ಬಿಸಿಸಿಐನಲ್ಲಿ ಗಂಗೂಲಿ ಅಧಿಕಾರಾವಧಿ ಮುಕ್ತಾಯ!
ಅಧ್ಯಕ್ಷರಾಗಿ ಮುಂದುವರಿಯುವುದು, ಹೊರ ನಡೆಯುವುದು ಸುಪ್ರೀಂ ಕೋರ್ಟ್ ಮೂಲಕ ನಿರ್ಧಾರ
Team Udayavani, Jul 28, 2020, 1:12 PM IST
ಮುಂಬೈ: ಕಳೆದ ವರ್ಷ ಅಕ್ಟೋಬರ್ನಲ್ಲಿ ಬಿಸಿಸಿಐ ಸಂಕಷ್ಟದಲ್ಲಿದ್ದಾಗ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದ ಸೌರವ್ ಗಂಗೂಲಿ ಅಧಿಕಾರಾವಧಿ ಮುಗಿದಿದೆ. ಆದ್ದರಿಂದ ಅವರು ಅಧ್ಯಕ್ಷರಾಗಿ ಮುಂದುವರಿಯುತ್ತಾರೋ, ಇಲ್ಲವೋ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಸದ್ಯ ಅವರನ್ನು ಮುಂದುವರಿಸುವುದು ಬಿಡುವುದು ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ.
ಲೆಕ್ಕಾಚಾರದ ಪ್ರಕಾರ ಜು.26ಕ್ಕೆ ಗಂಗೂಲಿಯ ಒಂಬತ್ತು ತಿಂಗಳ ಆಡಳಿತ ಮುಗಿದಿದೆ. ಬಿಸಿಸಿಐ ಹೊಸ ಸಂವಿಧಾನದ ಪ್ರಕಾರ ಅವರಿನ್ನು 3 ವರ್ಷ ಕಡ್ಡಾಯ ವಿಶ್ರಾಂತಿ ತೆಗೆದುಕೊಳ್ಳಬೇಕು. ರಾಜ್ಯಸಂಸ್ಥೆಗಳಲ್ಲಾಗಲೀ, ಬಿಸಿಸಿಐಯನ್ನು ಸೇರಿಸಿಯಾಗಲೀ ವ್ಯಕ್ತಿಯೊಬ್ಬರು ಸತತ 6 ವರ್ಷ ಅಧಿಕಾರ ನಡೆಸಿದ್ದರೆ ಅವರು ವಿಶ್ರಾಂತಿ ಪಡೆಯಬೇಕು ಎಂದು ಹೊಸ ನಿಯಮಗಳು ಹೇಳುತ್ತವೆ.
ಬಿಸಿಸಿಐ ಅಧ್ಯಕ್ಷರಾಗುವುದಕ್ಕೆ ಮುನ್ನವೇ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ 5 ವರ್ಷ 3 ತಿಂಗಳು ಅಧಿಕಾರ ಮುಗಿಸಿದ್ದರು. ಈಗ ಬಿಸಿಸಿಐನಲ್ಲಿ 9 ತಿಂಗಳು ಕಳೆದಿದ್ದಾರೆ. ಅಲ್ಲಿಗೆ ಮುಂದಿನ ದಾರಿ ಪ್ರಶ್ನಾರ್ಥಕವಾಗಿದೆ. ಕಡ್ಡಾಯ ವಿಶ್ರಾಂತಿ ನಿಯಮ ಬದಲಿಸಿ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದೆ. ಅದನ್ನು ಒಪ್ಪಿಕೊಂಡರೆ ಗಂಗೂಲಿ ಮುಂದುವರಿಯುತ್ತಾರೆ. ಇಲ್ಲವಾದರೆ ಅವರು ಐಸಿಸಿ ಮುಖ್ಯಸ್ಥರಾಗಲೂ ಯತ್ನಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ