ಭುವಿ, ಸಹಾಗೆ ಚಿಕಿತ್ಸೆ ನೀಡಲು ವಿಫ‌ಲ; ಎನ್‌ಸಿಎನಲ್ಲಿ ವೈದ್ಯಕೀಯ ಮಂಡಳಿ ಸ್ಥಾಪನೆ


Team Udayavani, Jan 3, 2020, 3:33 PM IST

NCA

ನವದೆಹಲಿ: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಯಲ್ಲಿನ ಸುಧಾರಣೆಗೆ ಬಿಸಿಸಿಐ ಬಲವಾದ ಹೆಜ್ಜೆಯಿಟ್ಟಿದೆ.

ವೇಗಿ ಭುವನೇಶ್ವರ್‌ ಕುಮಾರ್‌, ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಹಾ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ವಿಫ‌ಲವಾಗಿರುವ ಆರೋಪ ಎದುರಿಸುತ್ತಿರುವ ಎನ್‌ ಸಿಎಗೆ,ಪ್ರತ್ಯೇಕ ವೈದ್ಯಕೀಯ ಮಂಡಳಿಯನ್ನು ಒದಗಿಸಲು ಬಿಸಿಸಿಐ ನಿರ್ಧರಿಸಿದೆ. ಮುಂದಿನ 18 ತಿಂಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಮುಗಿಸಲು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ನಿರ್ಧರಿಸಿದ್ದಾರೆ.

ಎನ್‌ಸಿಎನಲ್ಲಿ ಸೂಕ್ತ ವೈದ್ಯಕೀಯ ಮಂಡಳಿ ನೆಲೆಗೊಳಿಸಲು, ಬಿಸಿಸಿಐ ಇಂಗ್ಲೆಂಡ್‌ನ‌ ಲಂಡನ್‌ ಮೂಲದ ಫೋರ್ಟಿಯಸ್‌  ಆಸ್ಪತ್ರೆಯನ್ನು ಸಂಪರ್ಕಿಸಲು ತೀರ್ಮಾನಿಸಿದೆ. ಇದರ ಜೊತೆಗೆ ವೇಗದ ಬೌಲಿಂಗ್‌ ಮುಖ್ಯ ತರಬೇತುದಾರ, ಪೌಷ್ಟಿಕ ಆಹಾರವನ್ನು ನಿರ್ಧರಿಸಲು ಒಬ್ಬ ಮುಖ್ಯಸ್ಥ, ಎನ್‌ಸಿಎ ವಿಚಾರಗಳನ್ನು ಸಾಮಾಜಿಕ ತಾಣಗಳಿಗೆ ತಲುಪಿಸಲು ಒಬ್ಬ ಮುಖ್ಯಸ್ಥರನ್ನು ನೇಮಿಸಲಾಗುವುದು ತಿಳಿಸಲಾಗಿದೆ.

ಎನ್‌ ಸಿಎನಲ್ಲಿ ದೋಷವಿದೆ ಎಂಬ ಎಲ್ಲ ವರದಿ, ಟೀಕೆಗಳ ಹೊರತಾ ಗಿಯೂ ಸೌರವ್‌ ಗಂಗೂಲಿ, ಎನ್‌ಸಿಎಗೆ ತೆರಳಿಯೇ ಬಿಸಿಸಿಐ ಗುತ್ತಿಗೆ ಹೊಂದಿರುವ ಭಾರತೀಯ ಕ್ರಿಕೆಟಿಗರು ಚಿಕಿತ್ಸೆಗೊಳಗಾಗಬೇಕು ತಿಳಿಸಿದ್ದಾರೆ. ಇದಕ್ಕೂ ಮುನ್ನ ಎನ್‌ಸಿಎ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಜೊತೆ ವಿವರವಾಗಿ ಚರ್ಚಿಸಿದ್ದಾರೆ.

ವಿವಾದವೇನು?
ವೇಗಿ ಭುವನೇಶ್ವರ್‌ ಕುಮಾರ್‌ಗೆ ತೊಡೆಸಂದಿಯಲ್ಲಿ ಹರ್ನಿಯಾ ಇದ್ದಿದ್ದನ್ನು ಪತ್ತೆಹಚ್ಚಲು ಎನ್‌ಸಿಎ ವೈದ್ಯರು ವಿಫ‌ಲರಾಗಿದ್ದರು. ಅವರು ಸುಧಾರಿಸಿ ಕೊಂಡಿದ್ದಾರೆಂದು ವೈದ್ಯರು ಘೋಷಿಸಿದ ನಂತರ, ಭುವನೇಶ್ವರ್‌ ಮತ್ತೆ ಬೌಲಿಂಗ್‌ ಆರಂಭಿಸಿ ಎರಡೇ ಪಂದ್ಯಕ್ಕೆ ಗಾಯಗೊಂಡು ವಿಶ್ರಾಂತಿಗೆ ತೆರಳಿದ್ದಾರೆ. ಇದರಿಂದ ಎನ್‌ಸಿಎ ಭಾರೀ ಟೀಕೆಗೊಳಪಟ್ಟಿತ್ತು.

ಅದಕ್ಕೂ ಮುನ್ನ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸುಧಾರಣೆ ಮಾಡುವಲ್ಲೂ ವಿಫ‌ಲವಾಗಿತ್ತು. ಇದರಿಂದ ಹೆದರಿದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ, ವೇಗಿ ಜಸ್ಪ್ರೀತ್ ಬುಮ್ರಾ ತಾವು ಎನ್‌ಸಿಎನಲ್ಲಿ ಚಿಕಿತ್ಸೆಗೊಳಗಾಗಲು ನಿರಾಕರಿಸಿದರು. ಲಂಡನ್‌ ವೈದ್ಯರಿಂದ ಖಾಸಗಿಯಾಗಿ ಚಿಕಿತ್ಸೆ ಪಡೆದರು. ಇದರಿಂದ ಎನ್‌ಸಿಎ ಸಿಬ್ಬಂದಿ ಮುಜುಗರಕ್ಕೊಳಗಾದರು.

ಈ ಸಂದರ್ಭದಲ್ಲಿ ಬುಮ್ರಾರನ್ನು ಅಂತಿಮಪರೀಕ್ಷೆಗೊಳಪಡಿಸಿ ಪ್ರಮಾಣಪತ್ರ ನೀಡಲು, ಈಗಷ್ಟೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿರುವ ರಾಹುಲ್‌ ದ್ರಾವಿಡ್‌ ಕೂಡ ನಿರಾಕರಿಸಿದರು. ಇವೆಲ್ಲ ಘಟನೆಗಳ ಪರಿಣಾಮ ವೈದ್ಯಕೀಯ ನೇಮಕ ಮಾಡಲು ಬಿಸಿಸಿಐ ನಿರ್ಧರಿಸುವಲ್ಲಿ ಮುಕ್ತಾಯವಾಗಿದೆ

ಟಾಪ್ ನ್ಯೂಸ್

accident

ಅಪಘಾತ: ಪುತ್ರ‌ನ ಮದುವೆಗೆ ಆಮಂತ್ರಿಸಲು ಹೋದ ದಂಪತಿ ದುರ್ಮರಣ

Online

ಟೆಕ್ಕಿಗಳ ಪ್ರಯತ್ನಕ್ಕೆ ಆನ್‌ಲೈನ್‌ ಸಪೋರ್ಟ್‌

1-fdssdf

ರೌಡಿ ಹಿನ್ನಲೆ, ತೆರಿಗೆ ಕಳ್ಳರೇ ಡಿಕೆಶಿ ಆಯ್ಕೆ : ಬಿಜೆಪಿಯಿಂದ ಟ್ವೀಟ್ ಆಸ್ತ್ರಗಳ ಪ್ರಯೋಗ

ಘೀಳಿಡಲು ರೆಡಿಯಾದ ಮದಗಜ; 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ

ಘೀಳಿಡಲು ರೆಡಿಯಾದ ಮದಗಜ; 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ

covid-1

ಒಮಿಕ್ರಾನ್: ಅಮೆರಿಕಾದಲ್ಲಿ ರೂಪಾಂತರಿ ಮೊದಲ ಪ್ರಕರಣ ವರದಿ

ದೇವೇಗೌಡ

ಡಿ.13ಕ್ಕೆ ಎಚ್‌ಡಿಡಿ ಆತ್ಮ ಚರಿತ್ರೆ ಬಿಡುಗಡೆ

ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ 2ನೇ ಮದುವೆಯಾಗಿ ಅವಳನ್ನೂ ಕೊಂದೇ ಬಿಟ್ಟ

ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ 2ನೇ ಮದುವೆಯಾಗಿ ಅವಳನ್ನೂ ಕೊಂದೇ ಬಿಟ್ಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್‌ ಆತಿಥ್ಯ

ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್‌ ಆತಿಥ್ಯ

ಬೆಂಗಳೂರು ಬುಲ್ಸ್‌-ಮುಂಬಾ ಪ್ರೊ ಕಬಡ್ಡಿ ಉದ್ಘಾಟನಾ ಪಂದ್ಯ

ಬೆಂಗಳೂರು ಬುಲ್ಸ್‌-ಮುಂಬಾ ಪ್ರೊ ಕಬಡ್ಡಿ ಉದ್ಘಾಟನಾ ಪಂದ್ಯ

ಸಿಂಧು, ಶ್ರೀಕಾಂತ್‌ ಗೆಲುವಿನ ಆರಂಭ

ಸಿಂಧು, ಶ್ರೀಕಾಂತ್‌ ಗೆಲುವಿನ ಆರಂಭ

ಏಶ್ಯನ್‌ ಸ್ಕ್ವಾ ಷ್‌: ಪಾಕಿಸ್ಥಾನವನ್ನು 2-1ರಿಂದ ಮಣಿಸಿದ ಭಾರತ

ಏಶ್ಯನ್‌ ಸ್ಕ್ವಾ ಷ್‌: ಪಾಕಿಸ್ಥಾನವನ್ನು 2-1ರಿಂದ ಮಣಿಸಿದ ಭಾರತ

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

MUST WATCH

udayavani youtube

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ : ಗೋಪಾಲ ಕೃಷ್ಣ

udayavani youtube

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್!

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

ಹೊಸ ಸೇರ್ಪಡೆ

ನಿಸರ್ಗ ಚಿಕಿತ್ಸೆ ದುಬಾರಿ ಅಲ್ಲವೇ ಅಲ್ಲ.. : ನಿಸರ್ಗ ಚಿಕಿತ್ಸೆ ಪಾರ್ಲರ್‌ ವೆಚ್ಚಕ್ಕಿಂತ ಕಡಿಮೆ

ನಿಸರ್ಗ ಚಿಕಿತ್ಸೆ ದುಬಾರಿ ಅಲ್ಲವೇ ಅಲ್ಲ.. ನಿಸರ್ಗ ಚಿಕಿತ್ಸೆ ಪಾರ್ಲರ್‌ ವೆಚ್ಚಕ್ಕಿಂತ ಕಡಿಮೆ

accident

ಅಪಘಾತ: ಪುತ್ರ‌ನ ಮದುವೆಗೆ ಆಮಂತ್ರಿಸಲು ಹೋದ ದಂಪತಿ ದುರ್ಮರಣ

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ

ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ

Online

ಟೆಕ್ಕಿಗಳ ಪ್ರಯತ್ನಕ್ಕೆ ಆನ್‌ಲೈನ್‌ ಸಪೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.