Udayavni Special

ದ ಹಂಡ್ರೆಡ್‌ ಇದು 100 ಎಸೆತಗಳ ಕ್ರಿಕೆಟ್‌!


Team Udayavani, Jul 25, 2018, 6:00 AM IST

20.jpg

ಲಂಡನ್‌: ಟಿ20 ಕ್ರಿಕೆಟ್‌ ಏಕದಿನಗಿಂತ ಹೆಚ್ಚು ಮನೋರಂಜನೆ ನೀಡಿತ್ತು. ಇದೀಗ ಟಿ20 ಕ್ರಿಕೆಟ್‌ಗಿಂತ ಹೆಚ್ಚು ಅಭಿಮಾನಿಗಳನ್ನು ರಂಜಿಸಲು ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಸಿದ್ಧತೆ ನಡೆಸಿದೆ. ಇದಕ್ಕಾಗಿ 100 ಎಸೆತಗಳ “ದ ಹಂಡ್ರೆಡ್‌’ ಕ್ರಿಕೆಟ್‌ ಪಂದ್ಯಾವಳಿಯನ್ನು ನಡೆಸಲು ಯೋಜನೆಗಳನ್ನು ರೂಪಿಸುತ್ತಿದೆ. 

ಪ್ರಾಯೋಗಿಕವಾಗಿ ಆರಂಭ
100 ಎಸೆತಗಳ ಈ ಕ್ರಿಕೆಟ್‌ ಪಂದ್ಯವನ್ನು ಪ್ರಾಯೋಗಿಕವಾಗಿ ಆರಂಭಿಸಲು ಇಸಿಬಿ ನಿರ್ಧರಿಸಿದ್ದು, ಮೂಲಗಳ ಪ್ರಕಾರ ಒಂದು ತಂಡದಲ್ಲಿ ತಲಾ 12 ಆಟಗಾರರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಹಾಗೆಯೇ 6 ಎಸೆತಗಳ ಬದಲು 5 ಎಸೆತಗಳ ಓವರ್‌ಗಳನ್ನು ಅಳವಡಿಸಲಾಗುವುದು. ಆದರೆ ಇದಿನ್ನೂ ಅಧಿಕೃತಗೊಂಡಿಲ್ಲ.

“ಸೂಪರ್‌ ಸಬ್‌’ ಬಳಕೆ?
ತಂಡವೊಂದು ಒಟ್ಟು 11 ಆಟಗಾರರು ಮತ್ತು ಓರ್ವ “ಸೂಪರ್‌ ಸಬ್‌’ ವಿಶೇಷ ಆಟಗಾರನನ್ನು ಒಳಗೊಂಡಿರುತ್ತದೆ. ತಂಡದ ನಾಯಕ ಪಿಚ್‌, ವಾತಾವರಣ ನೋಡಿಕೊಂಡು ಹೆಚ್ಚುವರಿ ಬ್ಯಾಟ್ಸ್‌ಮನ್‌ ಅಥವಾ ಬೌಲರ್‌ ಒಬ್ಬನನ್ನು ಆಯ್ಕೆ ಮಾಡಿಕೊಳ್ಳಬಹುದು. ಸಂದರ್ಭ ನೋಡಿಕೊಂಡು ಆತನ ಉಪಯೋಗ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ. 2005ರಲ್ಲಿಯೇ ಐಸಿಸಿ “ಸೂಪರ್‌ ಸಬ್‌’ ಪ್ರಯೋಗ ಮಾಡಿತ್ತು. ಬ್ಯಾಟ್ಸ್‌ಮನ್‌, ಬೌಲಿಂಗ್‌, ವಿಕೆಟ್‌ ಕೀಪಿಂಗ್‌, ಫೀಲ್ಡಿಂಗ್‌ ನಡೆಸುವ ವಿಶೇಷ ಅಧಿಕಾರವನ್ನು ಒಬ್ಬ ಆಟಗಾರ ಪಡೆದುಕೊಂಡಿದ್ದ. ಇಂತಹ ವಿಶೇಷ ಆಯ್ಕೆ ಟಾಸ್‌ ಗೆದ್ದ ತಂಡಕ್ಕೆ ಹೆಚ್ಚಿನ ಲಾಭ ತಂದುಕೊಡುತ್ತಿತ್ತು. ಇದು  ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದರಿಂದಾಗಿ ಐಸಿಸಿ ಸೂಪರ್‌ ಸಬ್‌ ಪ್ರಯೋಗವನ್ನು ಅರ್ಧಕ್ಕೆ ಕೈಬಿಡಬೇಕಾಯಿತು. ಈಗ ಇದು ಮರುಜೀವ ಪಡೆಯುವ ಸಾಧ್ಯತೆ ಇದೆ.

10 ಎಸೆತಗಳ ಸೂಪರ್‌ ಓವರ್‌?!
“ದ ಹಂಡ್ರೆಡ್‌’ ಕ್ರಿಕೆಟ್‌ನಲ್ಲಿ ಭಾಗವಹಿಸುವ ತಂಡವೊಂದರಲ್ಲಿ ಹನ್ನೊಂದರ ಬದಲು 12 ಆಟಗಾರರಿಗೆ ಅವಕಾಶ ಕಲ್ಪಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ 6 ಎಸೆತಗಳ ಓವರ್‌ ಬದಲು 5 ಎಸೆತಗಳ ಓವರ್‌ ಜಾರಿಗೆ ತರಲು ಯೋಚಿಸಲಾಗುತ್ತಿದೆ. ಆರಂಭದಲ್ಲಿ, ತಲಾ 6 ಎಸೆತಗಳ 15 ಓವರ್‌ (90 ಎಸೆತ) ಬಳಿಕ ಕೊನೆಯಲ್ಲಿ 10 ಎಸೆತಗಳ ಒಂದು “ಸೂಪರ್‌ ಓವರ್‌’ ಯೋಜನೆ ಕೂಡ ಸುದ್ದಿಯಲ್ಲಿತ್ತು. ಈ ಕುರಿತಂತೆ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಟಾಪ್ ನ್ಯೂಸ್

3 ತಿಂಗಳಿಂದ ಸಿಕ್ಕಿಲ್ಲ ವೇತನ! :  ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ

3 ತಿಂಗಳಿಂದ ಸಿಕ್ಕಿಲ್ಲ ವೇತನ! :  ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

fgfgjhgjkhgf

ಇಂದಿನಿಂದ IPL ಎರಡನೇ ಇನ್ನಿಂಗ್ಸ್ ಆರಂಭ : ಮುಂಬೈ-ಚೆನ್ನೈ ಜಟಾಪಟಿ

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fgfgjhgjkhgf

ಇಂದಿನಿಂದ IPL ಎರಡನೇ ಇನ್ನಿಂಗ್ಸ್ ಆರಂಭ : ಮುಂಬೈ-ಚೆನ್ನೈ ಜಟಾಪಟಿ

ಖೇಲ್‌ರತ್ನಕ್ಕೆ ನಾಲ್ವರು ಪ್ಯಾರಾ ಆ್ಯತ್ಲೀಟ್‌ಗಳ ಹೆಸರು ಶಿಫಾರಸು

ಖೇಲ್‌ರತ್ನಕ್ಕೆ ನಾಲ್ವರು ಪ್ಯಾರಾ ಆ್ಯತ್ಲೀಟ್‌ಗಳ ಹೆಸರು ಶಿಫಾರಸು

ಟಿ20 ನಾಯಕನಾಗಿ ವಿರಾಟ್ ಕೊಹ್ಲಿ ಮುಂದುವರಿಯಬೇಕಿತ್ತು: ಶಾರ್ದೂಲ್ ಠಾಕೂರ್

ಟಿ20 ನಾಯಕನಾಗಿ ವಿರಾಟ್ ಕೊಹ್ಲಿ ಮುಂದುವರಿಯಬೇಕಿತ್ತು: ಶಾರ್ದೂಲ್ ಠಾಕೂರ್

ಮುಖ್ಯ ಕೋಚ್ ಕೆಲಸದಿಂದ ತೃಪ್ತಿಯಾಗಿದೆ, ಆದರೆ ಅಲ್ಪ ಬೇಸರವೂ ಇದೆ: ರವಿ ಶಾಸ್ತ್ರಿ

ಮುಖ್ಯ ಕೋಚ್ ಕೆಲಸದಿಂದ ತೃಪ್ತಿಯಾಗಿದೆ, ಆದರೆ ಅಲ್ಪ ಬೇಸರವೂ ಇದೆ: ರವಿ ಶಾಸ್ತ್ರಿ

ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ: ಮತ್ತೆ ಕನ್ನಡಿಗನಿಗೆ ಆಫರ್ ನೀಡಿದ ಬಿಸಿಸಿಐ

ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ: ಮತ್ತೆ ಕನ್ನಡಿಗನಿಗೆ ಆಫರ್ ನೀಡಿದ ಬಿಸಿಸಿಐ

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

3 ತಿಂಗಳಿಂದ ಸಿಕ್ಕಿಲ್ಲ ವೇತನ! :  ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ

3 ತಿಂಗಳಿಂದ ಸಿಕ್ಕಿಲ್ಲ ವೇತನ! :  ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

fgfgjhgjkhgf

ಇಂದಿನಿಂದ IPL ಎರಡನೇ ಇನ್ನಿಂಗ್ಸ್ ಆರಂಭ : ಮುಂಬೈ-ಚೆನ್ನೈ ಜಟಾಪಟಿ

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.