೋರ್ಟ್ನಿ ವಾಲ್ಶ್ ನನ್ನ ತಂದೆ ಯಲ್ಲ…’ ಎಂಬುದಾಗಿ ವಿಂಡೀಸ್ ತಂಡದ ಲೆಗ್ಸ್ಪಿನ್ನರ್ ಹೇಡನ್ ವಾಲ್ಶ್ ನಗುತ್ತಲೇ ಸ್ಪಷ್ಟಪಡಿಸಿದ್ದಾರೆ.
ಕೋರ್ಟ್ನಿ ವಾಲ್ಶ್ 80-90ರ ದಶಕದಲ್ಲಿ ವೆಸ್ಟ್ ಇಂಡೀಸಿನ ಪೇಸ್ ಬೌಲಿಂಗ್ ಗ್ರೇಟ್ ಎನಿಸಿದ್ದರು. ಆದರೆ ಭಾರತ ಪ್ರವಾಸದಲ್ಲಿರುವ ಹೇಡನ್ ವಾಲ್ಶ್ ಲೆಗ್ಸ್ಪಿನ್ನರ್ ಆಗಿದ್ದಾರೆ. ವಯಸ್ಸು 27 ವರ್ಷ.
“ಎಲ್ಲರೂ ನಾನು ಕೋರ್ಟ್ನಿ ವಾಲ್ಶ್ ಅವರ ಮಗನೆಂದೇ ತಿಳಿದಿದ್ದಾರೆ. ನಾನು ಕೆನಡಾ ಟಿ20 ಲೀಗ್ನಲ್ಲಿ ಆಡುತ್ತಿದ್ದಾಗ ಕೆಲವರು ನನ್ನನ್ನು ಜೂನಿ ಯರ್ ಕೋರ್ಟ್ನಿ ವಾಲ್ಶ್ ಎಂದೇ ಕರೆಯುತ್ತಿದ್ದರು. ಆಗ, ನಾನವನಲ್ಲ ಎಂದು ಸ್ಪಷ್ಟಪಡಿಸಬೇಕಾಯಿತು. ಈಗಲೂ ಜನರಲ್ಲಿ ಈ ಗೊಂದಲ ಉಳಿದುಕೊಂಡಿದೆ. ಹೀಗಾಗಿ ನಾನು ಯಾರು ಎಂಬುದನ್ನು ಇನ್ನೂ ಸ್ಪಷ್ಟಪಡಿ ಸಬೇಕಾದ ಅಗತ್ಯವಿದೆ…’ ಎಂದು ತಿರುವನಂತಪುರ ಟಿ20 ಪಂದ್ಯದಲ್ಲಿ 2 ವಿಕೆಟ್ ಉರುಳಿಸಿದ ವಾಲ್ಶ್ ಹೇಳಿದರು.
“ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದ ಕಾರಣ ನಾನು ರಾಷ್ಟ್ರೀಯ ಆಯ್ಕೆಗಾರರ ಕಣ್ಣಿಗೆ ಬಿದ್ದೆ. ಹೀಗಾಗಿ ವೆಸ್ಟ್ ಇಂಡೀಸ್ ತಂಡವನ್ನು ಸೇರಿಕೊಂಡೆ. ಭಾರತದ ಎದುರಿನ ಟಿ20 ಸರಣಿಯನ್ನು ಗೆಲ್ಲುವುದೇ ನನ್ನ ಹಾಗೂ ತಂಡದ ಪ್ರಮುಖ ಗುರಿ’ ಎಂಬುದಾಗಿ ವಾಲ್ಶ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ