ಬೌಲರ್‌ಗಳ ಮೆರೆದಾಟ; ನಿಕೋಲ್ಸ್‌  ಶತಕದಾಟ


Team Udayavani, Mar 17, 2017, 10:38 AM IST

AP3_16_2017_000013B.jpg

ವೆಲ್ಲಿಂಗ್ಟನ್‌: ಗುರುವಾರ ಮೊದಲ್ಗೊಂಡ ನ್ಯೂಜಿಲ್ಯಾಂಡ್‌-ದಕ್ಷಿಣ ಆಫ್ರಿಕಾ ನಡುವಿನ ವೆಲ್ಲಿಂಗ್ಟನ್‌ ಟೆಸ್ಟ್‌ ಪಂದ್ಯದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನವೇ ಒಟ್ಟು 14 ವಿಕೆಟ್‌ ಉರುಳಿದ್ದು, ಇದರ ನಡುವೆ ಕಿವೀಸ್‌ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ಹೆನ್ರಿ ನಿಕೋಲ್ಸ್‌ ಚೊಚ್ಚಲ ಶತಕ ಬಾರಿಸಿ ಮೆರೆದಿದ್ದಾರೆ.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿ ಲ್ಯಾಂಡ್‌ 268 ರನ್ನಿಗೆ ಆಲೌಟಾಗಿದ್ದು, ದಕ್ಷಿಣ ಆಫ್ರಿಕಾ 24 ರನ್‌ ಮಾಡುವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಕಳೆದುಕೊಂಡು ಸಂಕಟಕ್ಕೆ ಸಿಲುಕಿದೆ. 47ಕ್ಕೆ 4 ವಿಕೆಟ್‌ ಕಿತ್ತು ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶಿಸಿದ ಜೆಪಿ ಡ್ಯುಮಿನಿ, ಪ್ರವಾಸಿಗರ ಬೌಲಿಂಗ್‌ ದಾಳಿಯನ್ನು ಮೆಟ್ಟಿನಿಂತು 118 ರನ್‌ ಬಾರಿಸಿದ ನಿಕೋಲ್ಸ್‌ ದಿನದ ಹೀರೋಗಳಾಗಿ ಮೂಡಿಬಂದರು.

ದಾಖಲೆ ಜತೆಯಾಟ
ಲ್ಯಾಥಂ (8), ವಿಲಿಯಮ್ಸನ್‌ (2) ಮತ್ತು ಬ್ರೂಮ್‌ (0) ಅವರನ್ನು 21 ರನ್‌ ಆಗುವಷ್ಟರಲ್ಲಿ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿದ ನ್ಯೂಜಿಲ್ಯಾಂಡ್‌ ಪಾಲಿಗೆ ಆಪದ್ಭಾಂಧವರಾದವರು ಹೆನ್ರಿನಿಕೋಲ್ಸ್‌. ಅವರಿಗೆ ಕೀಪರ್‌ ಬ್ರಾಡ್ಲಿ ವಾಟಿÉಂಗ್‌ (34) ಉತ್ತಮ ಬೆಂಬಲ ವಿತ್ತರು. 101ಕ್ಕೆ 5 ವಿಕೆಟ್‌ ಬಿದ್ದ ವೇಳೆ ಜತೆಗೂಡಿದ ಇವರು 6ನೇ ವಿಕೆಟಿಗೆ 116 ರನ್‌ ಪೇರಿಸಿ ತಂಡವನ್ನು ಮೇಲೆತ್ತಿದರು. ಇದು ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್‌ 6ನೇ ವಿಕೆಟಿಗೆ ದಾಖ ಲಿಸಿದ ಅತ್ಯುತ್ತಮ ಜತೆಯಾಟ ವಾಗಿದೆ. ಇದರೊಂದಿಗೆ ಟೆಡ್‌ ಬ್ಯಾಡ್‌ಕಾಕ್‌-ಜಿಫ್ ವಿವಿಯನ್‌ 1932ರಷ್ಟು ಹಿಂದೆ ಪೇರಿಸಿದ 100 ರನ್‌ ದಾಖಲೆ ಮುರಿಯಲ್ಪಟ್ಟಿತು.

ನಿಕೋಲ್ಸ್‌ ಅವರ 118 ರನ್‌ 161 ಎಸೆತಗಳಲ್ಲಿ ದಾಖಲಾಯಿತು. ಇದರಲ್ಲಿ 15 ಬೌಂಡರಿ ಒಳಗೊಂಡಿತ್ತು. ಕೊನೆಯ ಹಂತದಲ್ಲಿ ಸೌಥಿ (27) ಮತ್ತು ಪಟೇಲ್‌ (ಔಟಾಗದೆ 17) ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು. ದಕ್ಷಿಣ ಆಫ್ರಿಕಾಕ್ಕೂ ಬೌಲಿಂಗ್‌ ಬಿಸಿ ತಟ್ಟಿದ್ದು, ಆರಂಭಿಕರಾದ ಸ್ಟೀಫ‌ನ್‌ ಕುಕ್‌ (3) ಮತ್ತು ಡೀನ್‌ ಎಲ್ಗರ್‌ (9) 12 ರನ್‌ ಆಗಿದ್ದಾಗ ಒಟ್ಟೊಟ್ಟಿಗೆ ಪೆವಿಲಿಯನ್‌ ಸೇರಿಕೊಂಡಿದ್ದಾರೆ. 

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-268 (ನಿಕೋಲ್ಸ್‌ 118, ರಾವಲ್‌ 36, ವಾಟಿÉಂಗ್‌ 34, ಡ್ಯುಮಿನಿ 47ಕ್ಕೆ 4, ಮಹಾರಾಜ್‌ 47ಕ್ಕೆ 2, ರಬಾಡ 59ಕ್ಕೆ 2, ಮಾರ್ಕೆಲ್‌ 82ಕ್ಕೆ 2). ದಕ್ಷಿಣ ಆಫ್ರಿಕಾ-2 ವಿಕೆಟಿಗೆ 24.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.