Udayavni Special

ನ್ಯೂಜಿಲ್ಯಾಂಡ್‌ ಓಪನ್‌ ಬ್ಯಾಡ್ಮಿಂಟನ್‌ ಪ್ರಣಯ್‌, ಕಶ್ಯಪ್‌ ಮುನ್ನಡೆ

Team Udayavani, Aug 2, 2017, 8:20 AM IST

kashyap.jpg

ಆಕ್ಲೆಂಡ್‌: ನ್ಯೂಜಿಲ್ಯಾಂಡ್‌ ಓಪನ್‌ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ ನಲ್ಲಿ ಭಾರತದ ಎಚ್‌.ಎಸ್‌. ಪ್ರಣಯ್‌ ಮತ್ತು ಪಾರುಪಳ್ಳಿ ಕಶ್ಯಪ್‌ ಗೆಲುವಿನ ಆರಂಭ ಕಂಡುಕೊಂಡಿದ್ದಾರೆ. ಆದರೆ ಅಜಯ್‌ ಜಯರಾಮ್‌ ಮೊದಲ ಸುತ್ತಿನಲ್ಲೇ ಪರಾಭವಗೊಂಡಿದ್ದಾರೆ.

ಇತ್ತೀಚೆಗಷ್ಟೇ ಯುಎಸ್‌ ಓಪನ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಜಯಿಸಿದ್ದ 4ನೇ ಶ್ರೇಯಾಂಕದ ಪ್ರಣಯ್‌ ಇಂಡೋನೇಶ್ಯದ ಶೆಸರ್‌ ಹಿರೆನ್‌ ರುಸ್ಟಾವಿಟೊ ಅವರನ್ನು 21-14, 21-16 ಅಂತರದಿಂದ ಸೋಲಿಸಿದರು. ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌, 15ನೇ ಶ್ರೇಯಾಂಕಿತ ಕಶ್ಯಪ್‌ ಕೂಡ ಇಂಡೋನೇಶ್ಯ ಆಟಗಾರನನ್ನೇ ಮಣಿಸಿ ಮುನ್ನಡೆದರು. ಕಶ್ಯಪ್‌ಗೆ ಶರಣಾದವರು ದಿಯೊನಿಸಿಯುಸ್‌ ಹಯೋಮ್‌ ರುಂಬಾಕ. ಗೆಲುವಿನ ಅಂತರ 21-5, 21-10. 

ಬುಧವಾರದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಪ್ರಣಯ್‌ ಇಂಡೋ ನೇಶ್ಯದ ಫಿರ್ಮಾನ್‌ ಅಬ್ದುಲ್‌ ಖೋಲಿಕ್‌ ವಿರುದ್ಧ ಹಾಗೂ ಕಶ್ಯಪ್‌ ನ್ಯೂಜಿಲ್ಯಾಂಡಿನ ಆಸ್ಕರ್‌ ಗುವೊ ವಿರುದ್ಧ ಸೆಣಸಲಿದ್ದಾರೆ. 

ಭಾರತದ ಯುವ ಆಟಗಾರರಾದ ಸಿರಿಲ್‌ ವರ್ಮ, ಪ್ರತುಲ್‌ ಜೋಶಿ, ಸೌರಭ್‌ ವರ್ಮ, ನೀರಜ್‌ ವಶಿಷ್ಠ ಮತ್ತು ಸಾಹಿಲ್‌ ಸಿಪಾನಿ ಕೂಡ ಗೆಲುವಿನ ಆರಂಭ ಕಂಡು ಕೊಂಡಿದ್ದಾರೆ.

7ನೇ ಶ್ರೇಯಾಂಕದ ಸೌರಭ್‌ ಆಸ್ಟ್ರೇಲಿಯದ ನಥನ್‌ ಟಾಂಗ್‌ ಅವರನ್ನು 21-17, 21-15ರಿಂದ, 16ನೇ ಶ್ರೇಯಾಂಕದ ಸಿರಿಲ್‌ ಇಂಡೋನೇಶ್ಯದ ರಿಯಾಂತೊ ಸುಬಗj ಅವರನ್ನು 21-13, 21-12ರಿಂದ, ಪ್ರತುಲ್‌ ನ್ಯೂಜಿ ಲ್ಯಾಂಡಿನ ಡಾಕ್ಸನ್‌ ವೊಂಗ್‌ ಅವರನ್ನು 21-10, 21-13ರಿಂದ, ನೀರಜ್‌ ಇಂಡೋನೇಶ್ಯದ ಆಂಡ್ರೊ ಯುನಾಂಟೊ ಅವರನ್ನು 21-8, 21-9ರಿಂದ, ಸಾಹಿಲ್‌ ನ್ಯೂಜಿ ಲ್ಯಾಂಡಿನ ಮತ್ತೂಬ್ಬ ಶಟ್ಲರ್‌ ಜೋಶುವ ಫೆಂಗ್‌ ಅವರನ್ನು 21-10, 21-10 ಅಂತರದಿಂದ ಮಣಿಸಿದರು.

ಅಜಯ್‌ ಜಯರಾಮ್‌ ಪರಾಜಯ
ಅಜಯ್‌ ಜಯರಾಮ್‌ ಚೈನೀಸ್‌ ತೈಪೆಯ ಚಿಯ ಹುಂಗ್‌ ಲು ವಿರುದ್ಧ 19-21, 13-21 ಅಂತರದಿಂದ ಸೋಲನುಭವಿಸಬೇಕಾಯಿತು. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಉಳಿದ ಸ್ಪರ್ಧಿಗಳಾದ ಸಿದ್ಧಾರ್ಥ ಠಾಕೂರ್‌, ಸಚಿನ್‌ ರಾವಲ್‌, ಅರುಣ್‌ ಕುಮಾರ್‌, ಅಶೋಕ್‌ ಕುಮಾರ್‌ ಕೂಡ ಪರಾಭವಗೊಂಡಿದ್ದಾರೆ.

ವನಿತಾ ಸಿಂಗಲ್ಸ್‌ ಅರ್ಹತಾ ಸುತ್ತಿನ ದ್ವಿತೀಯ ಸುತ್ತಿನಲ್ಲಿ ಸಂಯೋಗಿತಾ ಘೋರ್ಪಡೆ ನ್ಯೂಜಿಲ್ಯಾಂಡಿನ ಕ್ಸಿ ಯೋಂಗಿÏ ವಿರುದ್ಧ 3 ಗೇಮ್‌ಗಳ ಕಾದಾಟದ ಬಳಿಕ ಶರಣಾದರು. ಸಂಯೋಗಿತಾ ಮೊದಲ ಸುತ್ತಿನಲ್ಲಿ ನ್ಯೂಜಿಲ್ಯಾಂಡಿನ ಜವಾಯಾ ವೆಕಿ ವಿರುದ್ಧ ಜಯ ಸಾಧಿಸಿದ್ದರು.

ಟಾಪ್ ನ್ಯೂಸ್

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

gvhfghftyt

ಭಾರತೀಯರ ಪ್ರಾಣದ ಜೊತೆ ಪಾಕ್ T-20 ಆಡುತ್ತಿದೆ : ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ  

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

virat kohli k l rahul ishan kishan

ಇಶಾನ್, ರಾಹುಲ್, ವಿರಾಟ್: ಟಿ20 ವಿಶ್ವಕಪ್ ನಲ್ಲಿ ಭಾರತದ ಆರಂಭಿಕ ಆಟಗಾರ ಯಾರು?

ms dhoni and n srinivasan

ಎಂ.ಎಸ್.ಧೋನಿ ಇಲ್ಲದ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲ: ಶ್ರೀನಿವಾಸನ್

ದ್ವಿತೀಯ ಪ್ರಯತ್ನದಲ್ಲಿ ಕಪ್‌ ಗೆದ್ದ ಪಾಕ್‌

ದ್ವಿತೀಯ ಪ್ರಯತ್ನದಲ್ಲಿ ಕಪ್‌ ಗೆದ್ದ ಪಾಕ್‌

ಸಯ್ಯದ್‌ ಮುಷ್ತಾಕ್‌ ಅಲಿ’ ಟಿ20: ರಹಾನೆ ಮುಂಬಯಿ ನಾಯಕ

ಸಯ್ಯದ್‌ ಮುಷ್ತಾಕ್‌ ಅಲಿ’ ಟಿ20: ರಹಾನೆ ಮುಂಬಯಿ ನಾಯಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

fhfcghftyt

ಕೆಟ್ಟು ನಿಂತ ಆಂಬ್ಯುಲೆನ್ಸ್‌  | ಮೈಮರೆತ ಕಿಮ್ಸ್‌  

Dr. Death of Geeta no more

ಖ್ಯಾತ ಪ್ರಸೂತಿ ತಜ್ಞೆ ಡಾ. ಗೀತಾ ಮುರಳೀಧರ ನಿಧನ

bhatkala news

ಕಾಲ್ನಡಿಗೆಯಲ್ಲಿ ಪ್ರಪಂಚ ಸುತ್ತಲು ಹೊರಟ ರೋಹನ್ ಅಗರ್‍ವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.