ಇಂಡೋ ಕಿವೀಸ್ ಕದನ: ಇಶಾಂತ್ ವೇಗದ ದಾಳಿಗೆ ವಿಲಿಯಮ್ಸನ್ ಉತ್ತರ

Team Udayavani, Feb 22, 2020, 12:23 PM IST

ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಟೆಸ್ಟ್ ನ ಎರಡನೇ ದಿನದ ಗೌರವದಿಂದಲೂ ಭಾರತ ವಂಚಿತವಾಗಿದೆ. ಒಟ್ಟಾರೆ ಎರಡನೇ ದಿನದ ಆಟದ ಅಂತ್ಯಕ್ಕೆ ಕಿವೀಸ್ 51 ರನ್ ಮುನ್ನಡೆ ಸಾಧಿಸಿದೆ.

ಐದು ವಿಕೆಟ್ ಗೆ 122 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದ ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ಒಂದು ಗಂಟೆಯಲ್ಲೇ ಸರ್ವಪತನ ಕಂಡಿತು. ಕ್ರೀಸ್ ನಲ್ಲಿದ್ದ ಪಂತ್ (19 ರನ್) ಮತ್ತು ಅಜಿಂಕ್ಯ ರಹಾನೆ (46 ರನ್) ಬೇಗನೇ ವಿಕೆಟ್ ಒಪ್ಪಿಸಿದರು. ಶಮಿ 21 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವ ಬಾಲಂಗೋಚಿಗಳ ನೆರವು ಕೂಡಾ ಲಭಿಸಲಿಲ್ಲ. ಮೊದಲ ದಿನ ಜ್ಯಾಮಿಸನ್ ಕಾಡಿದ್ದರೆ, ಎರಡನೇ ದಿನ ಸೌಥಿ ವಿಕೆಟ್ ಬೇಟೆಯಾಡಿದರು. ಇಬ್ಬರೂ ತಲಾ ನಾಲ್ಕು ವಿಕೆಟ್ ಪಡೆದರು. ಒಟ್ಟಾರೆ ಭಾರತ 69.1 ಓವರ್ ನಲ್ಲಿ ಭಾರತ 165 ರನ್ ಗೆ ಆಲ್ ಔಟ್ ಆಯಿತು.

ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ಗೆ ಮೊದಲ ಆಘಾತ ನೀಡಿದ್ದು ವೇಗಿ ಇಶಾಂತ್ ಶರ್ಮಾ. ಲ್ಯಾಂಥಮ್ 11 ರನ್ ಗಳಿಸಿ ಔಟಾದರು. ನಂತರ ಬ್ಲಂಡೆಲ್ (30 ರನ್ ) ಕೂಡಾ ಇಶಾಂತ್ ಗೆ ಬಲಿಯಾದರು. ನಾಯಕ ಕೇನ್ ವಿಲಿಯಮ್ಸನ್ ಮತ್ತು ನೂರನೇ ಪಂದ್ಯವಾಡುತ್ತಿರವ ರಾಸ್ ಟೇಲರ್ 93 ರನ್ ಗಳ ಜೊತೆಯಾಟವಾಡಿದರು. ಟೇಲರ್ 44 ರನ್ ಗಳಿಸಿ ಔಟಾದರೆ, ಉತ್ತಮ ಇನ್ನಿಂಗ್ಸ್ ಕಟ್ಟಿದ ಕೇನ್ ವಿಲಿಯಮ್ಸನ್ 89 ರನ್ ಗಳಿಸಿ ಶಮಿ ಎಸೆತದಲ್ಲಿ ಔಟಾದರು.

ಬಿಗು ದಾಳಿ ಸಂಘಟಿಸಿದ ಇಶಾಂತ್ ಶರ್ಮಾ ಮೂರು ವಿಕೆಟ್ ಪಡೆದರೆ, ಅಶ್ವಿನ್ ಮತ್ತು ಶಮಿ ತಲಾ ಒಂದು ವಿಕೆಟ್ ಕಬಳಿಸಿದರು. ಮಂದಬೆಳಕಿನಿಂದ ದಿನದಾಟವನ್ನು ಮುಗಿಸಿದಾಗ ಕಿವೀಸ್ ಐದು ವಿಕೆಟ್ ನಷ್ಟದಲ್ಲಿ 216 ರನ್ ಗಳಿಸಿದೆ. ವ್ಯಾಟ್ಲಿಂಗ್ ಮತ್ತು ಗ್ಯಾಂಡ್ ಹೋಮ್ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ಧಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ