Kemar Roach: ವೆಸ್ಟ್ ಇಂಡೀಸ್ ಟೆಸ್ಟ್ ತಂಡಕ್ಕೆ ಮರಳಿದ ಕೆಮರ್ ರೋಚ್
Team Udayavani, Aug 3, 2024, 10:49 PM IST
ಪೋರ್ಟ್ ಆಫ್ ಸ್ಪೇನ್: ಗಾಯಾಳಾಗಿ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ವೆಸ್ಟ್ ಇಂಡೀಸ್ ವೇಗಿ ಕೆಮರ್ ರೋಚ್, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ವಾಪಸಾಗಿದ್ದಾರೆ.
2 ಪಂದ್ಯಗಳ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡàಸ್ ತಂಡ ಪ್ರಕಟಗೊಂಡಿದ್ದು, ಅಲ್ಜಾರಿ ಜೋಸೆಫ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲು ಕೀಪರ್ ಜೋಶುವ ಡ ಸಿಲ್ವ ಉಪನಾಯಕರಾಗಿ ನೇಮಕಗೊಂಡಿದ್ದಾರೆ.
ಮೊದಲ ಟೆಸ್ಟ್ ಅ. 7ರಿಂದ 11ರ ತನಕ ಪೋರ್ಟ್ ಆಫ್ ಸ್ಪೇನ್‌ನಲ್ಲಿ, ಎರಡನೇ ಟೆಸ್ಟ್ ಆ. 15ರಿಂದ 19ರ ತನಕ ಪ್ರೊವಿಡೆನ್ಸ್‌ನಲ್ಲಿ ನಡೆಯಲಿದೆ.
ವೆಸ್ಟ್ ಇಂಡೀಸ್ ತಂಡ: ಕ್ರೆಗ್ ಬ್ರಾತ್‌ವೇಟ್ (ನಾಯಕ), ಜೋಶುವ ಡ ಸಿಲ್ವ, ಅಲಿಕ್ ಅಥನಾಜ್, ಕೇಸಿ ಕಾರ್ಟಿ, ಬ್ರಿಯಾನ್ ಚಾರ್ಲ್ಸ್, ಜಸ್ಟಿನ್ ಗ್ರೀವ್ಸ್, ಜೇಸನ್ ಹೋಲ್ಡರ್, ಕವೆಮ್ ಹಾಜ್, ಟೆವಿನ್ ಇಮ್ಲಾಕ್, ಶಮರ್ ಜೋಸೆಫ್, ಮೈಕಲ್ ಲೂಯಿಸ್, ಗುಡಕೇಶ್ ಮೋಟಿ, ಕೆಮರ್ ರೋಚ್, ಜೇಡನ್ ಸೀಲ್ಸ್, ಜೊಮೆಲ್ ವ್ಯಾರಿಕಾನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.