ಭಾರತಕ್ಕೆ 3-0ಯಿಂದ ವೈಟ್ವಾಷ್‌ ಸರಣಿ ಸೋಲು: ಮಹಿಳಾ ಪಡೆಗೆ ಅವಮಾನ


Team Udayavani, Feb 11, 2019, 2:06 AM IST

28.jpg

ಹ್ಯಾಮಿಲ್ಟನ್‌: ಆತಿಥೇಯ ನ್ಯೂಜಿಲೆಂಡ್‌ ಎದುರಿನ 3ನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಎರಡೇ ಎರಡು ರನ್‌ ಅಂತರದಿಂದ ಕಳೆದುಕೊಂಡ ಭಾರತದ ಮಹಿಳೆಯರು ವೈಟ್ವಾಷ್‌ ಅವಮಾನಕ್ಕೆ ಸಿಲುಕಿದ್ದಾರೆ. ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ಸಲುವಾಗಿ ದಿಟ್ಟ ಹೋರಾಟ ನಡೆಸಿದರೂ ಹರ್ಮನ್‌ಪ್ರೀತ್‌ ಪಡೆಗೆ ಅದೃಷ್ಟ ಕೈಕೊಟ್ಟಿತು. ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲೆಂಡ್‌ 7 ವಿಕೆಟಿಗೆ 161 ರನ್‌ ಪೇರಿಸಿದರೆ, ಭಾರತ 6 ವಿಕೆಟ್‌ಗಳನ್ನು ಕೈಯಲ್ಲಿ ಉಳಿಸಿಕೊಂಡೂ 159 ರನ್‌ ಹೊಡೆದು ಶರಣಾಯಿತು.

ಮಂಧನಾ ಜೀವನಶ್ರೇಷ್ಠ ಆಟ: ಭಾರತದ ಚೇಸಿಂಗ್‌ ವೇಳೆ ಎಡಗೈ ಆರಂಭಕಾರ್ತಿ ಸ್ಮತಿ ಮಂಧನಾ ಅಮೋಘ ಆಟವಾಡಿ 62 ಎಸೆತಗಳಿಂದ 86 ರನ್‌ ಬಾರಿಸಿ ಹೋರಾಟ ಜಾರಿಯಲ್ಲಿರಿಸಿದ್ದರು (12 ಬೌಂಡರಿ, 1 ಸಿಕ್ಸರ್‌). ಇದು ಅವರ ಜೀವನಶ್ರೇಷ್ಠ ಸಾಧನೆ. ಆದರೆ 16ನೇ ಓವರಿನಲ್ಲಿ 123 ರನ್‌ ಆದಾಗ ಮಂಧನಾ ಔಟಾಗುವುದರೊಂದಿಗೆ ನ್ಯೂಜಿಲೆಂಡ್‌ ಬೌಲರ್‌ಗಳು ನಿಯಂತ್ರಣ ಸಾಧಿಸತೊಡಗಿದರು. ಸರಣಿಯಲ್ಲಿ ಮೊದಲ ಸಲ ಆಡಿದ ಮಿಥಾಲಿ ರಾಜ್‌ (ಔಟಾಗದೆ 24) ಮತ್ತು ದೀಪ್ತಿ ಶರ್ಮ (ಔಟಾಗದೆ 21) ಅವರಿಗೆ ಒತ್ತಡ ನಿಭಾಯಿಸಲು ಸಾಧ್ಯವಾಗಲಿಲ್ಲ.

ಅಂತಿಮ ಓವರ್‌, 16 ರನ್‌: ಭಾರತದ ಗೆಲುವಿಗೆ ಅಂತಿಮ ಓವರ್‌ನಲ್ಲಿ 16 ರನ್‌ ಬಾರಿಸಬೇಕಾದ ಸವಾಲು ಎದುರಾಯಿತು. ಲೀ ಕ್ಯಾಸ್ಪರೆಕ್‌ ಪಾಲಾದ ಈ ಓವರಿನ ಮೊದಲ ಹಾಗೂ 3ನೇ ಎಸೆತಗಳಲ್ಲಿ ಕ್ರಮವಾಗಿ ಮಿಥಾಲಿ ಮತ್ತು ದೀಪ್ತಿ ಬೌಂಡರಿ ಸಿಡಿದಾಗ ಆಸೆ ಚಿಗುರಿತು. ಆದರೆ ಅಂತಿಮ ಎಸೆತದಲ್ಲಿ ಮಿಥಾಲಿಗೆ ಬೌಂಡರಿ ಒಲಿಯದ ಕಾರಣ ಭಾರತ ಸೋಲನ್ನು ಹೊತ್ತುಕೊಳ್ಳಬೇಕಾಯಿತು. ಆ ಎಸೆತದಲ್ಲಿ ಒಂದೇ ರನ್‌ ಬಂತು. 20ನೇ ಓವರಿನಲ್ಲಿ ಭಾರತ 13 ರನ್‌ ಹೊಡೆಯಿತು (4, 1, 4, 2, 1, 1). ಈ ಮೂವರನ್ನು ಹೊರತುಪಡಿಸಿ ದರೆ ಜೆಮಿಮಾ ರೋಡ್ರಿಗಸ್‌ 21 ರನ್‌ ಹೊಡೆದರು. ಆದರೆ ಆರಂಭಿಕ ಆಟಗಾರ್ತಿ ಪ್ರಿಯಾ ಪೂನಿಯಾ (1) ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (2) ಕೈಕೊಟ್ಟರು.

ಡಿವೈನ್‌ ದಿಟ್ಟ ಆಟ: ನ್ಯೂಜಿಲೆಂಡಿನ ಸವಾಲಿನ ಮೊತ್ತದಲ್ಲಿ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಸೋಫಿ ಡಿವೈನ್‌ ಅವರ 72 ರನ್ನುಗಳ ಕೊಡುಗೆ ಮಹತ್ವದ್ದಾಗಿತ್ತು (52 ಎಸೆತ, 8 ಬೌಂಡರಿ, 2 ಸಿಕ್ಸರ್‌). 2 ವಿಕೆಟ್ ಕೂಡ ಕಿತ್ತ ಡಿವೈನ್‌ ಆಲ್‌ರೌಂಡ್‌ ಶೋ ಮೂಲಕ ಗಮನ ಸೆಳೆದರು. ಸುಜೀ ಬೇಟ್ಸ್‌ 24, ನಾಯಕಿ ಸ್ಯಾಟರ್ಥ್ವೇಟ್ 31 ರನ್‌ ಹೊಡೆದರು. ಮೊದಲು ಬ್ಯಾಟಿಂಗಿಗೆ ಇಳಿದ ನ್ಯೂಜಿಲೆಂಡ್‌ ಆರಂಭದ 10 ಓವರ್‌ಗಳಲ್ಲಿ 2 ವಿಕೆಟಿಗೆ 80 ರನ್‌ ಬಾರಿಸಿ ಮುನ್ನುಗ್ಗುತ್ತಿತ್ತು. ಬಳಿಕ ಭಾರತದ ಬೌಲರ್‌ಗಳು ಕಿವೀಸ್‌ಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌-20 ಓವರ್‌, 161/7 (ಡಿವೈನ್‌ 72, ಸ್ಯಾಟರ್ಥ್ ವೇಟ್ 31, ಬೇಟ್ಸ್‌ 24, ದೀಪ್ತಿ 28ಕ್ಕೆ 2). ಭಾರತ-20 ಓವರ್‌, 159/4 (ಮಂಧನಾ 86, ಮಿಥಾಲಿ 24, ಡಿವೈನ್‌ 21ಕ್ಕೆ 2).

ರಾಮನ್‌ರನ್ನಾದರೂ ಸರಿಯಾಗಿ ನಡೆಸಿಕೊಳ್ಳಿ!

ನವದೆಹಲಿ: ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಅವರನ್ನು ನ್ಯೂಜಿಲೆಂಡ್‌ ವಿರುದ್ಧದ ಮೊದಲೆರಡು ಟಿ20ಯಿಂದ ಕೈಬಿಡುವ ನಿರ್ಧಾರ ಮಾಡಿದ ಭಾರತ ಮಹಿಳಾ ತಂಡದ ನೂತನ ತರಬೇತುದಾರ ಡಬ್ಲ್ಯೂ.ವಿ.ರಾಮನ್‌ರನ್ನಾದರೂ ಸರಿಯಾಗಿ ನಡೆಸಿಕೊಳ್ಳಿ ಎಂದು ಪದಚ್ಯುತ ತರಬೇತುದಾರ ರಮೇಶ್‌ ಪೊವಾರ್‌ ತಿಳಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ)ಗೆ ಟಾಂಗ್‌ ಕೊಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಿಂದ ಫಾರ್ಮ್ನಲ್ಲಿದ್ದ ಮಿಥಾಲಿ ರಾಜ್‌ರನ್ನು ಹೊರಗಿಡಲಾಗಿತ್ತು. ಅದಾದ ನಂತರ ಭಾರೀ ವಿವಾದವೆದ್ದು ಪೊವಾರ್‌ರನ್ನು ಪದಚ್ಯುತಿ ಮಾಡಲಾಗಿತ್ತು.

‘ನ್ಯೂಜಿಲೆಂಡ್‌ ಸರಣಿಯ ಟಿ20 ಪಂದ್ಯದಲ್ಲಿ ಎರಡು ಪಂದ್ಯಗಳಿಂದ ಮಿಥಾಲಿಯನ್ನು ಹೊರಗಿಡಲಾಗಿತ್ತು. ಈ ಕಾರಣಕ್ಕಾಗಿ ರಾಮನ್‌ ತಲೆದಂಡ ಆಗಲ್ಲ ಎಂದು ನಂಬಿದ್ದೇನೆ. ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಸೆಮಿಫೈನಲ್‌ ವೇಳೆ ಎಲ್ಲವೂ ಸರಿ ಇತ್ತು. ಭಾರತಕ್ಕೆ ಬಂದ ಮೇಲೆಯೇ ನನಗೆ ಅದರ ಬಿಸಿ ತಟ್ಟಿದ್ದು. ಅಲ್ಲಿಂದ ಹೊರಡುವ ಮೊದಲು ಇಂತಹದೊಂದು ಹೈಡ್ರಾಮಾ ನಡೆಯಬಹುದು ಎಂದು ಊಹಿಸಿಯೇ ಇರಲಿಲ್ಲ. ನನ್ನ ಪರಿಸ್ಥಿತಿ ರಾಮನ್‌ರಿಗೆ ಬರಬಾರದು. ಇಂತಹ ಟೀಕೆಗಳು ಮತ್ತೆ ಮುಂದುವರಿದ್ದೇ ಆದರೆ ಅದನ್ನು ನಿಯಂತ್ರಣಕ್ಕೆ ತರುವುದು ತುಂಬಾ ಕಷ್ಟವಾಗಲಿದೆ. ಮಾತ್ರವಲ್ಲ ಪ್ರತಿ ಕೋಚ್‌ಗಳು ಬಂದಾಗಲೂ ಇಂತಹ ಸಮಸ್ಯೆ ಉದ್ಭವವಾಗುತ್ತಲೇ ಇರುತ್ತದೆ ಎಂದು ಪೊವಾರ್‌ ತಿಳಿಸಿದರು.

ಹಿನ್ನೆಲೆಯೇನು?: ಕಳೆದ ನವೆಂಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದಿದ್ದ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಮಿಥಾಲಿ ರಾಜ್‌ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಈ ನಿರ್ಧಾರವನ್ನು ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಸಮರ್ಥಿಸಿಕೊಂಡಿದ್ದರು. ಈ ಕೋಚ್ ಆಗಿದ್ದ ಪೊವಾರ್‌ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಸ್ವತಃ ಮಿಥಾಲಿ ತನ್ನನ್ನು ಕಾರಣವಿಲ್ಲದೆ ತಂಡದಿಂದ ಕೈಬಿಟ್ಟಿದ್ದಾರೆ ಎಂದು ಮಾಧ್ಯಮಗಳ ಎದುರು ಬೇಸರ ವ್ಯಕ್ತಪಡಿಸಿದ್ದರು. ಕೋಚ್ ವಿರುದ್ಧ ಹರಿಹಾಯ್ದಿದ್ದರು. ಇದರ ಬೆನ್ನಲ್ಲೇ ಪೊವಾರ್‌ ತರಬೇತುದಾರ ಸ್ಥಾನ ಕಳೆದುಕೊಂಡಿದ್ದರು.

ಟಾಪ್ ನ್ಯೂಸ್

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

1-qq

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

ಭಾರತದ ವಿರುದ್ಧದ ಪಂದ್ಯಕ್ಕಾಗಿ ಒಂದು ದಿನ ಮೊದಲೇ ತಂಡ ಪ್ರಕಟಿಸಿದ ಪಾಕಿಸ್ಥಾನ

ಭಾರತದ ವಿರುದ್ಧದ ಪಂದ್ಯಕ್ಕಾಗಿ ಒಂದು ದಿನ ಮೊದಲೇ ತಂಡ ಪ್ರಕಟಿಸಿದ ಪಾಕಿಸ್ಥಾನ

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋವಿಡ್‌ ಪರಿಣಾಮ: ಜೀವಿತಾವಧಿ ಇಳಿಕೆ

ಕೋವಿಡ್‌ ಪರಿಣಾಮ: ಜೀವಿತಾವಧಿ ಇಳಿಕೆ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.