ನಡಾಲ್‌, ಪ್ಲಿಸ್ಕೋವಾ ಆಟಕ್ಕೆ ಮಳೆ: ಹಾಲೆಪ್‌ ಕ್ವಾರ್ಟರ್‌ ಫೈನಲ್‌ ಪಯಣ


Team Udayavani, Aug 19, 2017, 12:10 PM IST

19-Sports3.jpg

ಸಿನ್ಸಿನಾಟಿ: ಸಿನ್ಸಿನಾಟಿ ಮಾಸ್ಟರ್ ಟೆನಿಸ್‌ ಕೂಟದ ಗುರುವಾರ ರಾತ್ರಿಯ ಆಟಕ್ಕೆ ಮಳೆಯಿಂದ ಅಡಚಣೆಯಾಗಿದೆ. ಇದರಿಂದ ರಫೆಲ್‌ ನಡಾಲ್‌, ಕ್ಯಾರೋಲಿನಾ ಪ್ಲಿಸ್ಕೋವಾ ಮೊದಲಾದ ಸ್ಟಾರ್‌ ಆಟಗಾರರ ಪಂದ್ಯ ಮುಂದೂಡಲ್ಪಟ್ಟಿದೆ. ಆದರೆ ವನಿತಾ ಸಿಂಗಲ್ಸ್‌ನಲ್ಲಿ ಸಿಮೋನಾ ಹಾಲೆಪ್‌ ಗೆಲುವಿನೊಂದಿಗೆ ಕ್ವಾರ್ಟರ್‌ ಫೈನಲ್‌ ತಲಪುವಲ್ಲಿ ಯಶಸ್ವಿಯಾಗಿದ್ದಾರೆ.

ಫ್ರೆಂಚ್‌ ಓಪನ್‌ ರನ್ನರ್‌ ಅಪ್‌ ಆಗಿರುವ ರೊಮೇನಿಯಾದ ಸಿಮೋನಾ ಹಾಲೆಪ್‌ 6-4, 6-3ರಿಂದ ಲಾತ್ವಿಯಾದ ಅನಾಸ್ತಾಸಿಜಾ ಸೆವತ್ಸೋವಾ ಅವರಿಗೆ ಸೋಲುಣಿಸಿದರು. ಇಲ್ಲಿ ಚಾಂಪಿಯನ್‌ ಆಗಿ ಮೂಡಿಬಂದದ್ದೇ ಆದಲ್ಲಿ ಹಾಲೆಪ್‌ ವಿಶ್ವದ ನಂಬರ್‌ ವನ್‌ ಆಟಗಾರ್ತಿಯಾಗಿ ಮೂಡಿಬರಲಿದ್ದಾರೆ. 

ಹಾಲಿ ಚಾಂಪಿಯನ್‌ ಕ್ಯಾರೋಲಿನಾ ಪ್ಲಿಸ್ಕೋವಾ ಸದ್ಯ ವಿಶ್ವದ ನಂ.1 ಆಟಗಾರ್ತಿಯಾಗಿದ್ದು, ಇದನ್ನು ಉಳಿಸಿಕೊಳ್ಳಲು ಅವರು ಚಾಂಪಿಯನ್‌ ಕಿರೀಟವನ್ನು ತನ್ನಲ್ಲೇ ಉಳಿಸಿಕೊಳ್ಳುವ ಅಗತ್ಯವಿದೆ. ಆದರೆ ಪ್ಲಿಸ್ಕೋವಾ ಹಾಗೂ ಇಟಲಿಯ ಕ್ಯಾಮಿಲಾ ಜಾರ್ಜಿ ನಡುವಿನ ಪಂದ್ಯ ಮಳೆಯಿಂದ ಸ್ಥಗಿತಗೊಂಡಿದೆ. ಆಗ ಪ್ಲಿಸ್ಕೋವಾ 3-0 ಮುನ್ನಡೆಯಲ್ಲಿದ್ದರು. ಸ್ಲೋನ್‌ ಸ್ಟೀಫ‌ನ್ಸ್‌-ಎಕತೆರಿನಾ ಮಕರೋವಾ ನಡುವಿನ ಪಂದ್ಯವೂ ಮುಂದೂಡಲ್ಪಟ್ಟಿದೆ.

ಕಳೆದ ವಾರವಷ್ಟೇ ಟೊರೆಂಟೊ ಪ್ರಶಸ್ತಿ ಗೆದ್ದ ಉಕ್ರೇನಿನ ಎಲಿನಾ ಸ್ವಿಟೋಲಿನಾ ಅವರಿಗೂ ನಂ.1 ಹಾದಿ ತೆರೆಯಲ್ಪಟ್ಟಿದೆ. ಸ್ವಿಟೋಲಿನಾ ಸಿನ್ಸಿನಾಟಿಯಲ್ಲೂ ಚಾಂಪಿಯನ್‌ ಆಗಿ ಮೂಡಿಬಂದರೆ ಪ್ರಶಸ್ತಿ ಜತೆಗೆ ನಂಬರ್‌ ವನ್‌ ಕಿರೀಟವನ್ನೂ ಏರಿಸಿಕೊಳ್ಳಲಿದ್ದಾರೆ. 

ಮುಗುರುಜಾ ಪಂದ್ಯ ಸರಾಗ
ವಿಂಬಲ್ಡನ್‌ ಚಾಂಪಿಯನ್‌ ಗಾರ್ಬಿನ್‌ ಮುಗುರುಜಾ, ಬ್ರಿಟನ್ನಿನ 7ನೇ ಶ್ರೇಯಾಂಕಿತೆ ಜೊಹಾನ್ನಾ ಕೊಂಟಾ ಅವರ ಪಂದ್ಯಕ್ಕೆ ಯಾವುದೇ ಅಡಚಣೆಯಾಗಲಿಲ್ಲ. ಜೊಹಾನ್ನಾ ಕೊಂಟಾ 6-3, 6-4ರಿಂದ ಡೊಮಿನಿಕಾ ಸಿಬುಲ್ಕೋವಾ ಅವರನ್ನು ಮಣಿಸಿದರೆ, ಮುಗುರುಜಾ ಅಮೆರಿಕದ ಮ್ಯಾಡಿಸನ್‌ ಕೇಯ್ಸ ಅವರನ್ನು 6-4, 3-6, 7-6 (7-3)ರಿಂದ ಹಿಮ್ಮೆಟ್ಟಿಸಿ ಕ್ವಾರ್ಟರ್‌ ಫೈನಲ್‌ ತಲುಪಿದರು. ಮುಗುರುಜಾ ಅವರಿನ್ನು ರಶ್ಯದ ಸ್ವೆತ್ಲಾನಾ ಕುಜ್ನೆತ್ಸೋವಾ ವಿರುದ್ಧ ಆಡಲಿದ್ದಾರೆ. ಕುಜ್ನೆತ್ಸೋವಾ ಸ್ಪೇನಿನ ಕಾರ್ಲಾ ಸುರೆಜ್‌ ನವಾರೊ ವಿರುದ್ಧ 6-2, 6-4 ಅಂತರದ ಜಯ ಸಾಧಿಸಿದರು.

ರಫೆಲ್‌ ನಡಾಲ್‌-ಆಲ್ಬರ್ಟ್‌ ರಮೋಸ್‌ ವಿಲಾಸ್‌ ನಡುವಿನ 3ನೇ ಸುತ್ತಿನ ಪಂದ್ಯ ಭಾರೀ ಮಳೆಯಿಂದ ಆರಂಭವಾಗಲಿಲ್ಲ. ಈ ಟೆನಿಸ್‌ ಅಂಕಣ ಕೆರೆಯಂತಾಗಿದ್ದು, ಮೈಕಲ್‌ ಪೆಲ್ಫ್$Õ ಅವರಿಗೆ ಈಜಲು ಅತ್ಯಂತ ಪ್ರಶಸ್ತವಾಗಿದೆ ಎಂದು ಮಾಧ್ಯಮಗಳು ವ್ಯಂಗ್ಯವಾಡಿವೆ!

ಟಾಪ್ ನ್ಯೂಸ್

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಮತ್ತೆ ಹಾಜರ್‌ : ಟಿಕೆಟನ್ನು ಮಾಹಿಯೇ ಕೊಡಿಸುವ ನಂಬಿಕೆಯಲ್ಲಿ ಚಾಚಾ

1-qq

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

2drone

ಡ್ರೋಣ್‌ ಮೂಲಕ ಕೀಟನಾಶಕ ಸಿಂಪರಣೆ

23glb-13

ಮಹಿಳೆಯರಿಗೆ ರಾಣಿ ಚನ್ನಮ್ಮ ಆದರ್ಶ: ಪ್ರಕಾಶ ಕುದುರಿ

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.