ಓಪನಿಂಗ್‌ ವೈಫ‌ಲ್ಯ; ಕೊಹ್ಲಿ-ರಹಾನೆ ರಕ್ಷಣೆ


Team Udayavani, Dec 16, 2018, 6:00 AM IST

ap12152018000050b.jpg

ಪರ್ತ್‌: ಆಸ್ಟ್ರೇಲಿಯದ ಸವಾಲಿನ ಮೊತ್ತಕ್ಕೆ ಜವಾಬು ನೀಡುವ ಹಾದಿಯಲ್ಲಿ ಅವಳಿ ಆರಂಭಿಕ ಆಘಾತಕ್ಕೆ ಸಿಲುಕಿದ ಭಾರತವನ್ನು ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಸೇರಿಕೊಂಡು ಮೇಲೆತ್ತಿದ್ದಾರೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಟೀಮ್‌ ಇಂಡಿಯಾ 3 ವಿಕೆಟಿಗೆ 172 ರನ್‌ ಗಳಿಸಿ ಚೇತರಿಸಿಕೊಂಡಿದೆ.

ಇದಕ್ಕೂ ಮುನ್ನ 6 ವಿಕೆಟಿಗೆ 277 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯ 326ಕ್ಕೆ ಆಲೌಟ್‌ ಆಗಿತ್ತು. ರವಿವಾರದ ಆಟ ಭಾರತದ ಪಾಲಿಗೆ ನಿರ್ಣಾಯಕ. ಆತಿಥೇಯರ ಮೊತ್ತಕ್ಕಿಂತ ಹಿಂದುಳಿಯದೆ, ಸಾಧ್ಯವಾದರೆ 375ರ ತನಕ ಮೊತ್ತವನ್ನು ವಿಸ್ತರಿಸಿದರೆ ಟೀಮ್‌ ಇಂಡಿಯಾ ಪರ್ತ್‌ ಪರೀಕ್ಷೆಯಲ್ಲಿ ಅರ್ಧ ಗೆದ್ದಂತೆ. ವಿರಾಟ್‌ ಕೊಹ್ಲಿ ಕ್ರೀಸ್‌ ಆಕ್ರಮಿಸಿಕೊಂಡರೆ ಇದೇನೂ ಅಸಾಧ್ಯವಲ್ಲ. ಹನುಮ ವಿಹಾರಿ, ರಿಷಬ್‌ ಪಂತ್‌ ಮೇಲೂ ಭಾರತ ಭಾರೀ ನಿರೀಕ್ಷೆ ಇರಿಸಿದೆ.

ವಿಜಯ್‌, ರಾಹುಲ್‌ ವೈಫ‌ಲ್ಯ
ಖಾತೆ ತೆರೆಯದ ಮುರಳಿ ವಿಜಯ್‌, ಕೇವಲ 2 ರನ್‌ ಮಾಡಿದ ಕೆ.ಎಲ್‌. ರಾಹುಲ್‌ 8 ರನ್‌ ಆಗುವಷ್ಟರಲ್ಲಿ ಆಸೀಸ್‌ ವೇಗಿಗಳಿಗೆ ಬೌಲ್ಡ್‌ ಆಗಿ ಪೆವಿಲಿಯನ್‌ ಸೇರಿಕೊಂಡಾಗ ಭಾರತ ತೀವ್ರ ಆತಂಕಕ್ಕೆ ಒಳಗಾಗಿತ್ತು. ಈ ಹಂತದಲ್ಲಿ ಅಡಿಲೇಡ್‌ ಟೆಸ್ಟ್‌ ಪಂದ್ಯದ ಹೀರೋ ಚೇತೇಶ್ವರ್‌ ಪೂಜಾರ ಕ್ರೀಸ್‌ ಕಾಯುವ ಕಾರ್ಯದಲ್ಲಿ ಒಂದಿಷ್ಟು ಯಶಸ್ಸು ಸಾಧಿಸಿದರು. ಪೂಜಾರ-ಕೊಹ್ಲಿ ಸುಮಾರು 33 ಓವರ್‌ಗಳ ದಾಳಿ ನಿಭಾಯಿಸಿ ಮೊತ್ತವನ್ನು 82ಕ್ಕೆ ಏರಿಸಿದರು. ಆಗ 103 ಎಸೆತಗಳಿಂದ 24 ರನ್‌ ಮಾಡಿದ ಪೂಜಾರ ಕೀಪರ್‌ ಪೇನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಹೊಡೆದದ್ದು ಒಂದೇ ಬೌಂಡರಿ.

ಇಲ್ಲಿಂದ ಮುಂದೆ ನಾಯಕ-ಉಪನಾಯಕರ ಜುಗಲ್‌ಬಂದಿ ಶುರುವಾಯಿತು. ಅಲ್ಲಿಯ ತನಕ ಮೇಲುಗೈ ಕನಸು ಕಾಣುತ್ತಿದ್ದ ಕಾಂಗರೂಗಳ ಮೇಲೆ ಇವರಿಬ್ಬರು ಸೇರಿಕೊಂಡು ಸವಾರಿ ಮಾಡತೊಡಗಿದರು. ಭಾರತ ನಿಧಾನವಾಗಿ ಚೇತರಿಸತೊಡಗಿತು.

ಅಡಿಲೇಡ್‌ನ‌ಲ್ಲಿ ವಿಫ‌ಲರಾಗಿದ್ದ ವಿರಾಟ್‌ ಕೊಹ್ಲಿ ಪರ್ತ್‌ ಟ್ರ್ಯಾಕ್‌ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿ ಅಜೇಯ 82 ರನ್‌ ಬಾರಿಸಿದ್ದಾರೆ. 181 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಸೇರಿದೆ. ಸದ್ಯ ಇದು ಕೊಹ್ಲಿ ಅವರ 20ನೇ ಅರ್ಧ ಶತಕವಾಗಿದೆ. ರವಿವಾರ ಇದು 25ನೇ ಸೆಂಚುರಿಯಾಗಿ ಪರಿವರ್ತನೆಯಾಗುವ ಎಲ್ಲ ಸಾಧ್ಯತೆಗಳಿವೆ.

ಅಜಿಂಕ್ಯ ರಹಾನೆ ಕೂಡ ದಿನದಾಟದ ಕೊನೆಯಲ್ಲಿ ಅರ್ಧ ಶತಕದ ಸಂಭ್ರಮ ಆಚರಿಸಿದರು. 103 ಎಸೆತ ಎದುರಿಸಿರುವ ರಹಾನೆ 51 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 6 ಬೌಂಡರಿ ಜತೆಗೆ ಒಂದು ಸಿಕ್ಸರ್‌ ಕೂಡ ಸಿಡಿಸುವ ಮೂಲಕ ಕ್ರೀಸ್‌ ಆಕ್ರಮಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ. ಕೊಹ್ಲಿ-ರಹಾನೆ ಜತೆಯಾಟದಲ್ಲಿ ಮುರಿಯದ 4ನೇ ವಿಕೆಟಿಗೆ 90 ರನ್‌ ಒಟ್ಟುಗೂಡಿದೆ. ರವಿವಾರದ ಮೊದಲ ಅವಧಿಯನ್ನು ಇವರಿಬ್ಬರು ಎಚ್ಚರಿಕೆಯಿಂದ ನಿಭಾಯಿಸುವುದು ಮುಖ್ಯ. ಭಾರತವಿನ್ನೂ 154 ರನ್ನುಗಳ ಹಿನ್ನಡೆಯಲ್ಲಿದೆ.

326ಕ್ಕೆ ಏರಿದ ಆಸ್ಟ್ರೇಲಿಯ
ದ್ವಿತೀಯ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯ, ಉಳಿದ 4 ವಿಕೆಟ್‌ಗಳ ನೆರವಿನಿಂದ 49 ರನ್‌ ಪೇರಿಸಿತು. ನಾಯಕ ಪೇನ್‌-ಕಮಿನ್ಸ್‌ ಸೇರಿಕೊಂಡು ಮೊತ್ತವನ್ನು 310ರ ತನಕ ವಿಸ್ತರಿಸಿದರು. ಆಗ ಇಬ್ಬರೂ ಒಟ್ಟೊಟ್ಟಿಗೆ ಔಟಾಗಿ ಪೆವಿಲಿಯನ್‌ ಸೇರಿಕೊಂಡರು. ಕೊನೆಯಲ್ಲಿ ಸ್ಟಾರ್ಕ್‌ ಮತ್ತು ಹ್ಯಾಝಲ್‌ವುಡ್‌ ಅವರನ್ನು ಇಶಾಂತ್‌ ಸತತ ಎಸೆತಗಳಲ್ಲಿ ಕೆಡವಿದರು.41ಕ್ಕೆ 4 ವಿಕೆಟ್‌ ಕಿತ್ತ ಇಶಾಂತ್‌ ಶರ್ಮ ಭಾರತದ ಯಶಸ್ವಿ ಬೌಲರ್‌. ಬುಮ್ರಾ, ಉಮೇಶ್‌ ಯಾದವ್‌ ಮತ್ತು ವಿಹಾರಿ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌

(ನಿನ್ನೆ 6 ವಿಕೆಟಿಗೆ)        277
ಟಿಮ್‌ ಪೇನ್‌    ಎಲ್‌ಬಿಡಬ್ಲ್ಯು ಬುಮ್ರಾ    38
ಪ್ಯಾಟ್‌ ಕಮಿನ್ಸ್‌    ಬಿ ಯಾದವ್‌    19
ಮಿಚೆಲ್‌ ಸ್ಟಾರ್ಕ್‌    ಸಿ ಪಂತ್‌ ಬಿ ಇಶಾಂತ್‌    6
ನಥನ್‌ ಲಿಯೋನ್‌    ಔಟಾಗದೆ    9
ಜೋಶ್‌ ಹ್ಯಾಝಲ್‌ವುಡ್‌    ಸಿ ಪಂತ್‌ ಬಿ ಇಶಾಂತ್‌    0
ಇತರ        19
ಒಟ್ಟು  (ಆಲೌಟ್‌)        326
ವಿಕೆಟ್‌ ಪತನ: 7-310, 8-310, 9-326.
ಬೌಲಿಂಗ್‌:
ಇಶಾಂತ್‌ ಶರ್ಮ        20.3-7-41-4
ಜಸ್‌ಪ್ರೀತ್‌ ಬುಮ್ರಾ        26-8-53-2
ಉಮೇಶ್‌ ಯಾದವ್‌        23-3-78-2
ಮೊಹಮ್ಮದ್‌ ಶಮಿ        24-3-80-0
ಹನುಮ ವಿಹಾರಿ        14-1-53-2
ಮುರಳಿ ವಿಜಯ್‌        1-0-10-0

ಭಾರತ ಪ್ರಥಮ ಇನ್ನಿಂಗ್ಸ್‌
ಕೆ.ಎಲ್‌. ರಾಹುಲ್‌    ಬಿ ಹ್ಯಾಝಲ್‌ವುಡ್‌    2
ಮುರಳಿ ವಿಜಯ್‌    ಬಿ ಸ್ಟಾರ್ಕ್‌    0
ಚೇತೇಶ್ವರ್‌ ಪೂಜಾರ    ಸಿ ಪೇನ್‌ ಬಿ ಸ್ಟಾರ್ಕ್‌    24
ವಿರಾಟ್‌ ಕೊಹ್ಲಿ    ಬ್ಯಾಟಿಂಗ್‌    82
ಅಜಿಂಕ್ಯ ರಹಾನೆ    ಬ್ಯಾಟಿಂಗ್‌    51
ಇತರ        13
ಒಟ್ಟು  (3 ವಿಕೆಟಿಗೆ)        172
ವಿಕೆಟ್‌ ಪತನ: 1-6, 2-8, 3-82.
ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌        14-4-42-2
ಜೋಶ್‌ ಹ್ಯಾಝಲ್‌ವುಡ್‌        16-7-50-1
ಪ್ಯಾಟ್‌ ಕಮಿನ್ಸ್‌        17-3-40-0
ನಥನ್‌ ಲಿಯೋನ್‌        22-4-34-0

ಎಕ್ಸ್‌ಟ್ರಾ ಇನ್ನಿಂಗ್ಸ್‌
* 2015ರ ಬಳಿಕ ಭಾರತದ ಆರಂಭಿಕರಿಬ್ಬರೂ ಒಂದಂಕಿಯ ರನ್ನಿಗೆ ಬೌಲ್ಡ್‌ ಆಗಿ ಔಟಾದರು. ಅಂದು ಶ್ರೀಲಂಕಾ ವಿರುದ್ಧದ ಕೊಲಂಬೊ ಟೆಸ್ಟ್‌ನಲ್ಲಿ ರಾಹುಲ್‌ (2) ಮತ್ತು ಪೂಜಾರ (0) ಬೌಲ್ಡ್‌ ಆಗಿದ್ದರು.
* 1986ರ ಬಳಿಕ ಆಸ್ಟ್ರೇಲಿಯದಲ್ಲಿ ಭಾರತದ ಆರಂಭಿಕರಿಬ್ಬರೂ ಬೌಲ್ಡ್‌ ಆದರು. 1986ರ ಸಿಡ್ನಿ ಟೆಸ್ಟ್‌ನಲ್ಲಿ ಸುನೀಲ್‌ ಗಾವಸ್ಕರ್‌ ಮತ್ತು ಕೆ. ಶ್ರೀಕಾಂತ್‌ ಇದೇ ರೀತಿ ಔಟ್‌ ಆಗಿದ್ದರು.
* ವಿರಾಟ್‌ ಕೊಹ್ಲಿ-ಅಜಿಂಕ್ಯ ರಹಾನೆ ಆಸ್ಟ್ರೇಲಿಯದಲ್ಲಿ ಆಡಲಾದ ಟೆಸ್ಟ್‌ ಪಂದ್ಯಗಳಲ್ಲಿ 4ನೇ ವಿಕೆಟಿಗೆ 615 ರನ್‌ ಪೇರಿಸಿದರು. ಇದೊಂದು ದಾಖಲೆ. ಇಂಗ್ಲೆಂಡಿನ ಪಾಲ್‌ ಕಾಲಿಂಗ್‌ವುಡ್‌-ಕೆವಿನ್‌ ಪೀಟರ್‌ಸನ್‌ 601 ರನ್‌ ಒಟ್ಟುಗೂಡಿಸಿದ ದಾಖಲೆ ಪತನಗೊಂಡಿತು.
* ಕೊಹ್ಲಿ-ರಹಾನೆ ಈವರೆಗೆ ಆಸ್ಟ್ರೇಲಿಯದಲ್ಲಿ 7 ಜತೆಯಾಟಗಳಲ್ಲಿ ಕಾಣಿಸಿಕೊಂಡಿದ್ದಾರೆ. 2 ಸಲ ಶತಕದ ಜತೆಯಾಟ, 3 ಸಲ ಅರ್ಧ ಶತಕದ ಜತೆಯಾಟ ದಾಖಲಿಸಿದ್ದಾರೆ. ಇದರಲ್ಲಿ 262 ರನ್ನುಗಳ ದಾಖಲೆ ಜತೆಯಾಟವೂ ಸೇರಿದೆ.
* ಮುರಳಿ ವಿಜಯ್‌ ಈ ಸರಣಿಯ ಮೂರೂ ಇನ್ನಿಂಗ್ಸ್‌ಗಳಲ್ಲಿ ಮಿಚೆಲ್‌ ಸ್ಟಾರ್ಕ್‌ಗೆ ವಿಕೆಟ್‌ ಒಪ್ಪಿಸಿದರು. ಸ್ಟಾರ್ಕ್‌ ಈವರೆಗೆ 6 ಸಲ ವಿಜಯ್‌ ವಿಕೆಟ್‌ ಹಾರಿಸಿದ್ದಾರೆ. ಸ್ಟಾರ್ಕ್‌ ಅವರ 213 ಎಸೆತ ಎದುರಿಸಿರುವ ವಿಜಯ್‌ 93 ರನ್‌ ಮಾಡಿದ್ದಾರೆ.
* ಪೂಜಾರ-ಕೊಹ್ಲಿ 3ನೇ ವಿಕೆಟಿಗೆ 74 ರನ್‌ ಒಟ್ಟುಗೂಡಿಸಿದರು. ಇದು 10 ರನ್ನಿನೊಳಗೆ 2 ವಿಕೆಟ್‌ ಉರುಳಿದ ಸಂದರ್ಭದಲ್ಲಿ 3ನೇ ವಿಕೆಟಿಗೆ ಭಾರತದಿಂದ ದಾಖಲಾದ ಜಂಟಿ 8ನೇ ಅತ್ಯಧಿಕ ಮೊತ್ತವಾಗಿದೆ. ಪಾಕಿಸ್ಥಾನ ವಿರುದ್ಧದ 1989ರ ಲಾಹೋರ್‌ ಟೆಸ್ಟ್‌ನಲ್ಲಿ 5 ರನ್ನಿಗೆ 2 ವಿಕೆಟ್‌ ಬಿದ್ದಾಗ ಅಜರುದ್ದೀನ್‌-ಮಾಂಜ್ರೆàಕರ್‌ 149 ರನ್‌ ಪೇರಿಸಿದ್ದು ಭಾರತೀಯ ದಾಖಲೆ.
* ಚೇತೇಶ್ವರ್‌ ಪೂಜಾರ ವಿದೇಶದ ಸತತ 3 ಇನ್ನಿಂಗ್ಸ್‌ಗಳಲ್ಲಿ 2ನೇ ಸಲ 100 ಪ್ಲಸ್‌ ಎಸೆತಗಳನ್ನು ಎದುರಿಸಿದರು. 2013ರ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಪೂಜಾರ ಅವರಿಂದ ಈ ಸಾಧನೆ ದಾಖಲಾಗಿತ್ತು.

ಟಾಪ್ ನ್ಯೂಸ್

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.