ನೊವಾಕ್‌ ಜೊಕೋವಿಕ್‌ ಫೈನಲಿಗೆ

Team Udayavani, Jul 13, 2019, 5:26 AM IST

ಲಂಡನ್‌: ಹಾಲಿ ಚಾಂಪಿ ಯನ್‌ ನೊವಾಕ್‌ ಜೊಕೋವಿಕ್‌ ಮತ್ತೆ ವಿಂಬಲ್ಡನ್‌ ಟೆನಿಸ್‌ ಕೂಟದ ಫೈನಲ್‌ ಹಂತಕ್ಕೇರಿದ್ದಾರೆ.

ಶುಕ್ರವಾರ ನಡೆದ ನಾಲ್ಕು ಸೆಟ್‌ಗಳ ಕಠಿನ ಹೋರಾಟದಲ್ಲಿ ಅವರು ಸ್ಪೇನ್‌ನ ರಾಬೆರ್ಟೊ ಬಾಟಿಸ್ಟ ಆಗುಟ್‌ ಅವರನ್ನು ಉರುಳಿಸಿ ಆರನೇ ಬಾರಿ ಇಲ್ಲಿ ಫೈನಲಿಗೇರಿದ್ದಾರೆ.

ವಿಶ್ವದ ನಂಬರ್‌ ವನ್‌ ಆಟಗಾರ ರಾಗಿರುವ ಜೊಕೋವಿಕ್‌ 6-2, 4-6, 6-3, 6-2 ಸೆಟ್‌ಗಳಿಂದ ಆಗುಟ್‌ ಅವರನ್ನು ಕೆಡಹಿ ಪ್ರಶಸ್ತಿ ಸುತ್ತಿಗೇರಿದ್ದಾರೆ. ರವಿವಾರ ನಡೆಯುವ ಫೈನಲ್‌ನಲ್ಲಿ ಅವರು ರೋಜರ್‌ ಫೆಡರರ್‌-ರಫೆಲ್‌ ನಡಾಲ್‌ ಅವರ ನಡುವಣ ವಿಜೇತರನ್ನು ಎದುರಿಸಲಿದ್ದಾರೆ.

ಇಲ್ಲಿ ಆರು ಬಾರಿ ಫೈನಲಿಗೇರಿದ್ದ ಜೊಕೋವಿಕ್‌ ನಾಲ್ಕು ಬಾರಿ ಪ್ರಶಸ್ತಿ ಜಯಿಸಿದ್ದಾರೆ. ಒಟ್ಟಾರೆ ಗ್ರ್ಯಾನ್‌ ಸ್ಲಾಮ್‌ನಲ್ಲಿ ಇದು ಅವರ 25ನೇ ಗ್ರ್ಯಾನ್‌ ಸ್ಲಾಮ್‌ ಫೈನಲ್‌. 15 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. 9 ಬಾರಿ ಸೋತಿ ದ್ದಾರೆ. ಇನ್ನೊಂದರ ಫ‌ಲಿತಾಂಶ ರವಿ ವಾರ ನಿರ್ಧಾರವಾಗಲಿದೆ. ಅವರೀಗ 20 ಬಾರಿ ಗ್ರ್ಯಾನ್‌ಸ್ಲಾಮ್‌ ಗೆದ್ದಿರುವ ಫೆಡರರ್‌ ಹಾಗೂ 18 ಬಾರಿ ಪ್ರಶಸ್ತಿ ಜಯಿಸಿರುವ ನಡಾಲ್‌ಗಿಂತ ಮಾತ್ರ ಹಿಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ