ಭಾರತ ಕ್ರಿಕೆಟ್ ಪ್ರವಾಸಕ್ಕೆ ನ್ಯೂಜಿಲ್ಯಾಂಡ್ “ಎ’ ತಂಡ ಪ್ರಕಟ
Team Udayavani, Aug 19, 2022, 11:20 PM IST
ವೆಲ್ಲಿಂಗ್ಟನ್: ಮುಂದಿನ ತಿಂಗಳು 3 ಚತುರ್ದಿನ ಪಂದ್ಯ ಹಾಗೂ 3 ಏಕದಿನ ಪಂದ್ಯಗಳನ್ನಾಡಲು ಭಾರತಕ್ಕೆ ಆಗಮಿಸಲಿರುವ ನ್ಯೂಜಿಲ್ಯಾಂಡ್ “ಎ’ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ 7 ಆಟಗಾರರಿದ್ದಾರೆ.
ಇದು 2018ರ ಬಳಿಕ ನ್ಯೂಜಿಲ್ಯಾಂಡ್ “ಎ’ ತಂಡ ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸ. ಹಾಗೆಯೇ 2017ರ ಬಳಿಕ ಮೊದಲ ಸಲ ಭಾರತಕ್ಕೆ ಆಗಮಿಸುತ್ತಿದೆ.
ಬೆಂಗಳೂರಿನಲ್ಲಿ ಮೂರು ಪಂದ್ಯ
ಚತುರ್ದಿನ ಪಂದ್ಯಗಳನ್ನು ಬೆಂಗಳೂರಿನಲ್ಲಿ (ಸೆ. 1-4, ಸೆ. 8-11, ಸೆ. 15-18) ಮತ್ತು ಏಕದಿನ ಪಂದ್ಯಗಳನ್ನು ಚೆನ್ನೈಯಲ್ಲಿ ಆಡಲಾಗುವುದು (ಸೆ. 22, ಸೆ. 25,ಸೆ. 27).
ನ್ಯೂಜಿಲ್ಯಾಂಡ್ “ಎ’ ತಂಡ: ರಾಬ್ಬಿ ಒ’ಡೊನೆಲ್, ಟಾಮ್ ಬ್ರೂಸ್, ಜೋ ಕಾರ್ಟರ್, ಕ್ಯಾಡ್ ಬೌಸ್, ಮಾರ್ಕ್ ಚಾಪ್ಮನ್, ಜೇಕಬ್ ಡಫಿ, ಡೇನ್ ಕ್ಲೀವರ್, ಮ್ಯಾಟ್ ಫಿಶರ್, ಕ್ಯಾಮರಾನ್ ಫ್ಲೆಚರ್, ಬೆನ್ ಲಿಸ್ಟರ್, ಮೈಕಲ್ ರಿಪ್ಪೋನ್, ರಚಿನ್ ರವೀಂದ್ರ, ಸೀನ್ ಸೋಲಿಯ, ಜೋ ವಾಕರ್, ಲಾರ್ಗನ್ ವಾನ್ ಬೀಕ್.