ಅದ್ಭುತ ಕಮ್ ಬ್ಯಾಕ್: ಅಜರೆಂಕಾ ವಿರುದ್ಧ ಗೆದ್ದ ಒಸಾಕಾಗೆ ಯುಎಸ್ ಓಪನ್ ಕಿರೀಟ
Team Udayavani, Sep 13, 2020, 8:13 AM IST
ನ್ಯೂಯಾರ್ಕ್ : ಫೈನಲ್ ಕದನದಲ್ಲಿ ಮೊದಲ ಸೆಟ್ ಸೋತರೂ ಉತ್ತಮ ಕಮ್ ಬ್ಯಾಕ್ ಮಾಡಿ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಸತತ ಸೆಟ್ ಗೆದ್ದ ನವೋಮಿ ಒಸಾಕ ಯುಎಸ್ ಓಪನ್ ಕಿರೀಟ ಮುಡಿಗೇರಿಸಿದರು. ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ನ್ಯೂಯಾರ್ಕ್ ಅಂಗಳದಲ್ಲಿ ಒಸಾಕಾ ಟ್ರೋಫಿ ಗೆದ್ದು ಕುಣಿದಾಡಿದರು.
ಕೋವಿಡ್ ಕಾರಣದಿಂದ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಪಾನ್ ನ ಒಸಾಕಾ 1-6, 6-3, 6-3 ಸೆಟ್ ಗಳ ಅಂತರದಿಂದ ಗೆದ್ದು ಟ್ರೋಫಿ ಗೆದ್ದರು.
ಇದನ್ನೂ ಓದಿ: ನೂತನ ಚಾಂಪಿಯನ್ ನಿರೀಕ್ಷೆಯಲ್ಲಿ ನ್ಯೂಯಾರ್ಕ್
22 ವರ್ಷದ ನವೋಮಿ ಒಸಾಕಾ ಗ್ರಾಂಡ್ ಸ್ಲ್ಯಾಮ್ ಫೈನಲ್ ನಲ್ಲಿ ತಮ್ಮ ಅಜೇಯ ಓಟ ಮುಂದುವರಿಸಿದರು. ಮೂರು ಬಾರಿ ಗ್ರಾಂಡ್ ಸ್ಲ್ಯಾಮ್ ಫೈನಲ್ ತಲುಪಿರುವ ಒಸಾಕಾ ಮೂರು ಬಾರಿಯು ಟ್ರೋಫಿ ಗೆದ್ದಿದ್ದಾರೆ. 2018ರಲ್ಲಿ ಯುಎಸ್ ಓಪನ್ ಗೆದ್ದಿದ್ದರು. ಮತ್ತೊಂದೆಡೆ ಅಜರೆಂಕಾ ಮೂರು ಬಾರಿಯ ಫೈನಲ್ ನಲ್ಲೂ ಸೋಲನುಭವಿಸಿದರು.