ಬೆಂಗಳೂರು ಔಟ್‌; ರಾಜಸ್ಥಾನ್‌ ಪ್ಲೇ ಆಫ್ ಪ್ರವೇಶ ಜೀವಂತ


Team Udayavani, May 20, 2018, 11:56 AM IST

pti5192018000129b.jpg

ಜೈಪುರ: ಉತ್ಕೃಷ್ಟ ಮಟ್ಟದ ಬೌಲಿಂಗ್‌ ದಾಳಿ ಸಂಘಟಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡವು ಶನಿವಾರದ ಮೊದಲ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 30 ರನ್ನುಗಳಿಂದ ಸೋಲಿಸಿದೆ. 

ಇದು ಎರಡೂ ತಂಡಗಳಿಗೆ ಕೊನೆಯ ಲೀಗ್‌ ಪಂದ್ಯವಾಗಿದ್ದು ಗೆಲುವು ಅನಿವಾರ್ಯವಾಗಿತ್ತು. ಸೋತ ಆರ್‌ಸಿಬಿ ತಂಡವು ಕೂಟದಿಂದ ಹೊರಬಿದ್ದಿದೆ. ಗೆಲುವು ಸಾಧಿಸಿದ ರಾಜಸ್ಥಾನ್‌ ತಂಡವು ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವನ್ನು ಜೀವಂತವಿರಿಸಿಕೊಂಡಿದೆ. ಲೀಗ್‌ನಲ್ಲಿ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು ಈ ಪಂದ್ಯಗಳ ಫ‌ಲಿತಾಂಶದ ಬಳಿಕ ಪ್ಲೇ ಆಫ್ಗೆ ತೇರ್ಗಡೆಯಾಗುವ ಎರಡು ತಂಡಗಳು ಯಾವುವು ಎಂಬುದು ನಿರ್ಧಾರವಾಗಲಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ತಂಡವು ಆರಂಭಿಕ ರಾಹುಲ್‌ ತ್ರಿಪಾಠಿ ಅವರ ಆಕರ್ಷಕ ಆಟದಿಂದಾಗಿ 5 ವಿಕೆಟಿಗೆ 164 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಇದಕ್ಕೆ$ಉತ್ತರವಾಗಿ ಘೋರ ಕುಸಿತಕ್ಕೆ ಒಳಗಾದ ಆರ್‌ಸಿ ಬೆಂಗಳೂರು ತಂಡವು 19.2 ಓವರ್‌ಗಳಲ್ಲಿ 134 ರನ್ನಿಗೆ ಆಲೌಟಾಗಿ ನಿರಾಶೆ ಅನುಭವಿಸಿತು. 

ತ್ರಿಪಾಠಿ ಭರ್ಜರಿ ಆಟ
ಆರಂಭಿಕ ತ್ರಿಪಾಠಿ ಅವರ ಭರ್ಜರಿ ಆಟದಿಂದಾಗಿ ರಾಜಸ್ಥಾನ್‌ ಸಾಧಾರಣ ಮೊತ್ತ ಪೇರಿಸುವಂತಾಯಿತು. ಜೋಫ್ರಾ ಆರ್ಚರ್‌ ಅವರನ್ನು ಬೇಗನೇ ಕಳೆದುಕೊಂಡ ಬಳಿಕ ತ್ರಿಪಾಠಿ ಮತ್ತು ನಾಯಕ ಅಜಿಂಕ್ಯ ರಹಾನೆ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ದ್ವಿತೀಯ ವಿಕೆಟಿಗೆ 99 ರನ್ನುಗಳ ಜತೆ ಯಾಟ ನಡೆಸಿದರು. ಆದರೆ ಇಬ್ಬರೂ ನಿಧಾನವಾಗಿ ಆಡಿದ್ದರಿಂದ ತಂಡ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.

ರಹಾನೆ ಮತ್ತು ಸ್ಯಾಮ್ಸನ್‌ ಅವರನ್ನು ಸತತ ಎರಡು ಎಸೆತಗಳಲ್ಲಿ ಉಮೇಶ್‌ ಯಾದವ್‌ ಉರುಳಿಸಿದಾಗ ಬೆಂಗಳೂರು ಮೇಲುಗೈ ಸಾಧಿಸಬಹುದೆಂದು ಭಾವಿಸ ಲಾಗಿತ್ತು. ಆದರೆ ತ್ರಿಪಾಠಿ ಸಹಿತ ಕ್ಲಾಸೆನ್‌ ಮತ್ತು ಗೌತಮ್‌ ಕೊನೆ ಹಂತದಲ್ಲಿ ಸಿಡಿದ ಕಾರಣ ತಂಡದ ಮೊತ್ತ 150ರ ಗಡಿ ದಾಟುವಂತಾಯಿತು. ತಾಳ್ಮೆಯ ಆಟ ವಾಡಿದ ತ್ರಿಪಾಠಿ ಪೂರ್ತಿ 20 ಓವರ್‌ ಆಡಿ ಅಜೇಯರಾಗಿ ಉಳಿದರು. 58 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 80 ರನ್‌ ಹೊಡೆದರು.

ಬಿಗು ದಾಳಿ ಸಂಘಟಿಸಿದ ಉಮೇಶ್‌ ಯಾದವ್‌ 25 ರನ್ನಿಗೆ 3 ವಿಕೆಟ್‌ ಕಿತ್ತರು.ಗೆಲ್ಲಲು 165 ರನ್‌ ತೆಗೆಯುವ ಅವಕಾಶ ಪಡೆದ ಬೆಂಗಳೂರು ತಂಡವು ನಾಯಕ ಕೊಹ್ಲಿ ಅವರನ್ನು ಬೇಗನೇ ಕಳೆದುಕೊಂಡಿತು. ಕೊಹ್ಲಿ 9 ಎಸೆತ ಎದುರಿಸಿ 4 ರನ್‌ ಹೊಡೆದು ಗೌತಮ್‌ಗೆ ಕ್ಲೀನ್‌ಬೌಲ್ಡ್‌ ಆದರು. ಆಬಳಿಕ ಪಾರ್ಥಿವ್‌ ಪಟೇಲ್‌ ಮತ್ತು ಎಬಿ ಡಿ’ವಿಲಿಯರ್ ದ್ವಿತೀಯ ವಿಕೆಟಿಗೆ 55 ರನ್‌ ಪೇರಿಸಿದರು. ಆದರೆ ಈ ಜೋಡಿ ಮುರಿದ ಬಳಿಕ ಬೆಂಗಳೂರು ನಾಟಕೀಯ ಕುಸಿತ ಕಂಡಿತು. ಈ ಆಘಾತದಿಂದ ಕೊನೆಯತನಕವೂ ಅದು ಚೇತರಿಸಿಕೊಳ್ಳಲೇ ಇಲ್ಲ.

ಗೋಪಾಲ್‌ ಮಾರಕ ದಾಳಿ
ರಾಜಸ್ಥಾನ್‌ ಗೆಲುವಿನಲ್ಲಿ ಶ್ರೇಯಸ್‌ ಗೋಪಾಲ್‌ ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕದ ಗೋಪಾಲ್‌ ಸ್ಮರಣೀಯ ದಾಳಿ ಸಂಘಟಿಸಿ ಬೆಂಗಳೂರಿಗೆ ಪ್ರಬಲ ಹೊಡೆತ ನೀಡಿದರು. ಪಾರ್ಥಿವ್‌ ಮತ್ತು ಡಿ’ವಿಲಿಯರ್ ಜೋಡಿಯನ್ನು ಮುರಿದ ಅವರು ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 16 ರನ್ನಿಗೆ 4 ವಿಕೆಟ್‌ ಕಿತ್ತು ಮಿಂಚಿದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಸಿಕೊಂಡರು. ಕ್ಲಾಸೆನ್‌ ಮೂರು ಸ್ಟಂಪ್‌ ಔಟ್‌ ಮಾಡಿಸಿ ಗೆಲುವಿಗೆ ತನ್ನ ಕೊಡುಗೆ ಸಲ್ಲಿಸಿದರು. 

ಗೋಪಾಲ್‌ ಅವರ ಈ ದಾಳಿಯಿಂದಾಗಿ ಬೆಂಗಳೂರು 33 ರನ್‌ ಅಂತರದಲ್ಲಿ 7 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಒಂದು ಹಂತದಲ್ಲಿ 1 ವಿಕೆಟಿಗೆ 75ರನ್‌ ಗಳಿಸಿದ್ದ ಬೆಂಗಳೂರು ತಂಡವು 108 ರನ್‌ ತಲುಪಿದಾಗ 8 ವಿಕೆಟ್‌ ಕಳೆದುಕೊಂಡಿತ್ತು. ಎಬಿ ಡಿ’ ವಿಲಿಯರ್ ಹೋರಾಟದ 53 ರನ್‌ ಗಳಿಸಿದರು. ಅವರು 6ನೆಯವರಾಗಿ ಔಟಾಗುತ್ತಲೇ ತಂಡದ ಸೋಲು ಖಚಿತವಾಯಿತು.

ಸ್ಕೋರ್‌ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌

ರಾಹುಲ್‌ ತ್ರಿಪಾಠಿ    ಔಟಾಗದೆ    80
ಜೋಫ್ರಾ ಆರ್ಚರ್‌    ಸಿ ಪಟೇಲ್‌ ಬಿ ಯಾದವ್‌    0
ಅಜಿಂಕ್ಯ ರಹಾನೆ    ಎಲ್‌ಬಿಡಬ್ಲ್ಯು ಯಾದವ್‌    33
ಸಂಜು ಸ್ಯಾಮ್ಸನ್‌    ಸಿ ಅಲಿ ಬಿ ಯಾದವ್‌    0
ಹೆನ್ರಿಕ್‌ ಕ್ಲಾಸೆನ್‌    ಸಿ ಅಲಿ ಬಿ ಸಿರಾಜ್‌    32
ಕೃಷ್ಣಪ್ಪ ಗೌತಮ್‌    ರನೌಟ್‌    14
ಇತರ:        5
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ)    164
ವಿಕೆಟ್‌ ಪತನ: 1-2, 2-101, 3-101, 4-149, 5-164
ಬೌಲಿಂಗ್‌:
ಯಜುವೇಂದ್ರ ಚಹಲ್‌        4-0-26-0
ಉಮೇಶ್‌ ಯಾದವ್‌        4-1-25-3
ಮೊಯಿನ್‌ ಅಲಿ        2-0-19-0
ಟಿಮ್‌ ಸೌಥಿ        4-0-37-0
ಮೊಹಮ್ಮದ್‌ ಸಿರಾಜ್‌        4-0-33-1
ಕಾಲಿನ್‌         2-0-23-0
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ    ಬಿ ಗೌತಮ್‌    4
ಪಾರ್ಥಿವ್‌ ಪಟೇಲ್‌    ಸ್ಟಂಪ್ಡ್ ಕ್ಲಾಸೆನ್‌ ಬಿ ಗೋಪಾಲ್‌    33
ಎಬಿ ಡಿ’ವಿಲಿಯರ್    ಸ್ಟಂಪ್ಡ್ ಕ್ಲಾಸೆನ್‌ ಬಿ ಗೋಪಾಲ್‌    53
ಮೊಯಿನ್‌ ಅಲಿ    ಸಿ ಮತ್ತು ಬಿ ಗೋಪಾಲ್‌    1
ಮನ್‌ದೀಪ್‌ ಸಿಂಗ್‌    ಸ್ಟಂಪ್ಡ್ ಕ್ಲಾಸೆನ್‌ ಬಿ ಗೋಪಾಲ್‌    3
ಕಾಲಿನ್‌     ಸಿ ರಹಾನೆ ಬಿ ಸೋಧಿ    2
ಸಫ‌ìರಾಜ್‌ ಖಾನ್‌    ಸಿ ಕ್ಲಾಸೆನ್‌ ಬಿ ಲಾಲಿನ್‌    7
ಟಿಮ್‌ ಸೌಥಿ    ಸಿ ಗೌತಮ್‌ ಬಿ ಉನಾದ್ಕತ್‌    14
ಉಮೇಶ್‌ ಯಾದವ್‌    ಬಿ ಲಾಲಿನ್‌    0
ಮೊಹಮ್ಮದ್‌ ಸಿರಾಜ್‌    ಸಿ ಗೌತಮ್‌ ಬಿ ಉನಾದ್ಕತ್‌    14
ಯಜುವೇಂದ್ರ ಚಹಲ್‌    ಔಟಾಗದೆ    0
ಇತರ:        3
ಒಟ್ಟು  (19.2 ಓವರ್‌ಗಳಲ್ಲಿ ಆಲೌಟ್‌)    134
ವಿಕೆಟ್‌ ಪತನ: 1-20, 2-75, 3-77, 4-85, 5-96, 6-98, 7-108, 8-108, 9-128
ಬೌಲಿಂಗ್‌:
ಕೃಷ್ಣಪ್ಪ ಗೌತಮ್‌        2-0-6-1
ಜೋಫ್ರಾ ಆರ್ಚರ್‌        4-0-37-0
ಬೆನ್‌ ಲಾಲಿನ್‌        2-0-15-0
ಜೈದೇವ್‌ ಉನಾದ್ಕತ್‌        3.2-0-27-2
ಶ್ರೇಯಸ್‌ ಗೋಪಾಲ್‌        4-0-16-4
ಐಶ್‌ ಸೋಧಿ        4-0-31-1
ಪಂದ್ಯಶ್ರೇಷ್ಠ: ಶ್ರೇಯಸ್‌ ಗೋಪಾಲ್‌

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.