ICC T20 Rankings: ಅಗ್ರ ಸ್ಥಾನದಲ್ಲಿ ಕಾಲಿನ್‌ , ಐಶ್‌ ಸೋಧಿ

Team Udayavani, Jan 6, 2018, 6:15 AM IST

Colin-Munro-and-Ish-Sodhi.jpg

ವೆಲ್ಲಿಂಗ್ಟನ್‌: ಐಸಿಸಿ ಟಿ20  ರ್‍ಯಾಂಕಿಂಗ್‌ನ ಬೌಲರ್ ಮತ್ತು ಬ್ಯಾಟ್ಸ್‌ಮನ್‌ಗಳ ಸರದಿಯಲ್ಲಿ ನ್ಯೂಜಿಲ್ಯಾಂಡಿನ ಕಾಲಿನ್‌ ಮುನ್ರೊà ಮತ್ತು ಐಶ್‌ ಸೋಧಿ ಅಗ್ರಸ್ಥಾನಕ್ಕೇರಿದ್ದಾರೆ. ಇದೇ ವೇಳೆ ವೆಸ್ಟ್‌ ಇಂಡೀಸ್‌ ತಂಡವನ್ನು 2-0 ಅಂತರದಿಂದ ಮಣಿಸಿದ ನ್ಯೂಜಿಲ್ಯಾಂಡ್‌ ನಂಬರ್‌ ವನ್‌ ಸ್ಥಾನವನ್ನು ಮರಳಿ ಪಡೆದಿದೆ.

ಟಿ20 ಸರಣಿಯಲ್ಲಿ ಒಟ್ಟು 223 ರನ್‌ ಗಳಿಸುವ ಮೂಲಕ 137 ಅಂಕ ಪಡೆದ ಮುನ್ರೊà 11 ಸ್ಥಾನ ಮೇಲಕ್ಕೇರಿ ಇದೇ ಮೊದಲ ಬಾರಿ ಅಗ್ರ ಸ್ಥಾನಕ್ಕೆ ಏರಿದರು. ಅಗ್ರಸ್ಥಾನ ಪಡೆದಿರುವುದು ಆಶ್ಚರ್ಯ ತಂದಿದೆ. ಆದರೆ ಆ ಸ್ಥಾನವನ್ನು ಯಾರು ಬೇಕಾದರೂ ಪಡೆಯಬಹುದು. ಅಗ್ರಸ್ಥಾನ ಪಡೆಯುವುದು ನನ್ನ ಗುರಿಯಾಗಿತ್ತು ಮತ್ತು ಇದೀಗ ನಂ. 1 ಸ್ಥಾನ ದೊರೆತಿರುವ ಖುಷಿ ನನಗೆ ವಿಶೇಷವೆನಿಸಿದೆ’ ಎಂದು ಮುನ್ರೊà ಹೇಳಿದ್ದಾರೆ.

ಟಿ20 ಪಂದ್ಯಾವಳಿಯ ಮೊದಲ ಎರಡು ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿದ್ದ ಮುನ್ರೊà ಅಂತಿಮ ಪಂದ್ಯದಲ್ಲಿ 53 ಎಸೆತಗಳಲ್ಲಿ 104 ರನ್‌ ಪೇರಿಸಿದ್ದರು. ಅವರ ಈ ಶತಕದ ಸಾಧನೆಯಿಂದ ಟಿ20 ಪಂದ್ಯಾವಳಿಯಲ್ಲಿ ಮೂರು ಶತಕ ಪೂರೈಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಪಾತ್ರರಾದರು.

ಟಿ20 ವಿಶ್ವ ರ್‍ಯಾಂಕಿಂಗ್‌ನಲ್ಲಿ ಸೋಧಿ ಇದೇ ಮೊದಲ ಬಾರಿಗೆ ನಂ. 1 ಬೌಲರ್‌ ಆಗಿ ಗುರುತಿಸಿಕೊಂಡ ಖುಷಿ ಅನುಭವಿಸಿದ್ದಾರೆ. 18 ರನ್ನಿಗೆ 3 ವಿಕೆಟ್‌ ಪಡೆದ ಸಾಧನೆ ನೆರವಿನಿಂದ ಸೋಧಿ 10ನೇ ಸ್ಥಾನದಿಂದ ನಂ.1 ಸ್ಥಾನಕ್ಕೇರಿದ್ದಾರೆ. ಈ ಸರಣಿಯಲ್ಲಿ 70 ಅಂಕ ಗಳಿಸಿದ 25ರ ಹರೆಯದ ಸ್ಪಿನ್ನರ್‌ ಸೋಧಿ ಪಾಕಿಸ್ಥಾನದ ಇಮದ್‌ ವಾಸಿಮ್‌ ಅವರಿಂದ 7 ಅಂಕಗಳಿಂದ ಮುನ್ನಡೆಯಲ್ಲಿದ್ದಾರೆ.

“ನಂ. 1 ಸ್ಥಾನಕ್ಕೇರಿರುವುದಕ್ಕೆ ನಿಜಕ್ಕೂ ಖುಷಿಯೆನಿಸಿದೆ. ಇದು ಒಮ್ಮಲೇ ದೊರೆತ ಗೆಲುವಲ್ಲ. ಪ್ರತಿ ದಿನದ ಶ್ರಮದಿಂದ ಒದಗಿದ ಗೆಲುವಿದು. ದಾಳಿ ಮತ್ತು ರಕ್ಷಣೆ ನಡುವೆ ಉತ್ತಮ ಸಮತೋಲನ ಕಂಡುಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ ಮತ್ತು ಹೆಚ್ಚೆಚ್ಚು ಆಟ ಆಡುವ ಮೂಲಕ ಇದನ್ನು ಸಾಧಿಸಬಹುದು’ ಎಂದು ಸೋಧಿ ಹೇಳಿದ್ದಾರೆ.

ನ್ಯೂಜಿಲ್ಯಾಂಡ್‌ ಪರ ಡೇನಿಯಲ್‌ ವೆಟರಿ, ಶೇನ್‌ ಬಾಂಡ್‌ ಅವರ ಅನಂತರ ಸೋಧಿ ವಿಶ್ವದ ನಂ. 1 ಬೌಲರ್‌ ಎನಿಸಿಕೊಂಡ ಮೂರನೇ ಬೌಲರ್‌ ಆಗಿದ್ದಾರೆ.

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.