12 ವರ್ಷದೊಳಗಿನವರು ಈಜುಕೊಳಕ್ಕೆ ಇಳಿಯುವಂತಿಲ್ಲ
ಈಜು ತರಬೇತಿ ಕೇಂದ್ರಗಳ ಆರಂಭಕ್ಕೆ ಕೇಂದ್ರ ಷರತ್ತು ಬದ್ಧ ಅನುಮತಿ
Team Udayavani, Oct 11, 2020, 2:11 PM IST
ಹೊಸದಿಲ್ಲಿ: ಕೋವಿಡ್-19 ದಿಗ್ಬಂಧನದಿಂದಾಗಿ ಸ್ಥಗಿತವಾಗಿದ್ದ ಈಜು ತರಬೇತಿ ಕೇಂದ್ರಗಳ ಆರಂಭಕ್ಕೆ ಕೇಂದ್ರಸರ್ಕಾರ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಮತ್ತು ಯುವಜನ ಸಚಿವಾಲಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಸರ್ಕಾರದ ಎಲ್ಲಾ ನಿಯಮಾವಳಿಗಳು ಭಾರತೀಯ ಕ್ರೀಡಾ ಪ್ರಾಧಾಕಾರ (ಸಾಯ್) ಮತ್ತು ಇತರ ಕೇಂದ್ರಗಳಿಗೆ ಅನ್ವಯವಾಗಲಿವೆ. ಆದರೆ, ಮೈಕ್ರೋ ಕಂಟೈನ್‌ಮೆಂಟ್ ಝೋನ್‌ನಲ್ಲಿ ಈಜುತರಬೇತಿ ಕೇಂದ್ರಗಳನ್ನು ತೆರೆಯುವಂತಿಲ್ಲ ಎಂದು ಹೇಳಿದೆ.
ಕ್ರೀಡಾ ಸಚಿವಾಲಯದ ಮಾರ್ಗಸೂಚಿ ಪ್ರಕಾರ, 12 ವರ್ಷದೊಳಗಿನ ಮಕ್ಕಳು ಈಜು ತರಬೇತಿಗೆ ಬರುವಂತಿಲ್ಲ. ಕೇವಲ ಕ್ರೀಡಾ ಉದ್ದೇಶಕಾಗಿ ಮಾತ್ರ ತರಬೇತಿ ನೀಡಬೇಕು. ಜತೆಗೆ ಸಂಪರ್ಕಕ್ಕೆ ಬರುವಂಥ ವಾಟರ್‌ಪೋಲೋ, ಈಜು ಕಲಿಯುವಿಕೆ, ಮಾಮೂಲಿ ದೈಹಿಕ ಸದೃಢತೆ ಸಾಧಿಸಲು ಯಾರೊಬ್ಬರೂ ಈಜುಕೊಳಕ್ಕೆ ಇಳಿಯುವಂತಿಲ್ಲ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ:ಪಂಜಾಬ್‌ನ ಈ ಸೋಲಿಗೆ ಕ್ಷಮೆಯಿಲ್ಲ!
ಅಥ್ಲೀಟ್‌ಗಳ ತರಬೇತಿ ಜವಾಬ್ದಾರಿ ಸಂಪೂರ್ಣವಾಗಿ ತರಬೇತುದಾರರು ಮತ್ತು ಪೂರಕ ಸಿಬ್ಬಂದಿಯದ್ದೇ ಆಗಿದೆ. ಪ್ರಮುಖ ತರಬೇತುದಾರರೇ ಯಾವ ರೀತಿ ಮತ್ತು ಎಷ್ಟು ಸಿಬ್ಬಂದಿಯೊಂದಿಗೆ ತರಬೇತಿ ನೀಡಬೇಕು ಎಂಬುದನ್ನು ನಿರ್ಧರಿಸಬೇಕು. ಅಥ್ಲೀಟ್ ಗಳು ಮತ್ತು ಸಿಬ್ಬಂದಿ ಬಳಿ ಕೋವಿಡ್ ನೆಗೆಟಿವ್ ಬಗ್ಗೆ ಸ್ವಯಂ ದೃಢೀಕರಣ ಪತ್ರ ಪಡೆಯಬೇಕು. ಅಥ್ಲೀಟ್ ಗಳು ಹಾಗೂ ಸಿಬ್ಬಂದಿಯನ್ನು ಪರೀಕ್ಷೆ ಮಾಡಬೇಕು. ಹೊಸ ಅಥ್ಲೀಟ್‌ಗಳಿಗೆ ಆಗಾಗ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಷ್ಯನ್ ಕಪ್ ಹಾಕಿ; ಇಂಡೋನೇಶ್ಯ ವಿರುದ್ಧ ಭಾರತಕ್ಕೆ 16-0 ಗೆಲುವು!: ಪಾಕ್ ಗೆ ಜಪಾನ್ ಶಾಕ್
ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ಲಕ್ನೋ ನಾಯಕ ಕೆ.ಎಲ್.ರಾಹುಲ್
ಮತ್ತಷ್ಟು ಬಲಿಷ್ಠರಾಗಿ ಮರಳುತ್ತೇವೆ..: ಲಕ್ನೋ ತಂಡ ಮೆಂಟರ್ ಗೌತಮ್ ಗಂಭೀರ್
ಒಂದು ಶತಕ ಹಲವು ದಾಖಲೆ: ಸಾಧನೆಗಳ ಮೈಲಿಗಲ್ಲು ನೆಟ್ಟ ರಜತ್ ಪಾಟೀದಾರ್
ಏಷ್ಯನ್ ಕಪ್ ಹಾಕಿ: ಇಂಡೋನೇಶ್ಯ ಎದುರಾಳಿ: ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ