ಕ್ವಾರ್ಟರ್‌ ಫೈನಲ್‌ಗೆ ಜೊಕೋ, ನಡಾಲ್‌

ಮಾಂಟೆ ಕಾರ್ಲೊ ಮಾಸ್ಟರ್

Team Udayavani, Apr 19, 2019, 6:06 AM IST

ಮಾಂಟೆ ಕಾರ್ಲೊ: “ಮಾಂಟೆ ಕಾರ್ಲೊ ಮಾಸ್ಟರ್ ಟೆನಿಸ್‌’ ಕೂಟದಲ್ಲಿ ಗೆಲುವಿನ ಓಟ ಮುಂದುವರಿಸಿರುವ ಅಗ್ರ ಶ್ರೇಯಾಂಕಿತ ನೋವಾಕ್‌ ಜೊಕೋವಿಕ್‌ ಮತ್ತು ರಫೆಲ್‌ ನಡಾಲ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಜೊಕೋವಿಕ್‌ ಅಮೆರಿಕದ ಟೇಲರ್‌ ಫ್ರಿಟ್ಸ್‌ ವಿರುದ್ಧ 6-3, 6-0 ಜಯ ಸಾಧಿಸಿ ಇಲ್ಲಿ 9ನೇ ಕ್ವಾರ್ಟರ್‌ ಫೈನಲ್‌ ಪಂದ್ಯವನ್ನಾಡಲು ಸಿದ್ಧರಾಗಿದ್ದಾರೆ. ಜೊಕೋವಿಕ್‌- ಟೇಲರ್‌ ನಡುವಿನ ಆಟ 68 ನಿಮಿಷಗಳ ಆಟದಲ್ಲಿ ಮುಗಿಯಿತು.

ಸಿಸಿಪಸ್‌ಗೆ ಸೋಲಿನ ಆಘಾತ
6ನೇ ಶ್ರೇಯಾಂಕಿತ, ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ 2-6, 6-1, 4-6 ಸೆಟ್‌ಗಳಿಂದ ರಶ್ಯದ ಡೇನಿಯಲ್‌ ಮೆಡ್ವಡೇವ್‌ ಅವರ ವಿರುದ್ಧ ಸೋತು ಆಘಾತ ಅನುಭವಿಸಿದರು. ಈ ಕೂಟದಲ್ಲಿ ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವ ಮೆಡ್ವಡೇವ್‌ ಮುಂದಿನ ಪಂದ್ಯದಲ್ಲಿ ಜೊಕೋವಿಕ್‌ ಅವರನ್ನು ಎದುರಿಸಲಿದ್ದಾರೆ.

ನಡಾಲ್‌ಗೆ ಜಯ
ಸ್ಪೇನಿನ ರಫೆಲ್‌ ನಡಾಲ್‌ ಕೂಡ ಸುಲಭ ಜಯದೊಂದಿಗೆ ಮುನ್ನಡೆದರು. ಅವರು ಪ್ರಿ-ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬಲ್ಗೇರಿಯದ ಗ್ರಿಗರ್‌ ಡಿಮೆಟ್ರೋವ್‌ ವಿರುದ್ಧ 6-4, 6-1 ನೇರ ಸೆಟ್‌ಗಳ ಗೆಲುವು ಸಾಧಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ