ಐಪಿಎಲ್‌ ಪಂದ್ಯಕ್ಕೂ ಮುನ್ನ ಮೊಳಗಲಿ ರಾಷ್ಟ್ರಗೀತೆ…

Team Udayavani, Nov 8, 2019, 5:00 AM IST

ಹೊಸದಿಲ್ಲಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಆಗಿರುವ ಐಪಿಎಲ್‌ ವೇಳೆ ರಾಷ್ಟ್ರಗೀತೆಯನ್ನು ಹಾಡಬೇಕು ಎಂಬುದಾಗಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮಾಲಕ ನೆಸ್‌ ವಾಡಿಯಾ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಪ್ರತಿಯೊಂದು ಅಂತಾರಾಷ್ಟ್ರೀಯ ಪಂದ್ಯಕ್ಕೂ ಮುನ್ನ ಎರಡೂ ದೇಶಗಳ ರಾಷ್ಟ್ರಗೀತೆಯನ್ನು ಹಾಡುವುದು ಸಂಪ್ರದಾಯವಾಗಿದೆ. ಇಂಡಿಯನ್‌ ಸೂಪರ್‌ ಲೀಗ್‌ ಫ‌ುಟ್ಬಾಲ್‌, ಪ್ರೊ ಕಬಡ್ಡಿ ಲೀಗ್‌ ವೇಳೆ ಭಾರತದ ರಾಷ್ಟ್ರಗೀತೆ ಮೊಳಗುತ್ತದೆ. ಅದೇ ರೀತಿ ಈ ಸಂಪ್ರದಾಯವನ್ನು ಐಪಿಎಲ್‌ನಲ್ಲೂ ಆರಂಭಿಸಬೇಕು ಎನ್ನುವುದು ವಾಡಿಯಾ ಸಲಹೆ.

“ಈ ಕುರಿತು ನಾನು ಮೊದಲೊಮ್ಮೆ ಬಿಸಿಸಿಐಗೆ ಸೂಚಿಸಿದ್ದೆ. ಈಗ ಮಂಡಳಿ ಅಧ್ಯಕ್ಷ ಸೌರವ್‌ ಗಂಗೂಲಿ ಅವರಿಗೆ ಪತ್ರ ಬರೆದಿದ್ದೇನೆ. ಇದು ಇಂಡಿಯನ್‌ ಲೀಗ್‌ ಆಗಿರುವುದರಿಂದ ರಾಷ್ಟ್ರಗೀತೆ ಹಾಡುವುದು ಒಳ್ಳೆಯ ಸಂಪ್ರದಾಯ. ನಮ್ಮ ರಾಷ್ಟ್ರಗೀತೆ ಅಷ್ಟೊಂದು ಅದ್ಭುತ ವಾಗಿದೆ’ ಎಂದು ನೆಸ್‌ ವಾಡಿಯಾ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ