ಪಾಕಿಸ್ತಾನದಲ್ಲಿ ಐಪಿಎಲ್ ಪ್ರಸಾರವಿಲ್ಲ!
Team Udayavani, Mar 22, 2019, 12:30 AM IST
ಲಾಹೋರ್: ಪಾಕಿಸ್ತಾನದಲ್ಲಿ ಐಪಿಎಲ್ ನೇರ ಪ್ರಸಾರಕ್ಕೆ ನಿಷೇಧ ಹೇರುವ ಸಾಧ್ಯತೆ ಇದೆ. ಅಲ್ಲಿನ ಕ್ರಿಕೆಟ್ ಪತ್ರಕರ್ತ ಸಾಜ್ ಸಾದಿಕ್ ಇದನ್ನು ತಿಳಿಸಿದ್ದಾರೆ. ಪುಲ್ವಾಮಾ ದಾಳಿಯ ಬಳಿಕ ಎರಡೂ ರಾಷ್ಟ್ರಗಳ ಸಂಬಂಧ ಇನ್ನಷ್ಟು ಬಿಗಡಾಯಿಸಿದೆ.
ಈ ದಾಳಿಯ ಬೆನ್ನಲ್ಲೇ “ಪಾಕಿಸ್ಥಾನ್ ಸೂಪರ್ ಲೀಗ್’ (ಪಿಎಸ್ಎಲ್) ಪ್ರಸಾರವನ್ನು ಭಾರತ ದಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ತಿರುಗೇಟು ನೀಡಲು ಮುಂದಾಗಿರುವ ಪಾಕಿಸ್ಥಾನಕ್ಕೀಗ
ಐಪಿಎಲ್ ಅಸOಉ ಸಿಕ್ಕಿದೆ. ತನ್ನ ದೇಶದಲ್ಲಿ ಈ ಪಂದ್ಯಗಳ ಪ್ರಸಾರಕ್ಕೆ ನಿಷೇಧ ಹೇರಲು ಸರಕಾರ
ಎಲ್ಲ ಸಿದಟಛಿತೆ ಮಾಡಿಕೊಂಡಿದೆ ಎನ್ನಲಾಗಿದೆ.