Pakistan ತಂಡದ ನಾಯಕತ್ವ ಬಿಡುವ ಬಗ್ಗೆ ಯೋಚಿಸಿಲ್ಲ: ಬಾಬರ್‌

Team Udayavani, Jun 18, 2024, 6:29 AM IST

1-babar

ಲಾಡರ್‌ಹಿಲ್‌ (ಫ್ಲೋರಿಡಾ): ಪಾಕಿಸ್ಥಾನ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ದ್ವಿತೀಯ ಸುತ್ತು ಪ್ರವೇಶಿಸುವ ಮೊದಲೇ ಹೊರಬಿದ್ದ ಸಂಕಟಕ್ಕೆ ಸಿಲುಕಿದೆ. ತಂಡದ ವಿರುದ್ಧ ಎಲ್ಲ ದಿಕ್ಕುಗಳಿಂದಲೂ ಟೀಕೆಗಳು ವ್ಯಕ್ತವಾಗುತ್ತಿವೆ. ನಾಯಕ ಬಾಬರ್‌ ಆಜಂ ಅವರ ತಲೆದಂಡದ ಕೂಗು ದೊಡ್ಡ ಮಟ್ಟದಲ್ಲೇ ಕೇಳಿ ಬರುತ್ತಿದೆ.

ಆದರೆ ಸದ್ಯ ತಾನು ನಾಯಕತ್ವ ಬಿಡುವ ಬಗ್ಗೆ ಆಲೋಚಿಸಿಲ್ಲ ಎಂಬುದಾಗಿ ಬಾಬರ್‌ ಆಜಂ ಹೇಳಿದ್ದಾರೆ. “ನಾನು ಪಾಕಿಸ್ಥಾನಕ್ಕೆ ಮರಳಿದ ಬಳಿಕ ಇಲ್ಲಿ ಸಂಭವಿಸಿದ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಿದ್ದೇನೆ. ನಾಯಕತ್ವ ಬಿಡುವುದೇ ಆದಲ್ಲಿ ನಾನು ಬಹಿರಂಗವಾಗಿ ನಿಮಗೆ ತಿಳಿಸುತ್ತೇನೆ. ಪರದೆಯ ಹಿಂದೆ ನಾನು ಯಾವುದನ್ನೂ ಹೇಳುವುದಿಲ್ಲ, ಮುಚ್ಚಿಡುವುದೂ ಇಲ್ಲ. ಪಿಸಿಬಿ ನಿರ್ಧಾರವೇ ಅಂತಿಮ’ ಎಂಬುದಾಗಿ ಬಾಬರ್‌ ಆಜಂ ಹೇಳಿದರು.

ಪಾಕಿಸ್ಥಾನ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಭಾರೀ ಒದ್ದಾಟ ನಡೆಸಿ 3 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ಐರ್ಲೆಂಡ್‌ 9ಕ್ಕೆ 106 ರನ್‌ ಗಳಿಸಿದರೆ, ಪಾಕ್‌ 18.5 ಓವರ್‌ಗಳಲ್ಲಿ 7ಕ್ಕೆ 111 ರನ್‌ ಮಾಡಿ ಜಯ ಸಾಧಿಸಿತು. ಇದು ಲೀಗ್‌ ಹಂತದಲ್ಲಿ ಬಾಬರ್‌ ಪಡೆಗೆ ಒಲಿದ ಕೇವಲ 2ನೇ ಗೆಲುವು. ಅಮೆರಿಕ ಮತ್ತು ಭಾರತದ ವಿರುದ್ಧ ಸೋಲನುಭವಿಸುವ ಮೂಲಕ ಪಾಕ್‌ ಬಹಳ ಬೇಗ ನಿರ್ಗಮನ ಬಾಗಿಲಿಗೆ ಬಂದಿತ್ತು.
ಪಾಕಿಸ್ಥಾನ ತಂಡದಲ್ಲಿ ಗುಂಪುಗಾರಿಕೆ ಇದೆ; ಇಲ್ಲಿ ಒಂದಲ್ಲ ಎರಡಲ್ಲ, ಮೂರು ಬಣಗಳಿವೆ. ಬಾಬರ್‌ ಆಜಂ, ಮೊಹಮ್ಮದ್‌ ರಿಜ್ವಾನ್‌ ಮತ್ತು ಶಾಹಿನ್‌ ಶಾ ಅಫ್ರಿದಿ ಅವರ ಬಣಗಳಿವು. ಕೆಲವು ಆಟಗಾರರು ಪರಸ್ಪರ ಮಾತಾಡಿಕೊಳ್ಳುವುದೂ ಇಲ್ಲ, ಆಟಗಾರರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದೆಲ್ಲ ಸುದ್ದಿಯಾಗಿದೆ.

ಕರ್ಸ್ಟನ್‌ ಶಾಕಿಂಗ್‌ ಹೇಳಿಕೆ
ಕೋಚ್‌ ಗ್ಯಾರಿ ಕರ್ಸ್ಟನ್‌ ಕೂಡ ಈ ಕುರಿತು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. “ಪಾಕಿ ಸ್ಥಾನ ತಂಡದಲ್ಲಿ ಏಕತೆ ಇಲ್ಲ. ಆದರೂ ಇದನ್ನು ತಂಡ ವೆಂದು ಕರೆಯುತ್ತಾರೆ. ಆದರೆ ಇದು ಖಂಡಿತ ತಂಡವಲ್ಲ. ಆಟಗಾರರು ಎಡ-ಬಲದಂತೆ ಇದ್ದಾರೆ. ನಾನು ಅದಷ್ಟೋ ತಂಡಗಳೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಇಂಥ ಅನುಭವ ಎಲ್ಲೂ ಆಗಿಲ್ಲ’ ಎಂದಿದ್ದಾರೆ.

ಟಾಪ್ ನ್ಯೂಸ್

Bridge: ಇದಕ್ಕೆ ಏನ್ ಹೇಳೋಣ… ಸೇತುವೆ ನಿರ್ಮಾಣ ಆದರೂ ಜೀವಕ್ಕೆ ಮಾತ್ರ ಅಪಾಯ ತಪ್ಪಿಲ್ಲ…

Bridge: ಇದಕ್ಕೆ ಏನ್ ಹೇಳೋಣ… ಸೇತುವೆ ನಿರ್ಮಾಣ ಆದರೂ ಜೀವಕ್ಕೆ ಮಾತ್ರ ಅಪಾಯ ತಪ್ಪಿಲ್ಲ…

1

Rakshit Shetty: ಅನುಮತಿಯಿಲ್ಲದೆ ಹಾಡು ಬಳಕೆ ಆರೋಪ; ರಕ್ಷಿತ್‌ ಶೆಟ್ಟಿ ವಿರುದ್ಧ FIR ದಾಖಲು

Lord Jagannath: ಭಗವಾನ್‌ ಜಗನ್ನಾಥನ ಕೃಪೆಯಿಂದ ಟ್ರಂಪ್‌ ಜೀವ ಉಳಿಯಿತು: ಇಸ್ಕಾನ್!

Lord Jagannath: ಭಗವಾನ್‌ ಜಗನ್ನಾಥನ ಕೃಪೆಯಿಂದ ಟ್ರಂಪ್‌ ಜೀವ ಉಳಿಯಿತು: ಇಸ್ಕಾನ್!

Chitradurga: ನಾಪತ್ತೆಯಾಗಿದ್ದ ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿ ಮಠದ ಆವರಣದಲ್ಲೇ ಪತ್ತೆ!

Chitradurga: ಕಳವಾಗಿದ್ದ ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿ ಮಠದ ಆವರಣದಲ್ಲೇ ಪತ್ತೆ!

4-health

Rhinoplasty: ರಿನೊಪ್ಲಾಸ್ಟಿ

Chitradurga: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ

Chitradurga: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ

ಬಿಹಾರದಲ್ಲೊಂದು ಅಮಾನುಷ ಕೃತ್ಯ… 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿಹಾಕಿ ಥಳಿತ

ಬಿಹಾರದಲ್ಲೊಂದು ಅಮಾನುಷ ಕೃತ್ಯ… 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿಹಾಕಿ ಥಳಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-urugwe

Copa America ಫುಟ್‌ಬಾಲ್‌: ಇಂದು ಆರ್ಜೆಂಟೀನಾ-ಕೊಲಂಬಿಯ ಫೈನಲ್‌

1-swamiji

Olympics ಆಟಗಾರ ಈಗ ಸ್ವಾಮೀಜಿ!

1-kik

Australia Tour; ವನಿತಾ ‘ಎ’ ತಂಡಕ್ಕೆ ಮಿನ್ನು ಮಣಿ ನಾಯಕಿ

1-K-L

Mulki; ಬಪ್ಪನಾಡು, ಶಿಮಂತೂರು ದೇಗುಲಗಳಲ್ಲಿ ರಾಹುಲ್‌ ದಂಪತಿ

1-saddas

Wimbledon Doubles: ಪ್ಯಾಟೆನ್‌-ಹೆಲಿಯೋವಾರ; ಟೌನ್ಸೆಂಡ್‌-ಸಿನಿಯಕೋವಾ ಚಾಂಪಿಯನ್ಸ್‌

MUST WATCH

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

ಹೊಸ ಸೇರ್ಪಡೆ

Bridge: ಇದಕ್ಕೆ ಏನ್ ಹೇಳೋಣ… ಸೇತುವೆ ನಿರ್ಮಾಣ ಆದರೂ ಜೀವಕ್ಕೆ ಮಾತ್ರ ಅಪಾಯ ತಪ್ಪಿಲ್ಲ…

Bridge: ಇದಕ್ಕೆ ಏನ್ ಹೇಳೋಣ… ಸೇತುವೆ ನಿರ್ಮಾಣ ಆದರೂ ಜೀವಕ್ಕೆ ಮಾತ್ರ ಅಪಾಯ ತಪ್ಪಿಲ್ಲ…

1

Rakshit Shetty: ಅನುಮತಿಯಿಲ್ಲದೆ ಹಾಡು ಬಳಕೆ ಆರೋಪ; ರಕ್ಷಿತ್‌ ಶೆಟ್ಟಿ ವಿರುದ್ಧ FIR ದಾಖಲು

5-hunsur

Hunsur: ಭಾರಿ ಮಳೆ; ಮನೆ ಮೇಲೆ ಉರುಳಿಬಿದ್ದ ತೆಂಗಿನ ಮರ; ತಪ್ಪಿದ ಭಾರೀ ಅನಾಹುತ

Lord Jagannath: ಭಗವಾನ್‌ ಜಗನ್ನಾಥನ ಕೃಪೆಯಿಂದ ಟ್ರಂಪ್‌ ಜೀವ ಉಳಿಯಿತು: ಇಸ್ಕಾನ್!

Lord Jagannath: ಭಗವಾನ್‌ ಜಗನ್ನಾಥನ ಕೃಪೆಯಿಂದ ಟ್ರಂಪ್‌ ಜೀವ ಉಳಿಯಿತು: ಇಸ್ಕಾನ್!

Chitradurga: ನಾಪತ್ತೆಯಾಗಿದ್ದ ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿ ಮಠದ ಆವರಣದಲ್ಲೇ ಪತ್ತೆ!

Chitradurga: ಕಳವಾಗಿದ್ದ ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿ ಮಠದ ಆವರಣದಲ್ಲೇ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.