ನಡಾಲ್, ಕೊಂಟಾ ಫೈನಲ್ ಪ್ರವೇಶ
Team Udayavani, May 19, 2019, 6:00 AM IST
ರೋಮ್: ಹಾಲಿ ಚಾಂಪಿಯನ್ ರಫೆಲ್ ನಡಾಲ್ ಇಟಾಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಫೈನಲ್ಗೆ ಲಗ್ಗೆ ಹಾಕಿದ್ದಾರೆ. ಶನಿವಾರದ ಸೆಮಿಫೈನಲ್ ಪಂದ್ಯದಲ್ಲಿ ಅವರು ಗ್ರೀಕ್ನ ಅಪಾಯಕಾರಿ ಆಟಗಾರ ಸ್ಟೆಫನಸ್ ಸಿಸಿಪಸ್ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು.
ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜೊಕೋವಿಕ್ ಮತ್ತು ಆರ್ಜೆಂಟೀನಾದ ಡೀಗೊ ಶಾರ್ಟ್ಸ್ ಮನ್ ನಡುವೆ ಇನ್ನೊಂದು ಸೆಮಿಫೈನಲ್ ಜರಗಲಿದೆ.
ವನಿತಾ ಸಿಂಗಲ್ಸ್ನಲ್ಲಿ ಕಿಕಿ ಬರ್ಟೆನ್ಸ್ ಅವರನ್ನು 5-7, 7-5, 6-2ರಿಂದ ಮಣಿಸಿದ ಬ್ರಿಟನ್ನಿನ ಜೊಹಾನ್ನಾ ಕೊಂಟಾ ಫೈನಲ್ ಪ್ರವೇಶಿಸಿದರು.