ಮುಂಬೈ ಔಟ್, ಯೋಧಾ ಫೈನಲ್ ಜೀವಂತ
Team Udayavani, Dec 31, 2018, 12:30 AM IST
ಕೊಚ್ಚಿ: ಎಲಿಮಿನೇಟರ್ 1 ಪಂದ್ಯದಲ್ಲಿ ಬಲಿಷ್ಠ ಯು ಮುಂಬಾ ತಂಡ 29-34 ಅಂಕಗಳ ಅಂತರದಿಂದ ಯುಪಿ ಯೋಧಾ ವಿರುದ್ಧ ಸೋಲು ಅನುಭವಿಸಿದೆ.
ಇದರೊಂದಿಗೆ ಯು ಮುಂಬಾ ತಂಡ 6ನೇ ಆವೃತ್ತಿ ಪ್ರೊ ಕಬಡ್ಡಿ ಸುದೀರ್ಘ ಪ್ರಯಾಣ ಅಂತ್ಯವಾಗಿದೆ. ಪ್ರೊ ಕಬಡ್ಡಿ ಅಂತಿಮ ಸುತ್ತಿನ ಪಂದ್ಯಗಳಲ್ಲಿ ಮುಂಬೈ ತಂಡವು ಅಭಿಮಾನಿಗಳ ಫೇವರಿಟ್ ಎನಿಸಿಕೊಂಡಿತ್ತು. ಆದರೆ ಮುಂಬೈ ತಂಡ ನಿರೀಕ್ಷಿತ ಪ್ರದರ್ಶನವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿ ಶರಣಾಯಿತು. ಗೆಲುವು ಸಾಧಿಸಿದ ಯುಪಿ ಯೋಧಾ ಮುಂದಿನ ಪಂದ್ಯ ಗೆದ್ದರೆ ಮಾತ್ರ ಫೈನಲ್ಗೇರಲಿದೆ. ಯುಪಿ ಪರ ನಿತೀಶ್ ಕುಮಾರ್ (8 ಅಂಕ) ಗಳಿಸಿದರೆ ಶ್ರೀಕಾಂತ್ ಜಾಧವ್(5 ಅಂಕ), ಜೀವಾ ಕುಮಾರ್ (5 ಅಂಕ) ಹಾಗೂ ರಿಷಾಂಕ್ ದೇವಾಡಿಗ (5 ಅಂಕ) ತಂಡದ ಜಯದ ರೂವಾರಿಗಳು.
ಮುಂಬೈನ ತ್ರಿವಳಿ ರತ್ನಗಳ ಆಟ ವ್ಯರ್ಥ: ಮುಂಬೈ ತಂಡದ ಪರ ರೈಡರ್ಗಳಾದ ಸಿದಾಟಛಿರ್ಥ್ ದೇಸಾಯಿ (7ಅಂಕ) ಹಾಗೂ ರೋಹಿತ್ ಬಲಿಯಾನ್ (5 ಅಂಕ) ಅತ್ಯುತ್ತಮ ಆಟವಾಡುವ ಮೂಲಕ ತಂಡಕ್ಕೆ ಭರವಸೆ ಮೂಡಿಸಿದ್ದರು. ಫಜಲ್ ಅತ್ರಾಚಲಿ (4ಅಂಕ) ಹಾಗೂ ಹಿರಿಯ ಆಟಗಾರ ಧರ್ಮರಾಜ್ ಚೆರಾÉಥನ್ (3 ಅಂಕ) ಟ್ಯಾಕಲ್ ಮೂಲಕ ತಂಡವನ್ನು ಗೆಲ್ಲಿಸುವ ಪ್ರಯತ್ನ ನಡೆಸಿದರಾದರೂ ತಂಡ ವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್