ನೊವಾಕ್ ಜೊಕೋವಿಕ್ ಇಲ್ಲದ ಆಸ್ಟ್ರೇಲಿಯನ್ ಓಪನ್
Team Udayavani, Jan 16, 2022, 11:10 PM IST
ಮೆಲ್ಬರ್ನ್: ವಿಶ್ವದ ನಂ.1 ಟೆನಿಸಿಗ ಹಾಗೂ ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ಇಲ್ಲದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಸೋಮವಾರ “ಮೆಲ್ಬರ್ನ್ ಪಾರ್ಕ್’ನಲ್ಲಿ ಆರಂಭವಾಗಲಿದೆ.
ಆಸ್ಟ್ರೇಲಿಯ ಸರಕಾರದಿಂದ ಎರಡನೇ ಬಾರಿ ವೀಸಾ ನಿರಾಕರಣೆಗೆ ಒಳಗಾಗಿರುವ ಜೊಕೋ, ತಮ್ಮ ವಿರುದ್ಧ ಗಡಿಪಾರು ಆದೇಶವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಆಸ್ಟ್ರೇಲಿಯ ಫೆಡರಲ್ ಕೋರ್ಟ್ ತಿರಸ್ಕರಿಸಿದೆ.
ಇದರಿಂದ ಜೊಕೋ ಅವರ 21ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಕನಸು ಭಗ್ನವಾಗಿದೆ.
ಆಸ್ಟ್ರೇಲಿಯದಲ್ಲಿ ಜೊಕೋವಿಕ್ ಅವರ ಉಪಸ್ಥಿತಿ ಎನ್ನುವುದು ಸಾರ್ವಜನಿಕರ ಆರೋಗ್ಯ ಮತ್ತು ಜನರ ಹಿತದೃಷ್ಟಿಗೆ ಅಪಾಯ ಉಂಟುಮಾಡಬಹುದು.
ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್
ಆಸ್ಟ್ರೇಲಿಯದಲ್ಲಿ ಇತರರು ಲಸಿಕೆ ಹಾಕುವ ಪ್ರಯತ್ನಗಳಿಗೆ ಅಡ್ಡಿಯಾಗಬಹುದು ಎಂಬ ಆಧಾರದ ಮೇಲೆ ಸಚಿವರು ವೀಸಾವನ್ನು ರದ್ದುಪಡಿಸಿದ್ದಾರೆ. ಇದಕ್ಕೆ ಕೋರ್ಟ್ ಸಮ್ಮತಿಸಿದೆ.