ಪಂಜಾಬ್ ಕಿಂಗ್ಸ್ ತಂಡದಿಂದ ನೆಸ್ ವಾಡಿಯ ಹೊರಕ್ಕೆ?
Team Udayavani, Jul 27, 2019, 8:45 AM IST
ಮುಂಬೈ: ಪಂಜಾಬ್ ಕಿಂಗ್ಸ್ ಇಲೆವೆನ್ ಐಪಿಎಲ್ ತಂಡದ ಸಹ ಮಾಲಿಕ ನೆಸ್ ವಾಡಿಯ, ಮುಂದಿನ ಐಪಿಎಲ್ ವೇಳೆಗೆ ತಮ್ಮಷೇರನ್ನು ಬಿಟ್ಟುಕೊಡಲಿದ್ದಾರೆಯೇ? ಆಂಗ್ಲ ಪತ್ರಿಕೆಯೊಂದು ಇಂತಹ ಸಂಶಯವನ್ನು ವ್ಯಕ್ತಪಡಿಸಿದೆ.
ಇದುವರೆಗೆ ಐಪಿಎಲ್ 12 ಆವೃತ್ತಿಗಳನ್ನು ಮುಗಿಸಿದೆ. ಅಷ್ಟೂ ಆವೃತ್ತಿಯಲ್ಲಿ ನೆಸ್ ವಾಡಿಯ ಪಂಜಾಬ್ ತಂಡದ ಮಾಲಿಕರಲ್ಲಿ ಒಬ್ಬರಾಗಿದ್ದರು. ಇದೀಗ ಅವರು ಫ್ರಾಂಚೈಸಿಯೊಂದಿಗೆ ಸಂಬಂಧ ಕಡಿದುಕೊಳ್ಳಲು ಬಯಸಿದ್ದಾರೆ. ಈ ಬೆಳವಣಿಗೆಗೆ ಅವರ ಕುಟುಂಬದ ಒತ್ತಾಯವೇ ಕಾರಣ ಎನ್ನಲಾಗಿದೆ. ಕಿಂಗ್ಸ್ ಪಂಜಾಬ್ ತಂಡದಲ್ಲಿ ನೆಸ್ ವಾಡಿಯ ಷೇರು ಶೇ.23ರಷ್ಟಿದ್ದರೆ, ಬಾಲಿವುಡ್ ನಟಿ ಪ್ರೀತಿ ಜಿಂಟಾ ಶೇ.23ರಷ್ಟು ಷೇರು ಹೊಂದಿದ್ದಾರೆ. ಬರ್ಮನ್ ಸಮೂಹ ಶೇ.46ರಷ್ಟು ಪಾಲನ್ನು ಹೊಂದಿದೆ. ಇನ್ನುಳಿದ ಶೇ.8ರಷ್ಟನ್ನು ಇನ್ನೊಬ್ಬರು ಹೊಂದಿದ್ದಾರೆ. ಪ್ರಸ್ತುತ ನೆಸ್
ಐಪಿಎಲ್ನಿಂದ ಹೊರಹೋಗಲು ಮನಸ್ಸು ಮಾಡಿದ್ದರೂ, ಪ್ರೀತಿ ಜಿಂಟಾ ಹಾಗೂ ಬರ್ಮನ್ ಸಮೂಹ ಈ ಸಂಬಂಧವನ್ನು ಕಡಿದುಕೊಳ್ಳುವ ಮನಸ್ಸು ಹೊಂದಿಲ್ಲ.
ಆದ್ದರಿಂದ ಮುಂದಿನ ಐಪಿಎಲ್ ಹೊತ್ತಿಗೆ ಕಿಂಗ್ಸ್ ಪಂಜಾಬ್ ತಂಡ ಇನ್ನೊಬ್ಬ ಸಹ ಮಾಲಿಕನನ್ನು ಹುಡುಕಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ