ಕಿವೀಸ್ ಪಿಚ್ ಗಳಲ್ಲಿದೆ ವಿಪರೀತ ವೇಗ ಮತ್ತು ಬೌನ್ಸ್: ಟೀಂ ಇಂಡಿಯಾಗೆ ವ್ಯಾಗ್ನರ್ ಸವಾಲು
Team Udayavani, Feb 27, 2020, 2:40 PM IST
ಕ್ರೈಸ್ಟ್ಚರ್ಚ್: ಪ್ರವಾಸಿ ಭಾರತಕ್ಕೆ ಕಿವೀಸ್ ಪಿಚ್ಗಳ ಸ್ಥಿತಿಗತಿ ತಿಳಿದಿಲ್ಲ ಎಂದು ನ್ಯೂಜಿಲ್ಯಾಂಡ್ ತಂಡಕ್ಕೆ ಮರಳಿದ ವೇಗಿ ನೀಲ್ ವ್ಯಾಗ್ನರ್ ಅಭಿಪ್ರಾಯಪಟ್ಟಿದ್ದಾರೆ.
ತಂದೆಯಾದ ಸಂಭ್ರಮದಲ್ಲಿದ್ದ ವ್ಯಾಗ್ನರ್ ಮೊದಲ ಟೆಸ್ಟ್ ಆಡಿರಲಿಲ್ಲ. ದ್ವಿತೀಯ ಟೆಸ್ಟ್ ಗೆ ಮರಳಿರುವ ವ್ಯಾಗ್ನರ್, ಭಾರತೀಯರಿಗೆ ಇಲ್ಲಿ ಬಂದು ಆಡುವುದು ನಿಜಕ್ಕೂ ಕಷ್ಟ. ಏಕೆಂದರೆ ಇಲ್ಲಿ ವೇಗ ಮತ್ತು ಬೌನ್ಸ್ ವಿಪರೀತವಾಗಿದೆ. ಭಾರತದ ಪಿಚ್ಗಳಲ್ಲಿ ಸ್ಪಿನ್ ಹಾಗೂ ತಿರುವು ಹೆಚ್ಚು. ಹೀಗಾಗಿ ಇಲ್ಲಿನ ಸ್ಥಿತಿಗೆ ಹೊಂದಿಕೊಳ್ಳುವುದೇ ಭಾರತಕ್ಕೊಂದು ಸವಾಲು. ಯಾವುದೇ ಪ್ರವಾಸದಲ್ಲಿ ತಂಡವೊಂದಕ್ಕೆ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಕನಿಷ್ಠ ಒಂದು ಪಂದ್ಯವಾದರೂ ಬೇಕಾಗುತ್ತದೆ. ಭಾರತ ದ್ವಿತೀಯ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ.
ಮಗಳು ಸ್ವಲ್ಪ ದಿನ ಮೊದಲೇ ಜನಿಸಿದ್ದರೆ ನಾನೂ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಭಾಗಿಯಾಗಿರುತ್ತಿದ್ದೆ’ ಎಂದೂ ನೀಲ್ ವ್ಯಾಗ್ನರ್ ತಮಾಷೆಯಾಗಿ ನುಡಿದರು.