ಕೊಹ್ಲಿ-ಸ್ಮಿತ್‌ ಹೋಲಿಕೆ ಬೇಡ: ಗಂಭೀರ್‌

Team Udayavani, Jan 14, 2020, 5:24 AM IST

ಹೊಸದಿಲ್ಲಿ: ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಜತೆ ಸ್ಟೀವನ್‌ ಸ್ಮಿತ್‌ ಅವರನ್ನು ಹೋಲಿಕೆ ಮಾಡುವ ಅಗತ್ಯವೇ ಇಲ್ಲ ಎಂದು ಗೌತಮ್‌ ಗಂಭೀರ್‌ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಕೊಹ್ಲಿ ಮತ್ತು ಸ್ಮಿತ್‌ ಅವರ ಕ್ರಿಕೆಟ್‌ ದಾಖಲೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇದಕ್ಕೆ ಗಂಭೀರ್‌ ಪ್ರತಿಕ್ರಿಯಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ 11 ಸಾವಿರಕ್ಕೂ ಹೆಚ್ಚು ರನ್‌ ಗಳಿಸಿದ್ದು, 43 ಶತಕ ಬಾರಿಸಿದ್ದಾರೆ. ಆದರೆ ಸ್ಮಿತ್‌ ಇನ್ನೂ 4 ಸಾವಿರ ರನ್‌ ಗಡಿ ದಾಟಿಲ್ಲ. ಹೊಡೆದದ್ದು 8 ಶತಕ ಮಾತ್ರ. ಆದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಾತ್ರ ಸ್ಮಿತ್‌ ಕೊಹ್ಲಿಗಿಂತ ಉತ್ತಮ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ ಎಂದು ಗಂಭೀರ್‌ ಹೇಳಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸ್ಮಿತ್‌ಗಿಂತ ಕೊಹ್ಲಿಯೇ ಅತ್ಯುತ್ತಮ ಬ್ಯಾಟ್ಸ್‌ಮನ್‌. ಅವರಿಬ್ಬರ ನಡುವೆ ಹೋಲಿಕೆ ಮಾಡಲು ಕೂಡ ಸಾಧ್ಯವಿಲ್ಲ ಎಂದು ಗಂಭೀರ್‌ ಹೇಳಿದ್ದಾರೆ. 30 ವರ್ಷದ ಸ್ಮಿತ್‌ ಏಕದಿನ ಕ್ರಿಕೆಟ್‌ನಲ್ಲಿ ಮತ್ತಷ್ಟು ರನ್‌ ಗಳಿಸಬೇಕಾದರೆ ಅವರ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆಯಾಗಬೇಕಿದೆ. ಅವರನ್ನು 4ನೇ ಕ್ರಮಾಂಕದಿಂದ 3ನೇ ಕ್ರಮಾಂಕಕ್ಕೆ ಏರಿಸಬೇಕು ಎಂಬುದು ಗಂಭೀರ್‌ ಅನಿಸಿಕೆ.

ಭಾರತದ ಬೌಲಿಂಗ್‌ ಬಗ್ಗೆ ಕುತೂಹಲ
ವಿಶ್ವದ ಸ್ಫೋಟಕ ಬ್ಯಾಟ್ಸಮನ್‌ಗಳಾಗಿರುವ ವಾರ್ನರ್‌, ಫಿಂಚ್‌ ಮುಂದೆ ಭಾರತೀಯ ಬೌಲರ್‌ಗಳು ಎಂಥ ಪ್ರದರ್ಶನ ನೀಡಲಿದ್ದಾರೆ ಎನ್ನುವುದು ಎಲ್ಲರ ಕುತೂಹಲ. ಇಲ್ಲಿ ಬುಮ್ರಾ ಬೌಲಿಂಗ್‌ ಲಯ ಯಾವ ರೀತಿ ಇರಲಿದೆ ಎನ್ನು ವುದು ಕೂಡ ನಿರ್ಧರವಾಗಲಿದೆ ಎಂದ ಗಂಭೀರ್‌, ಮುಂಬರುವ ಟಿ20 ವಿಶ್ವಕಪ್‌ ಆತಿಥ್ಯ ವಹಿಸಿರುವ ಆಸ್ಟ್ರೇಲಿಯ ವಿರುದ್ಧದ ಈ ಸರಣಿ ಭಾರತಕ್ಕೆ ಒಂದು ಅಗ್ನಿಪರೀಕ್ಷೆಯೂ ಹೌದು ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ