ಬ್ರಿಸ್ಬೇನ್ ಇಂಟರ್ನ್ಯಾಶನಲ್ ಸೆಮಿಗೆ ಒಸಾಕಾ, ನಿಶಿಕೊರಿ
Team Udayavani, Jan 4, 2019, 12:30 AM IST
ಬ್ರಿಸ್ಬೇನ್: ಯುಎಸ್ ಓಪನ್ ಚಾಂಪಿಯನ್ ಜಪಾನಿನ ನವೊಮಿ ಒಸಾಕಾ “ಬ್ರಿಸ್ಬೇನ್ ಇಂಟರ್ನ್ಯಾಶನಲ್’ ಕೂಟದ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ವಿಭಾಗದಿಂದ ಜಪಾನಿನ ಕೀ ನಿಶಿಕೊರಿ ಕೂಡ ಉಪಾಂತ್ಯ ತಲುಪಿದ್ದಾರೆ.
ಗುರುವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಒಸಾಕಾ ಲಾತ್ವಿಯಾದ ಅನಸ್ತಾಸಿಜಾ ಸೆವತ್ಸೋವಾ ಅವರನ್ನು 3-6, 6-0, 6-4 ಸೆಟ್ಗಳಿಂದ ಸೋಲಿಸಿದರು. ಮೊದಲ ಸೆಟ್ನಲ್ಲಿ ಮುಗ್ಗರಿಸಿದರೂ ಬಳಿಕ ಹಿಡಿತ ಸಾಧಿಸುವಲ್ಲಿ ಒಸಾಕಾ ಯಶಸ್ವಿಯಾದರು.
ಪುರುಷರ ಸಿಂಗಲ್ಸ್ನಲ್ಲಿ ಕೀ ನಿಶಿಕೊರಿ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಅವರನ್ನು ಭಾರೀ ಹೋರಾಟದ ಬಳಿಕ 7-5, 7-5 ಅಂತರದಿಂದ ಮಣಿಸಿದರು. ರಫೆಲ್ ನಡಾಲ್ ಬದಲು ಅವಕಾಶ ಪಡೆದ ಟಾರೊ ಡೇನಿಯಲ್ ಸ್ಪೇನಿನ ಜೋ ವಿಲ್ಫ್ರೆಡ್ ಸೋಂಗ ಅವರಿಗೆ ಶರಣಾದರು.