Udayavni Special

110 ಮೀ. ಹರ್ಡಲ್ಸ್‌: ಮೆಕ್‌ಲೋಡ್‌ ಮಿಂಚು


Team Udayavani, Aug 9, 2017, 3:24 PM IST

09-SPORTS-2.jpg

ಲಂಡನ್‌: ಜಮೈಕಾದ ಒಮರ್‌ ಮೆಕ್‌ಲೋಡ್‌ ವಿಶ್ವ ಆ್ಯತ್ಲೆಟಿಕ್ಸ್‌ 110 ಮೀ. ಹರ್ಡಲ್ಸ್‌ ನಲ್ಲಿ ಮಿಂಚಿನ ಓಟ ದಾಖಲಿಸಿ ಚಿನ್ನದ ಪದಕದಿಂದ ಸಿಂಗಾರಗೊಂಡಿದ್ದಾರೆ. ತಮ್ಮ ಈ ಸಾಧನೆಯನ್ನು ಅಮ್ಮ ಹಾಗೂ ನಾಡಿನ ಸೂಪರ್‌ಸ್ಟಾರ್‌ ಉಸೇನ್‌ ಬೋಲ್ಟ್ ಅವರಿಗೆ ಅರ್ಪಿಸಿದ್ದಾರೆ.

ಮೆಕ್‌ಲೋಡ್‌ ಅವರ ಈ ಸಾಧನೆಯಿಂದ ಅಮೆರಿಕದ ಅರೀಸ್‌ ಮೆರಿಟ್ಸ್‌ ಅವರ ಕನಸು ನುಚ್ಚುನೂರಾಯಿತು. 2012ರ ಒಲಿಂಪಿಕ್‌ ಚಾಂಪಿ ಯನ್‌ ಆಗಿದ್ದ ಮೆರಿಟ್ಸ್‌ 110 ಮೀ. ಹರ್ಡಲ್ಸ್‌ ನ ವಿಶ್ವದಾಖಲೆಯ ಒಡೆಯನೂ ಹೌದು. ಮೂತ್ರ ಪಿಂಡ ಕಸಿ ಮಾಡಿಕೊಂಡ 2 ವರ್ಷಗಳ ಬಳಿಕ ಪದಕವೊಂದನ್ನು ಗೆಲ್ಲುವುದು ಮೆರಿಟ್ಸ್‌ ಕನಸಾಗಿತ್ತು. ಆದರೆ ಅವರು 5ನೇ ಸ್ಥಾನಕ್ಕೆ ಕುಸಿಯಲ್ಪಟ್ಟರು.

23ರ ಹರೆಯದ ಮೆಕ್‌ಲೋಡ್‌ ಆರಂಭ ದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದರು. ಅಂತಿಮವಾಗಿ 13.04 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಕಳೆದ ಬಾರಿಯ ಚಾಂಪಿಯನ್‌ ರಶ್ಯದ ಸಗೇìಯಿ ಶುಬೆಂಕೋವ್‌ ಬೆಳ್ಳಿ ಹಾಗೂ ಹಂಗೇರಿಯ ಬಲಾಝ್ ಬಾಜಿ ಅಚ್ಚರಿಯ ಕಂಚು ಗೆದ್ದರು. ರಶ್ಯಕ್ಕೆ ಆ್ಯತ್ಲೆಟಿಕ್ಸ್‌ ನಿಷೇಧವಿದ್ದುದರಿಂದ ಶುಬೆಂಕೋವ್‌ ಸ್ವತಂತ್ರವಾಗಿ ಸ್ಪರ್ಧಿಸಿದ್ದರು.

“ನನ್ನ ಅಮ್ಮ ಅರ್ನೆಲ್ಲಾ ನೈಟ್‌ ಮಾರಿಸ್‌ ಈ ಸ್ಪರ್ಧೆಯನ್ನು ಸ್ಟಾಂಡ್‌ನ‌ಲ್ಲಿ ಕುಳಿತು ವೀಕ್ಷಿಸುತ್ತಿದ್ದಳು. ಹೀಗಾಗಿ ನಾನಿಂದು ಚಾಂಪಿಯನ್‌ ಆಗಲೇಬೇಕಿತ್ತು. ಇದರಲ್ಲಿ ಯಶಸ್ಸು ಕಂಡಿದ್ದೇನೆ. ಈ ಯಶಸ್ಸನ್ನು ಅಮ್ಮನಿಗೆ ಅರ್ಪಿಸುತ್ತೇನೆ. ಲೆಜೆಂಡ್ರಿ ಉಸೇನ್‌ ಬೋಲ್ಟ್, ನಿಮಗೂ ಅರ್ಪಿಸುತ್ತಿದ್ದೇನೆ…’ ಎಂದು ಮೆಕ್‌ಲೋಡ್‌ ಹೇಳಿದರು. 

ಉಸೇನ್‌ ಬೋಲ್ಟ್ ಮತ್ತು ಡಬಲ್‌ ಒಲಿಂಪಿಕ್‌ ಚಾಂಪಿಯನ್‌ ವನಿತಾ ಸ್ಪ್ರಿಂಟರ್‌ ಎಲೈನ್‌ ಥಾಮ್ಸನ್‌ 100 ಮೀ. ವಿಭಾಗದಲ್ಲಿ ಚಿನ್ನ ತರಲು ವಿಫ‌ಲರಾದ ಬಳಿಕ ಜಮೈಕಾ, ಮೆಕ್‌ಲೋಡ್‌ ಮೇಲೆ ನಿರೀಕ್ಷೆಯ ಮೂಟೆಯನ್ನೇ ಇರಿಸಿತ್ತು. 

“ಜಮೈಕಾದ ಬಾವುಟವನ್ನು ಬಾನೆತ್ತರಕ್ಕೆ ಹಾರಿಸಬೇಕೆಂಬ ಅಭಿಲಾಷೆ ಹೊತ್ತು ನಾನಿಲ್ಲಿಗೆ ಬಂದಿದ್ದೆ. ತೀವ್ರ ಒತ್ತಡದಲ್ಲಿದ್ದೆ. ಇದನ್ನು ನಾನು ಸವಾಲಾಗಿ ತೆಗೆದುಕೊಂಡೆ. ವೀಕ್ಷಕರ ಪ್ರೋತ್ಸಾಹ ಕೂಡ ಅಮೋಘ ಮಟ್ಟದಲ್ಲಿತ್ತು…’ ಎಂದು ಮೆಕ್‌ಲೋಡ್‌ ನುಡಿದರು.

ಟಾಪ್ ನ್ಯೂಸ್

skit

ಸ್ಕಿಟ್‌ನಲ್ಲಿ ಭಾವನೆಗಳಿಗೆ ಧಕ್ಕೆ: ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಏಮ್ಸ್ ವಿದ್ಯಾರ್ಥಿ ಸಂಘ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

k-r

ಮಹಾ ಮಳೆಗೆ 21 ಮಂದಿ ಬಲಿ: ಕೇರಳ ಸಿಎಂಗೆ ಪ್ರಧಾನಿ ಮೋದಿ ಕರೆ

rain

ಉತ್ತರಾಖಂಡದಲ್ಲಿ ಭಾರಿ ಮಳೆ ಎಚ್ಚರಿಕೆ : ತುರ್ತು ಪರಿಸ್ಥಿತಿಗೆ ಅಗತ್ಯ ವ್ಯವಸ್ಥೆ

ಹಣಕಾಸು ಸಚಿವಾಲಯ ಸರ್ಕಾರಿ ಆಸ್ತಿಗಳ ಮೋನಿಟೈಷೇಶನ್ ಗಾಗಿ ಕ್ಯಾಬಿನೆಟ್‌ ಅನುಮೋದನೆ ಪಡೆಯಲಿದೆ

ಸಿಪಿಎಸ್‌ಇ ಒಡೆತನದ ಭೂಮಿ: ಹಣಕಾಸು ಸಚಿವಾಲಯದಿಂದ ಹೊಸ ಚಿಂತನೆ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ ಬೊಮ್ಮಾಯಿ

hgyuy

“ಗೋರ್ಖಾ” ಪೋಸ್ಟರ್‍ ನ  ತಪ್ಪು ತಿದ್ದಿದ ಮಾಜಿ ಯೋಧನಿಗೆ ಅಕ್ಷಯ್‌ ಧನ್ಯವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI invites Job Applications for Team India mens team

ದ್ರಾವಿಡ್ ನೇಮಕ ಸುದ್ದಿಯ ನಡುವೆ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

8ನೇ ಬಾರಿ ಸಾಫ್ ಕಪ್ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಚೆಟ್ರಿ

8ನೇ ಬಾರಿ ಸಾಫ್ ಕಪ್ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಚೆಟ್ರಿ

ಐಪಿಎಲ್‌ ಟ್ರೋಫಿ ಎತ್ತಿದ ಚೇತೇಶ್ವರ್‌ ಪೂಜಾರ!

ಐಪಿಎಲ್‌ ಟ್ರೋಫಿ ಎತ್ತಿದ ಚೇತೇಶ್ವರ್‌ ಪೂಜಾರ!

ಐಸಿಸಿ ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ಇಂದಿನಿಂದ ರೇಸ್‌

ಐಸಿಸಿ ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ಇಂದಿನಿಂದ ರೇಸ್‌

ಚೈತನ್ಯ “ಇನ್ಫಿನಿಟಿ ಲರ್ನ್”ಗೆ ರೋಹಿತ್‌ ಶರ್ಮಾ ರಾಯಭಾರಿ

ಚೈತನ್ಯ “ಇನ್ಫಿನಿಟಿ ಲರ್ನ್”ಗೆ ರೋಹಿತ್‌ ಶರ್ಮಾ ರಾಯಭಾರಿ

MUST WATCH

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

ಹೊಸ ಸೇರ್ಪಡೆ

jjkjhgfdsa

ಯೋಜನೆಗಳ ಸದುಪಯೋಗ ಮಾಡಿಕೊಳ್ಳಿ : ಪಾಟೀಲ

gjhgfds

ಗ್ರಾಮಗಳ ಸ್ಥಳಾಂತರವೇ ಪರಿವಾರವಲ್ಲ

gtjhgfdswq

ಕುಮಾರಿಯರಿಗೆ ಉಡಿ ತುಂಬಿದ ನಾಲವಾರ ಶ್ರೀ

hfghftytr

ಗುಳದಾಳಕ್ಕೆ ನಡೆದುಕೊಂಡು ಬಂದ ಜಿಲ್ಲಾಧಿಕಾರಿ 

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.