ರಾಷ್ಟ್ರೀಯ ವಾಲಿಬಾಲ್; ಮಹಿಳಾ ವಿಭಾಗದಲ್ಲಿ ಕೇರಳ ಪೊಲೀಸ್ ತಂಡ ಚಾಂಪಿಯನ್
Team Udayavani, May 8, 2022, 10:58 PM IST
ಸುಳ್ಯ : ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದ ಮಹಿಳಾ ವಿಭಾಗದಲ್ಲಿ ಕೇರಳ ಪೊಲೀಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ರವಿವಾರ ನಡೆದ ಫೈನಲ್ನಲ್ಲಿ ಕೇರಳ ಪೊಲೀಸ್ ತಂಡವು ಎಸ್ಆರ್ಎಂ ಚೆನ್ನೈ ತಂಡವನ್ನು ನೇರ ಸೆಟ್ಗಳಿಂದ(25-21, 25-18, 25-16) ಪರಾಭವಗೊಳಿಸಿ ಜಯ ಗಳಿಸಿದೆ.
ಮಹಿಳಾ ವಿಭಾಗದಲ್ಲಿ ಎಸ್ಆರ್ಎಂ ಚೆನ್ನೈ ರನ್ನರ್ ಅಪ್ ಆಗಿ ಹೊರ ಹೊಮ್ಮಿದರೆ, ಐಸಿಎಫ್ ಚೆನ್ನೈ ಮೂರನೇ ಸ್ಥಾನ ಹಾಗು ಕರ್ನಾಟಕ ಕ್ಲಬ್ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾಗೆ ಜ್ವರ; ಆಸ್ಪತ್ರೆಗೆ ದಾಖಲು