ಜನರ ನೆರವಿಗೆ 8.36 ಕೋಟಿ ರೂ. ನೀಡಿದ ನೊವಾಕ್ ಜೊಕೊವಿಚ್
Team Udayavani, Mar 29, 2020, 10:09 AM IST
ಸರ್ಬಿಯಾ: ವಿಶ್ವವಿಖ್ಯಾತ ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ತಮ್ಮ ದೇಶದ ನೆರವಿಗೆ ಬಂದಿದ್ದಾರೆ.
ಕೋವಿಡ್-19 ಹೊಡೆತಕ್ಕೆ ಸಿಲುಕಿರುವ ಜನರ ನೆರವಿಗೆ ಒಟ್ಟು 8.36 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಜೊಕೊವಿಚ್ ಅವರ ಪತ್ನಿ ಜೆಲೆನಾ ಜೊಕೊವಿಚ್ ಕೂಡ ಖಚಿತಪಡಿಸಿದ್ದಾರೆ.
ವೈದ್ಯಕೀಯ ಸಲಕರಣೆಗಳನ್ನು ಕೊಂಡುಕೊಳ್ಳಲು ಈ ಹಣ ಉಪಯೋಗವಾಗಲಿದೆ. ಸರ್ಬಿಯಾದಲ್ಲಿ ಇದುವರೆಗೆ 659 ಕೋವಿಡ್ 19 ಪ್ರಕರಣಗಳು ಪಾಸಿಟಿವ್ ಆಗಿದ್ದು ಒಂಬತ್ತು ಜನರು ಸಾವನ್ನಪ್ಪಿದ್ದಾರೆ.