ಪತ್ನಿಯ ಮುಖ ಕಾಣುವ ಫೋಟೋ ವೈರಲ್:‌ ಗೌಪ್ಯತೆಗೆ ಧಕ್ಕೆ ಎಂದು ಬೇಸರ ಹಂಚಿಕೊಂಡ ಶಾಹೀನ್


Team Udayavani, Feb 5, 2023, 1:52 PM IST

ಪತ್ನಿಯ ಮುಖ ಕಾಣುವ ಫೋಟೋ ವೈರಲ್:‌ ಗೌಪ್ಯತೆಗೆ ಧಕ್ಕೆ ಎಂದು ಬೇಸರ ಹಂಚಿಕೊಂಡ ಶಾಹೀನ್

ಕರಾಚಿ: ಪಾಕಿಸ್ತಾನದ ಯುವ ವೇಗಿ ಶಾಹೀನ್‌ ಅಫ್ರಿದಿ ಪಾಕ್‌ ನ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಅವರ ಮಗಳನ್ನು ವರಿಸಿದ್ದಾರೆ. ಸುಂದರ ಕ್ಷಣಗಳಿಗೆ ಅನೇಕ ಅತಿಥಿ,ಗಣ್ಯರು ಸಾಕ್ಷಿಯಾಗಿ ನವಜೋಡಿಗೆ ಶುಭಾಶಯವನ್ನು ಕೋರಿ ಹಾರೈಸಿದ್ದಾರೆ.

ಕರಾಚಿಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡದ ಸದಸ್ಯರು ಸೇರಿದಂತೆ ಎರಡೂ ಕುಟುಂಬದ ಆಪ್ತರು ನೆರೆದಿದ್ದರು.

ವಿವಾಹ ಸಂಭ್ರಮದ ಫೋಟೋಗಳು ಸಂಜೆಯ ವೇಳೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹೆಣ್ಣಿನ ಫೋಟೋವನ್ನು ಯಾರೂ ಕೂಡ ಹಂಚಿಕೊಳ್ಳದೇ ಇದ್ದರೂ, ಸಾಮಾಜಿಕ ಜಾಲತಾಣದಲ್ಲಿ ನವಜೋಡಿಯ ಫೋಟೋ ಸೋರಿಕೆಯಾಗಿದ್ದು, ಇದರಿಂದ ಶಾಹೀನ್‌ ಬೇಸರಗೊಂಡಿದ್ದಾರೆ.

ಮದುವೆ ಸಮಾರಂಭದಲ್ಲಿ ಮೊದಲೇ ಎಲ್ಲರೂ ತಮ್ಮ ಮೊಬೈಲ್‌ ಗಳನ್ನು ಸ್ವಿಚ್‌ ಆಫ್‌ ಮಾಡಿಕೊಳ್ಳಿ ಎಂದು ವಿನಂತಿಯನ್ನು ಮಾಡಿಕೊಂಡಿದ್ದರು. ಆದರೆ ಇಷ್ಟಾದರೂ ನವ ಜೋಡಿಯ ಜೋಡಿಯ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿವೆ.

ಈ ಬಗ್ಗೆ ಟ್ವಿಟರ್‌ ನಲ್ಲಿ ಬೇಸರದಿಂದಲೇ ಪೋಸ್ಟ್‌ ಹಂಚಿಕೊಂಡಿರುವ ವರ ಶಾಹೀನ್‌ ನಮ್ಮ ವಿನಂತಿಗೆ ಸ್ಪಂದಿಸದೆ ನಮ್ಮ ಸುಂದರ ಕ್ಷಣದ, ನಮ್ಮ ಜೀವನದ ಬಹುಮುಖ್ಯ ದಿನದ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಿಂದ ನನಗೂ ಹಾಗೂ ನನ್ನ ಪತ್ನಿಯ ಗೌಪ್ಯತೆಗೆ ಧಕ್ಕೆಯಾಗಿದೆ. ದಯವಿಟ್ಟು ಈ ರೀತಿ ಮಾಡಬೇಡಿ. ನಮ್ಮ ಮಾತಿಗೆ ಸಹಕರಿಸಿ ಎಂದು ಬರೆದುಕೊಂಡಿದ್ದಾರೆ.

ಶಾಹೀದ್‌ ಅಫ್ರಿದಿ ಮಗಳ ಸೇರಿದಂತೆ ಅನೇಕರು ನಮ ಜೋಡಿಯ ಫೋಟೋವನ್ನು ಹಂಚಿಕೊಂಡಿದ್ದರು. ಆದರೆ ಎಲ್ಲೂ ಕೂಡ ವಧುವಿನ ಮುಖವನ್ನು ತೋರಿಸಿರಲಿಲ್ಲ. ಆದರೆ ಇಷ್ಟಾದರೂ ಅಕ್ಸಾ ಹಾಗೂ ಶಾಹೀನ್‌ ಅವರ ಫೋಟೋಗಳು ಸೋರಿಕೆಯಾಗಿದ್ದವು.

ಟಾಪ್ ನ್ಯೂಸ್

sams

ಸ್ಯಾಮ್ ಸಂಗ್‌ನಿಂದ A54 ಮತ್ತು A 34 ಫೋನ್ ಬಿಡುಗಡೆ

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

yaddi

ವರುಣಾದಿಂದ ವಿಜಯೇಂದ್ರ ; ಊಹಾಪೋಹಗಳಿಗೆ ತೆರೆ ಎಳೆದ ಯಡಿಯೂರಪ್ಪ

1-w-ewqewqeq

ಐಪಿಎಲ್ 2023: ವರ್ಣರಂಜಿತ ಚಾಲನೆ; ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್‌ ಮಾಲ್‌ ಜಿ.ಎಲ್‌. ಒನ್‌ ಎ. 2ರಂದು ಲೋಕಾರ್ಪಣೆ

ಎ. 2ರಂದು ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್‌ ಮಾಲ್‌ ಜಿ.ಎಲ್‌.ಒನ್‌ ಲೋಕಾರ್ಪಣೆ

24×7; ಐಷಾರಾಮಿ “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’; ಹಳೇ ಬೋಗಿ ಬಳಸಿ ತಯಾರಿ

24×7; ಐಷಾರಾಮಿ “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’; ಹಳೇ ಬೋಗಿ ಬಳಸಿ ತಯಾರಿ

sss

ತಂದೆಯ ಸಾವಿನ ದುಃಖದಲ್ಲೂ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದ ಮಗಳು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-w-ewqewqeq

ಐಪಿಎಲ್ 2023: ವರ್ಣರಂಜಿತ ಚಾಲನೆ; ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

Akash Singh replaces Mukesh Choudhary in CSK camp

ಐಪಿಎಲ್ ನಿಂದ ಹೊರಬಿದ್ದ ಮುಕೇಶ್ ಚೌಧರಿ; ಹೊಸ ಬೌಲರ್ ಆಯ್ಕೆ ಮಾಡಿದ ಸಿಎಸ್ ಕೆ

IPL: Michael Vaughan Makes Bold Title Prediction

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

guj che match

ಐಪಿಎಲ್‌-2023: ಚಾಂಪಿಯನ್‌ ಗುಜರಾತ್‌ಗೆ ಚೆನ್ನೈ ಸವಾಲು

ಐಪಿಎಲ್‌ ಹಬ್ಬಕ್ಕೆ ಇಂದು ಚಾಲನೆ: ಕ್ರಿಕೆಟ್‌ ದಿಗ್ಗಜರ ಸಮಾಗಮ

ಐಪಿಎಲ್‌ ಹಬ್ಬಕ್ಕೆ ಇಂದು ಚಾಲನೆ: ಕ್ರಿಕೆಟ್‌ ದಿಗ್ಗಜರ ಸಮಾಗಮ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

sams

ಸ್ಯಾಮ್ ಸಂಗ್‌ನಿಂದ A54 ಮತ್ತು A 34 ಫೋನ್ ಬಿಡುಗಡೆ

1-csadsasadsa

ಗೋಡೆಯ ಬಿರುಕಿನಲ್ಲಿ ಅಡಗಿದ್ದವು ನಾಗರಹಾವು ಮತ್ತು 10 ಮರಿಗಳು!

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

1-sadsad-d

ಶಿರ್ವ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಓಡಾಡುತ್ತಿದ್ದವನ ಬಂಧನ

yaddi

ವರುಣಾದಿಂದ ವಿಜಯೇಂದ್ರ ; ಊಹಾಪೋಹಗಳಿಗೆ ತೆರೆ ಎಳೆದ ಯಡಿಯೂರಪ್ಪ