
ಇಂಡಿಯನ್ ವೆಲ್ಸ್ ಟೆನಿಸ್: ಒಸಾಕಾ-ಕಸತ್ಕಿನಾ ಫೈನಲ್ ಫೈಟ್
Team Udayavani, Mar 18, 2018, 6:25 AM IST

ಇಂಡಿಯನ್ ವೆಲ್ಸ್: ಇಂಡಿಯನ್ ವೆಲ್ಸ್ ವನಿತಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಅಚ್ಚರಿಯ ಫಲಿತಾಂಶ ದಾಖಲಾಗಿದ್ದು, ಜಪಾನಿನ ನವೋಮಿ ಒಸಾಕಾ ಮತ್ತು ರಶ್ಯದ ದರಿಯಾ ಕಸತ್ಕಿನಾ ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಡಲಿದ್ದಾರೆ. ಇವರಿಬ್ಬರು ಕ್ರಮವಾಗಿ ನಂ.1 ಖ್ಯಾತಿಯ ಸಿಮೋನಾ ಹಾಲೆಪ್ ಹಾಗೂ 7 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ವಿಜೇತ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರಿಗೆ ನಿರ್ಗಮನ ಬಾಗಿಲು ತೆರೆದರು.
ವಿಶ್ವದ 44ನೇ ರ್‍ಯಾಂಕಿಂಗ್ ಆಟಗಾರ್ತಿಯಾಗಿರುವ ನವೋಮಿ ಒಸಾಕಾ ನಿರೀಕ್ಷೆಗೂ ಮಿಗಿಲಾದ ಹೋರಾಟ ಸಂಘಟಿಸಿ 6-3, 6-0 ಅಂತರದಿಂದ ಸಿಮೋನಾ ಹಾಲೆಪ್‌ಗೆ ಆಘಾತವಿಕ್ಕಿದರು. ದರಿಯಾ ಕಸತ್ಕಿನಾ 3 ಸೆಟ್‌ಗಳ ಕಾದಾಟ ನಡೆಸಿ ವೀನಸ್ ವಿಲಿಯಮ್ಸ್ ವಿರುದ್ಧ 4-6, 6-4, 7-5 ಅಂತರದ ರೋಚಕ ವಿಜಯ ಸಾಧಿಸಿದರು.
ಕೇವಲ 64 ನಿಮಿಷಗಳ ಪಂದ್ಯ!
ಸಿಮೋನಾ ಹಾಲೆಪ್ ಮಾಜಿ ಚಾಂಪಿಯನ್ ಆಗಿದ್ದು, ಒಸಾಕಾ ರಭಸಕ್ಕೆ ತತ್ತರಿಸಿ ಹೋದರು. ಎಷ್ಟರ ಮಟ್ಟಿಗೆಂದರೆ, 2ನೇ ಸೆಟ್‌ನಲ್ಲಿ ಅವರಿಗೆ ಒಂದೂ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಒಸಾಕಾ ಕೇವಲ 64 ನಿಮಿಷಗಳಲ್ಲಿ ರೊಮೇನಿಯನ್ ಆಟಗಾರ್ತಿಯನ್ನು ಹಿಮ್ಮೆಟ್ಟಿಸಲು ಒಸಾಕಾಗೆ ಕೇವಲ 64 ನಿಮಿಷ ಸಾಕಾಯಿತು.
“ನನ್ನ ಸೋಲಿಗೆ ಯಾವುದೇ ಸಬೂಬುಗಳಿಲ್ಲ. ಒಸಾಕಾ ಉತ್ತಮ ಮಟ್ಟದ ಆಟವಾಡಿದರು. ನಾನು ಸಾಕಷ್ಟು ತಪ್ಪು ಹೊಡೆತಗಳನ್ನಿಕ್ಕಿದೆ. ಟೆನಿಸ್‌ನಲ್ಲೀಗ ಯುವ ಆಟಗಾರ್ತಿಯರ ಹವಾ ಬೀಸುತ್ತಿರುವುದಕ್ಕೆ ಈ ಎರಡೂ ಸೆಮಿಫೈನಲ್ ಸಾಕ್ಷಿ…’ ಎಂದು ಸಿಮೋನಾ ಹಾಲೆಪ್ ಪ್ರತಿಕ್ರಿಯಿಸಿದರು. ಅವರು 3 ವರ್ಷಗಳ ಹಿಂದೆ ಜೆಲೆನಾ ಜಾನ್ಕೋವಿಕ್‌ಗೆ ಸೋಲುಣಿಸಿ ಇಂಡಿಯನ್ ವೆಲ್ಸ್ ಪ್ರಶಸ್ತಿ ಜಯಿಸಿದ್ದರು.
ಫೈನಲ್‌ನಲ್ಲಿ ಸೆಣಸಲಿರುವ ಒಸಾಕಾ ಮತ್ತು ಕಸತ್ಕಿನಾ ಇಬ್ಬರೂ 20ರ ಹರೆಯದ ಆಟಗಾರ್ತಿಯರು. ಒಸಾಕಾ 2005ರ ಬಳಿಕ ಇಂಡಿಯನ್ ವೆಲ್ಸ್ ಸೆಮಿಫೈನಲ್‌ನಲ್ಲಿ ಆಡಿದ ಅತ್ಯಂತ ಕೆಳ ರ್‍ಯಾಂಕಿಂಗ್ ಆಟಗಾರ್ತಿಯಾಗಿದ್ದಾರೆ.
“ಫೈನಲ್ ತಲುಪಿದ್ದಕ್ಕೆ ಖುಷಿಯಾಗುತ್ತಿದೆ. ಜತೆಗೆ ನರ್ವಸ್ ಕೂಡ ಆಗಿದ್ದೇನೆ’ ಎಂಬುದು ನವೋಮಿ ಒಸಾಕಾ ಪ್ರತಿಕ್ರಿಯೆ.
ವೀನಸ್ ವಿಲಿಯಮ್ಸ್ ಅವರನ್ನು ಮಣಿಸುವ ಮೂಲಕ ಈ ಕೂಟದಲ್ಲಿ ದರಿಯಾ ಕಸತ್ಕಿನಾ ಸತತ 3ನೇ ಟಾಪ್-10 ಆಟಗಾರ್ತಿಯನ್ನು ಮನೆಗಟ್ಟಿದಂತಾಯಿತು. ಇವರಿಬ್ಬರ ಕಾಳಗ 2 ಗಂಟೆ, 49 ನಿಮಿಷಗಳ ತನಕ ಸಾಗಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

crypto ಕರೆನ್ಸಿ ಅಕ್ರಮ ವಹಿವಾಟು; 20 ಸಂಸ್ಥೆಗಳ ವಿರುದ್ಧ ತನಿಖೆ ನಡೆಸಿ; ಕೇಂದ್ರ ಸರ್ಕಾರ

ಐಟಂ ಡ್ಯಾನ್ಸ್ ಮಾಡ್ಬೇಡ… ʼಊ ಅಂಟವಾʼ ಹಾಡಿಗೆ ಸಮಂತಾ ಆಪ್ತರಿಂದಲೇ ವ್ಯಕ್ತವಾಗಿತ್ತು ವಿರೋಧ

ತೆರೆಗೆ ಬಂತು ಡಾಲಿ ಧನಂಜಯ ಅಭಿನಯದ ‘ಗುರುದೇವ್ ಹೊಯ್ಸಳ’

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್ʼ ಹೊಸ ಪೋಸ್ಟರ್ ಹಂಚಿಕೊಂಡ ಪ್ರಭಾಸ್