Udayavni Special

ಅರ್ಹತಾ ತಂಡದೊಂದಿಗೆ ಭಾರತದ ಅಭಿಯಾನ

2022ರ ಮಾರ್ಚ್‌ 4-ಎಪ್ರಿಲ್‌ 3; ವನಿತಾ ಏಕದಿನ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ

Team Udayavani, Dec 16, 2020, 1:32 AM IST

ಅರ್ಹತಾ ತಂಡದೊಂದಿಗೆ ಭಾರತದ ಅಭಿಯಾನ

2022ರ ವನಿತಾ ಏಕದಿನ ವಿಶ್ವಕಪ್‌ ವೇಳಾಪಟ್ಟಿ ಪ್ರಕಟಿಸಿದ ಸಂದರ್ಭ ಟ್ರೋಫಿಯೊಂದಿಗೆ ಆ್ಯಮಿ ಸಾಟರ್ಕ್‌ವೈಟ್‌, ರಿಚರ್ಡ್‌ ಹ್ಯಾಡ್ಲಿ, ಲಿಯಾ ತಹುಹು.

ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಮಂಗಳವಾರ ಪುನಾರಚನೆಗೊಂಡ 2022ರ ವನಿತಾ ಏಕದಿನ ವಿಶ್ವಕಪ್‌ ಕೂಟದ 31 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಭಾರತವು ಮಾ. 6ರಂದು ನಡೆಯುವ ಪಂದ್ಯದಲ್ಲಿ ಅರ್ಹತಾ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ನ್ಯೂಜಿಲ್ಯಾಂಡಿನ ತೌರಂಗ ಬೇ ಓವಲ್‌ನಲ್ಲಿ ಈ ಪಂದ್ಯ ನಡೆಯಲಿದೆ. ಎಂಟು ತಂಡಗಳ ರೌಂಡ್‌ ರಾಬಿನ್‌ ಮಾದರಿಯ ಈ ಕೂಟದ ಇನ್ನೆರಡು ಪಂದ್ಯಗಳಲ್ಲಿಯೂ ಭಾರತವು ಅರ್ಹತಾ ತಂಡಗಳನ್ನೇ ಎದರಿಸಲಿದೆ. ಈ ಎರಡು ಪಂದ್ಯಗಳು ಸೆಡ್ಡನ್‌ ಪಾರ್ಕ್‌ ಮತ್ತು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.

ಪ್ರಮುಖ ಪಂದ್ಯಗಳಲ್ಲಿ ತೌರಂಗದಲ್ಲಿ ಮಾ. 16ರಂದು ನಡೆಯುವ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ಇದು ಲಾರ್ಡ್ಸ್‌ನಲ್ಲಿ 2017ರ ವನಿತಾ ವಿಶ್ವಕಪ್‌ ಫೈನಲ್‌ನ ಪುನರಾವರ್ತಿತ ಪಂದ್ಯವಾಗಲಿದೆ. ಭಾರತ ಇನ್ನೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯವನ್ನು ಮಾ. 19 (ಈಡನ್‌ ಪಾರ್ಕ್‌) ಮತ್ತು ದಕ್ಷಿಣ ಆಫ್ರಿಕಾವನ್ನು ಮಾ. 27 (ಕ್ರೈಸ್ಟ್‌ಚರ್ಚ್‌) ರಂದು ಎದುರಿಸಲಿದೆ.

ಈ ವಿಶ್ವಕಪ್‌ ಕ್ರಿಕೆಟ್‌ 2021ರ ಫೆಬ್ರವರಿ-ಮಾರ್ಚ್‌ ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್‌-19ನಿಂದಾಗಿ ಮುಂದೂಡಲ್ಪಟ್ಟ ಈ ಕೂಟ 2022ರ ಮಾ. 4ರಿಂದ ಎ. 3ರ ವರೆಗೆ ನಡೆಯಲಿದ್ದು ಮಾ. 30 ಮತ್ತು 31ರಂದು 2 ಸೆಮಿ ಫೈನಲ್ಸ್‌ ಹಾಗೂ ಎ. 3ರಂದು ಫೈನಲ್‌ ಪಂದ್ಯ ನಡೆಯಲಿದೆ.

ಎಂಟು ತಂಡಗಳು
ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್‌ ಬಳಿಕ ವನಿತಾ ಏಕದಿನ ವಿಶ್ವಕಪ್‌ ಜಾಗತಿಕ ಮಟ್ಟದಲ್ಲಿ ನಡೆಯಲಿರುವ ಬೃಹತ್‌ ಕೂಟವಾಗಿದೆ. ಈ ಕೂಟದಲ್ಲಿ ಬಲಿಷ್ಠ ಎಂಟು ತಂಡಗಳು ಭಾಗವಹಿಸಲಿದ್ದು ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಪಂದ್ಯಗಳು ಆಕ್ಲಂಡ್‌, ತೌರಂಗ, ಹ್ಯಾಮಿಲ್ಟನ್‌, ವೆಲ್ಲಿಂಗ್ಟನ್‌, ಕ್ರೈಸ್ಟ್‌ಚರ್ಚ್‌ ಮತ್ತು ಡುನೆಡಿನ್‌ನಲ್ಲಿ ನಡೆಯಲಿವೆ.

ಭಾರತವಲ್ಲದೇ ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯ, ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ವಿಶ್ವಕಪ್‌ಗೆ ಅರ್ಹತೆ ಗಳಿಸಿವೆ. ಇನ್ನುಳಿದ ಮೂರು ತಂಡಗಳು ಐಸಿಸಿ ಅರ್ಹತಾ ಕೂಟದಿಂದ ಆಯ್ಕೆಯಾಗಲಿವೆ. ಅರ್ಹತಾ ಕೂಟವು ಮುಂದಿನ ವರ್ಷದ ಜೂ. 26ರಿಂದ ಜುಲೈ 10ರ ವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ.

ಬಹುಮಾನ ನಿಧಿ
ಈ ಕೂಟವು 5.5 ಮಿಲಿಯನ್‌ ನ್ಯೂಜಿಲ್ಯಾಂಡ್‌ ಡಾಲರ್‌ ಬಹುಮಾನ ನಿಧಿಯನ್ನು ಒಳಗೊಂಡಿದೆ. ಇದು 2017ರ ವಿಶ್ವಕಪ್‌ಗಿಂತ ಶೇ. 70ರಷ್ಟು ಮತ್ತು 2013ರ ವಿಶ್ವಕಪ್‌ಗಿಂತ ಶೇ. ನೂರರಷ್ಟು ಹೆಚ್ಚಾಗಿದೆ. ಎಲ್ಲ ಪಂದ್ಯಗಳನ್ನು ಸ್ಟಾರ್‌ ಇಂಡಿಯಾ ನೇರ ಪ್ರಸಾರ ಮಾಡಲಿದೆ.

ಟಾಪ್ ನ್ಯೂಸ್

12aa

ರೈತ ಪ್ರತಿಭಟನೆಯಲ್ಲಿ ಕ್ರಿಮಿನಲ್ ಗಳು ಸೇರಿ ತಾಲಿಬಾನ್ ವರ್ತನೆ: ಬಿಜೆಪಿ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 15,981 ಕೋವಿಡ್ ಪ್ರಕರಣ ಪತ್ತೆ, 166 ಮಂದಿ ಸಾವು

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 15,981 ಕೋವಿಡ್ ಪ್ರಕರಣ ಪತ್ತೆ, 166 ಮಂದಿ ಸಾವು

michael vaughan on rahul dravid

‘ಹುಷಾರಾಗಿರಿ…’: ದ್ರಾವಿಡ್ ನೇಮಕದ ಸುದ್ದಿ ಕೇಳಿ ವಿಶ್ವ ಕ್ರಿಕೆಟ್ ಗೆ ಎಚ್ಚರಿಸಿದ ವಾನ್!

ಇದು 14ನೇ ಬಾರಿಯ ಏರಿಕೆ; ಮುಂಬೈನಲ್ಲಿ ಪೆಟ್ರೋಲ್‌ ಲೀಟರ್‌ಗೆ 111.09 ರೂ.

ಇದು 14ನೇ ಬಾರಿಯ ಏರಿಕೆ; ಮುಂಬೈನಲ್ಲಿ ಪೆಟ್ರೋಲ್‌ ಲೀಟರ್‌ಗೆ 111.09 ರೂ.

1-aaa

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದ ಸಿಎಂ

ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಪುತ್ತೂರು: ಎಂಡೋ ಸಲ್ಫಾನ್ ಪೀಡಿತ ಬಾಲಕನ ಮೇಲೆ ಅತ್ಯಾಚಾರ; ಸಲಿಂಗ ಕಾಮುಕನ ಬಂಧನ

ಪುತ್ತೂರು:ಕಬ್ಬು ಕೊಡಿಸುವುದಾಗಿ ಹೇಳಿ ಬಾಲಕನ ಮೇಲೆ ಅತ್ಯಾಚಾರ; ಆರೋಪಿ ಬಂಧನ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

michael vaughan on rahul dravid

‘ಹುಷಾರಾಗಿರಿ…’: ದ್ರಾವಿಡ್ ನೇಮಕದ ಸುದ್ದಿ ಕೇಳಿ ವಿಶ್ವ ಕ್ರಿಕೆಟ್ ಗೆ ಎಚ್ಚರಿಸಿದ ವಾನ್!

ಮಾಜಿ ಅಂಡರ್19 ನಾಯಕ, ಸೌರಾಷ್ಟ್ರದ ಯುವ ಆಟಗಾರ ಹೃದಯಾಘಾತದಿಂದ ನಿಧನ!

ಮಾಜಿ ಅಂಡರ್19 ನಾಯಕ, ಸೌರಾಷ್ಟ್ರದ ಯುವ ಆಟಗಾರ ಹೃದಯಾಘಾತದಿಂದ ನಿಧನ!

rahul dravid

ಕೊನೆಗೂ ಫಲ ನೀಡಿತು ಗಂಗೂಲಿ ಪ್ರಯತ್ನ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

ಐಪಿಎಲ್ ಟ್ರೋಫಿಯ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮಾಹಿ!

ಐಪಿಎಲ್ ಟ್ರೋಫಿಯ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮಾಹಿ!

Uber Cup badminton:

ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಭಾರತ

MUST WATCH

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

ಹೊಸ ಸೇರ್ಪಡೆ

ಸೆಲಿ ತೆಗೆದುಕೊಳ್ಳುತ್ತಿದ್ದ ಯುವಕ ನೀರು ಪಾಲು

ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವಕ ನೀರು ಪಾಲು

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ: ಕವಲಗೇರಿ ಗ್ರಾಮ ವೀಕ್ಷಣೆ ಮಾಡಿದ ಧಾರವಾಡ ಡಿಸಿ

‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’: ಕವಲಗೇರಿ ಗ್ರಾಮ ವೀಕ್ಷಣೆ ಮಾಡಿದ ಧಾರವಾಡ ಡಿಸಿ

12aa

ರೈತ ಪ್ರತಿಭಟನೆಯಲ್ಲಿ ಕ್ರಿಮಿನಲ್ ಗಳು ಸೇರಿ ತಾಲಿಬಾನ್ ವರ್ತನೆ: ಬಿಜೆಪಿ

ಕೊಟ್ಟೂರಿನಲ್ಲಿ ದಸರಾ ಮಹೋತ್ಸವ  

ಕೊಟ್ಟೂರಿನಲ್ಲಿ ದಸರಾ ಮಹೋತ್ಸವ  

ದೇವನಗರಿಯಲ್ಲಿ ಅದ್ಧೂರಿ ಶೋಭಾಯಾತ್ರೆ

ದೇವನಗರಿಯಲ್ಲಿ ಅದ್ಧೂರಿ ಶೋಭಾಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.