19 ವಯೋಮಿತಿ ವಿಶ್ವಕಪ್ ನಲ್ಲಿ ಭಾರತದ ಏಕೈಕ ಅಂಪೈರ್
Team Udayavani, Jan 9, 2020, 2:07 PM IST
ಮುಂಬೈ: ಜ.17ರಿಂದ ದ.ಆಫ್ರಿಕಾದಲ್ಲಿ ನಡೆಯಲಿರುವ 19 ವಯೋಮಿತಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ 16 ಅಂಪೈರ್ ಗಳು ಕಾರ್ಯನಿರ್ವಹಿಸಲಿದ್ದಾರೆ. ವಿಶೇಷವೆಂದರೆ ವಿಶ್ವದ ಅತ್ಯಂತ ಬಲಿಷ್ಠ, ಶ್ರೀಮಂತ ಕ್ರಿಕೆಟ್ ತಂಡ ಎನಿಸಿಕೊಂಡಿ ರುವ ಭಾರತದಿಂದ ಕಾರ್ಯನಿರ್ವಹಿಸುತ್ತಿರುವ ಅಂಪೈರ್ ಒಬ್ಬರು ಮಾತ್ರ!
ಒಟ್ಟು 16 ಅಂಪೈರ್, 19 ಮಂದಿ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಅಂಪೈರ್ ಅನಿಲ್ ಚೌಧರಿ. 54 ವರ್ಷದ ಅವರು ಇಲ್ಲಿಯವರೆಗೆ 20 ಅಂತಾರಾಷ್ಟ್ರೀಯ ಏಕದಿನ, 27 ಟಿ20 ಪಂದ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ದೆಹಲಿಯ ಇವರು ಹಲವು 19 ವಯೋಮಿತಿ ವಿಶ್ವಕಪ್ ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಭಾರತದ ಅಂಪೈರ್‌ಗಳ ಗುಣಮಟ್ಟದ ಬಗ್ಗೆಯೂ ಅಪಸ್ವರವಿದೆ. ದೇಶೀಯ ಪಂದ್ಯಗಳಲ್ಲಿ ಕಳಪೆ ಅಂಪೈರಿಂಗ್ ಬಗ್ಗೆ ತೀವ್ರ ಆರೋಪವಿದೆ. ಆದ್ದರಿಂದ ಇದನ್ನು ನೀಗಿಸಲು ತಂತ್ರಜ್ಞಾನದ ಮೊರೆಹೋಗಲು ಬಿಸಿಸಿಐ ತೀರ್ಮಾನಿಸಿದೆ. ಹಾಗೆಯೇ ವಿಶ್ವದ ಉನ್ನತ ಅಂಪೈರ್‌ಗಳ ಪಟ್ಟಿಯಲ್ಲೂ ಭಾರತೀಯರು ಸ್ಥಾನ ಕಳೆದುಕೊಂಡಿದ್ದಾರೆ