ಕಾಮನ್ವೆಲ್ತ್‌ ಚಿನ್ನ ವಿಜೇತೆ ಪೂನಿಯಾರಿಂದ ಸಿನಿಮೀಯ ಸಾಹಸ

Team Udayavani, Jan 4, 2017, 12:09 PM IST

ನವದೆಹಲಿ: ಹುಡುಗಿಯರಿಗೆ ಚುಡಾಯಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಅದನ್ನು ಎದುರಿಸಿ ನಿಲ್ಲುವವರು ಕಡಿಮೆ. ಅದರಲ್ಲೂ ಮತ್ತೂಬ್ಬರಿಗೆ ನೆರವಾಗುವ ಸಾಹಸ ಮಾಡುವವರು ಇನ್ನೂ ಕಡಿಮೆ. ಆದರೆ ಕಾಮನ್‌ವೆಲ್ತ್‌ ಚಿನ್ನದ ಪದಕ ವಿಜೇತೆ ಕೃಷ್ಣಾ ಪೂನಿಯಾ ಇದೆಲ್ಲದಕ್ಕೂ ಅಪವಾದವಾಗಿದ್ದಾರೆ. ಅವರು ಹುಡುಗರ ಕಾಟಕ್ಕೆ ತುತ್ತಾಗಿದ್ದ ಮೂವರು ಹುಡುಗಿಯರ ನೆರವಿಗೆ ಧಾವಿಸಿದ್ದಾರೆ. ಹುಡುಗರನ್ನು ಓಡಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಗಿದ್ದೇನು?
ಜ.1ರಂದು ರಾಜಸ್ಥಾನದ ಚುರು ಜಿಲ್ಲೆಯ ರಾಜಗಢದಲ್ಲಿ ಈ ಘಟನೆ ನಡೆದಿದೆ. 39 ವರ್ಷದ ಕೃಷ್ಣ ಪೂನಿಯಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರೈಲ್ವೇ ಕ್ರಾಸಿಂಗ್‌ ಸಮೀಪ ಒಂದಷ್ಟು ಹುಡುಗರು ಹುಡುಗಿಯರಿಗೆ ಕಿರುಕುಳ ನೀಡುತ್ತಿರುವುದು ಕಾಣಿಸಿತು. ತಕ್ಷಣ ಕಾರು ನಿಲ್ಲಿಸಿ ಹತ್ತಿರ ಹೋಗಿ ಘಟನೆ ಏನೆಂದು ವಿಚಾರಿಸಿದರು. ಹುಡುಗರು ಕಿರುಕುಳ ನೀಡಿದ್ದನ್ನು, ಅದರಲ್ಲಿ ಒಬ್ಟಾಕೆ ಮೇಲೆ ಕೈ ಮಾಡಿದ್ದನ್ನು ಅಳುತ್ತಲೇ ವಿವರಿಸಿದರು. ತಕ್ಷಣ ಆ ಹುಡುಗರನ್ನು ಪೂನಿಯಾ ಅಟ್ಟಿಸಿಕೊಂಡು ಹೋದರು. ಅದರಲ್ಲಿ ಇಬ್ಬರು ಪರಾರಿಯಾದರೆ ಒಬ್ಬ ಕೈಗೆ ಸಿಕ್ಕ. ತಕ್ಷಣ ಆತನನ್ನು ಪೊಲೀಸರ ಕೈಗೆ ಒಪ್ಪಿಸಲಾಯಿತು.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

2010ರ ಕಾಮನ್‌ ವೆಲ್ತ್‌ ಗೇಮ್ಸ್‌ನಲ್ಲಿ ಪೂನಿಯಾ ಚಿನ್ನದ ಪದಕ ಗೆದ್ದಿದ್ದಾರೆ. ಎರಡು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದಾರೆ.

ಕೇವಲ ಎರಡು ನಿಮಿಷದ ದಾರಿಯಲ್ಲಿ ಪೊಲೀಸ್‌ ಠಾಣೆಯಿದೆ. ಇಂತಹ ಸ್ಥಳದಲ್ಲಿಯೂ ಮಹಿಳೆಯರ ಮೇಲೆ ಕಿರುಕುಳ ನಡೆಯುತ್ತಿದೆ.
* ಕೃಷ್ಣಾ ಪೂನಿಯಾ
 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ