ಬರ್ತ್ಡೇ ಬಾಲಕನ ಜತೆ ನಡಾಲ್ ಹೋರಾಟ
Team Udayavani, Aug 13, 2018, 6:00 AM IST
ಟೊರೊಂಟೊ: ವಿಶ್ವ ಖ್ಯಾತಿಯ ಆಟಗಾರ ರಫೆಲ್ ನಡಾಲ್ ಅವರು ಟೊರೊಂಟೊ ಮಾಸ್ಟರ್ ಟೆನಿಸ್ ಕೂಟದ ಪ್ರಶಸ್ತಿಗಾಗಿ ಬರ್ತ್ಡೆ ಬಾಲಕ ಸ್ಟೆಫಾನೊ ಸಿಸಿಪಾಸ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಸ್ಪೇನ್ನ ನಡಾಲ್ ಅವರು ಗ್ರೀಕ್ನ ಯುವ ಆಟಗಾರ ಸಿಸಿಪಾಸ್ ಅವರ 20ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸದಂತೆ ತಡೆಯಲು ಮುಂದಾಗಿದ್ದಾರೆ. ವಿಂಬಲ್ಡನ್ ಫೈನಲಿಸ್ಟ್ ಕೆವಿನ್ ಆ್ಯಂಡರ್ಸನ್ ಅವರನ್ನು 6-7 (4-7), 6-4, 7-6 (9-7) ಸೆಟ್ಗಳಿಂದ ಸೋಲಿಸಿದ ಸಿಸಿಪಾಸ್ ತನ್ನ ಟೆನಿಸ್ ಬಾಳ್ವೆಯಲ್ಲಿ ಎರಡನೇ ಬಾರಿ ಫೈನಲ್ ಹಂತಕ್ಕೇರಿದ ಸಾಧನೆ ಮಾಡಿದರು. ಇದೇ ವೇಳೆ ಕರೆನ್ ಕಚನೋವ್ ಅವರನ್ನು 7-6 (7-3), 6-4 ಸೆಟ್ಗಳಿಂದ ಸೋಲಿಸಿದ ನಡಾಲ್ ಫೈನಲ್ ತಲುಪಿದರು.
ಮಾಸ್ಟರ್ 1000 ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ನಡಾಲ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಇಷ್ಟರವರೆಗೆ 32 ಪ್ರಶಸ್ತಿ ಗೆದ್ದಿದ್ದಾರೆ. ಅವರೀಗ 116ನೇ ಎಟಿಪಿ ಟೂರ್ ಫೈನಲ್ನಲ್ಲಿ ಆಡುತ್ತಿದ್ದು 80ನೇ ಪ್ರಶಸ್ತಿ ಗೆಲ್ಲಲು ಇನ್ನೆರಡು ಪ್ರಶಸ್ತಿ ಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ