ಪೇಸ್‌ ವಿಶ್ವದಾಖಲೆಯ ಕನಸು ಭಗ್ನ


Team Udayavani, Feb 5, 2017, 3:45 AM IST

pase.jpg

ಡೇವಿಸ್‌: ಡಬಲ್ಸ್‌ನಲ್ಲಿ ನ್ಯೂಜಿಲ್ಯಾಂಡ್‌ ತಿರುಗೇಟು
ಪುಣೆ: ನ್ಯೂಜಿಲ್ಯಾಂಡಿನ ಆರ್ಟೆಮ್‌ ಸಿತಾಕ್‌ ಮತ್ತು ಮೈಕಲ್‌ ವೀನಸ್‌ ಅವರು ಡೇವಿಸ್‌ ಕಪ್‌ ಏಶ್ಯ ಓಶಿಯಾನಿಯಾ ಬಣ ಒಂದರ ಡಬಲ್ಸ್‌ ಪಂದ್ಯದಲ್ಲಿ ಲಿಯಾಂಡರ್‌ ಪೇಸ್‌ ಮತ್ತು ವಿಷ್ಣುವರ್ಧನ್‌ ಅವರನ್ನು ನಾಲ್ಕು ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ ಸೋಲಿಸಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಈ ಸೋಲಿನಿಂದ ಪೇಸ್‌ ಅವರ ಡಬಲ್ಸ್‌ನಲ್ಲಿ ವಿಶ್ವದಾಖಲೆಗೈಯುವ ಕನಸು ನುಚ್ಚುನೂರಾಯಿತು.

ಈ ಗೆಲುವಿನಿಂದ ನ್ಯೂಜಿಲ್ಯಾಂಡ್‌ ಈ ಹೋರಾಟ ಗೆಲ್ಲುವ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಮೊದಲ ದಿನ ನಡೆದ ಎರಡು ಸಿಂಗಲ್ಸ್‌ ಪಂದ್ಯ ಗೆದ್ದಿರುವ ಭಾರತ ಸದ್ಯ 2-1 ಮುನ್ನಡೆಯಲ್ಲಿದೆ. ರವಿವಾರ ಎರಡು ಮರು ಸಿಂಗಲ್ಸ್‌ ಪಂದ್ಯ ನಡೆಯಲಿದ್ದು ಒಂದರಲ್ಲಿ ಗೆದ್ದರೆ ಭಾರತ ಹೋರಾಟದಲ್ಲಿ ಗೆಲುವು ಕಂಡು ದ್ವಿತೀಯ ಸುತ್ತಿಗೇರಲಿದೆ. ಆದರೆ ನ್ಯೂಜಿಲ್ಯಾಂಡ್‌ ಮರು ಸಿಂಗಲ್ಸ್‌ನ ಎರಡೂ ಪಂದ್ಯ ಗೆಲ್ಲಬೇಕಾಗಿದೆ.

ರವಿವಾರದ ಮರು ಸಿಂಗಲ್ಸ್‌ ಪಂದ್ಯದಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ಅವರು ಫಿನ್‌ ಟಿಯರ್‌ನೆà ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಮರು ಸಿಂಗಲ್ಸ್‌ ಪಂದ್ಯದಲ್ಲಿ ಯೂಕಿ ಭಾಂಬ್ರಿ ಅವರು ಜೋಸ್‌ ಸ್ಟಾಥಂ ಅವರನ್ನು ಎದುರಿಸಲಿದ್ದಾರೆ. ಶುಕ್ರವಾರ ನಡೆದಿದ್ದ ಮೊದಲೆರಡು ಸಿಂಗಲ್ಸ್‌ ಪಂದ್ಯಗಳಲ್ಲಿ ಯೂಕಿ ಭಾಂಬ್ರಿ ಮತ್ತು ರಾಮ್‌ಕುಮಾರ್‌ ರಾಮನಾಥನ್‌ ನೇರ ಸೆಟ್‌ಗಳ ಜಯ ಸಾಧಿಸಿ ಭಾರತಕ್ಕೆ 2-0 ಮುನ್ನಡೆ ದೊರಕಿಸಿಕೊಟ್ಟಿದ್ದರು.

ಡಬಲ್ಸ್‌ನಲ್ಲಿ ಆಘಾತ
ಡಬಲ್ಸ್‌ನ ಫೇವರಿಟ್‌ ಆಟಗಾರ ಪೇಸ್‌ ಈ ಬಾರಿ ವಿಷ್ಣುವರ್ಧನ್‌ ಜತೆಗೂಡಿ ಆಡಿ ಮೊದಲ ಸೆಟ್‌ ಸುಲಭವಾಗಿ ಗೆದ್ದರು. ಆದರೆ ಎದುರಾಳಿಗಳಾದ ನ್ಯೂಜಿಲ್ಯಾಂಡಿನ ಸಿತಾಕ್‌ ಮತ್ತು ವೀನಸ್‌ ಅದ್ಭುತ ಹೋರಾಟ ಸಂಘಟಿಸಿ ಸತತ ಮೂರು ಸೆಟ್‌ ಗೆದ್ದು ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು. ಎರಡೂವರೆ ತಾಸಿನ ಈ ಹೋರಾಟವನ್ನು ಅವರು 3-6, 6-3, 7-6 (8-6), 6-3 ಸೆಟ್‌ಗಳಿಂದ ಗೆದ್ದರು.

ಈ ಸೋಲಿನಿಂದ 43ರ ಹರೆಯದ ಪೇಸ್‌ ಅವರಿಗೆ ಡಬಲ್ಸ್‌ನಲ್ಲಿ 43ನೇ ಜಯ ದಾಖಲಿಸಲು ಸಾಧ್ಯವಾಗಲಿಲ್ಲ. ಅವರೀಗ 42 ಗೆಲುವಿನೊಂದಿಗೆ ಇಟಲಿಯ ನಿಕೋಲ ಪೀಟ್ರಾಂಜೆಲಿ ಜತೆ ದಾಖಲೆ ಹಂಚಿಕೊಂಡಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲಿ ಜಯ ಸಾಧಿಸಿದ್ದರೆ ಡೇವಿಸ್‌ ಕಪ್‌ ಇತಿಹಾಸದ ಗರಿಷ್ಠ ಸಂಖ್ಯೆಯ ಡಬಲ್ಸ್‌ ಪಂದ್ಯ ಗೆದ್ದ ಗೌರವಕ್ಕೆ ಪೇಸ್‌ ಪಾತ್ರರಾಗುತ್ತಿದ್ದರು.

ಟಾಪ್ ನ್ಯೂಸ್

ನೂತನ ಶೈಲಿಯ ಜೀಪ್ ತಯಾರಿಸಿದ ವ್ಯಕ್ತಿಗೆ ಹೊಸ ವಾಹನ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ನೂತನ ಶೈಲಿಯ ಜೀಪ್ ತಯಾರಿಸಿದ ವ್ಯಕ್ತಿಗೆ ಹೊಸ ವಾಹನ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಸವದತ್ತಿ: ಕಂದಮ್ಮಗಳ ಶಿಕ್ಷಣಕ್ಕೆ ಸಂಗೀತ ಸ್ಪರ್ಶ ನೀಡಿದ ಪಿಎಸ್‌ಐ.!

ಸವದತ್ತಿ: ಕಂದಮ್ಮಗಳ ಶಿಕ್ಷಣಕ್ಕೆ ಸಂಗೀತ ಸ್ಪರ್ಶ ನೀಡಿದ ಪಿಎಸ್‌ಐ.!

ಸಚಿವ ಅಶೋಕ್

ಸಿದ್ದು, ಡಿಕೆಶಿ ಜತೆ ನಾವು ಗಾಳಿಯಲ್ಲಿ ಗುಂಡು ಹೊಡೆಯುತ್ತೇವೆ: ಸಚಿವ ಅಶೋಕ್

ಕಾರ್ಕಳ: ಕಾರು – ರಿಕ್ಷಾ ಭೀಕರ ಅಪಘಾತ; ಆಟೋ ಚಾಲಕ ಸಾವು,ಓರ್ವ ಗಂಭೀರ

ಕಾರ್ಕಳ: ಕಾರು – ರಿಕ್ಷಾ ಭೀಕರ ಅಪಘಾತ; ಆಟೋ ಚಾಲಕ ಸಾವು,ಓರ್ವ ಗಂಭೀರ

sreeleela

ರವಿತೇಜ ಜೊತೆ ಶ್ರೀಲೀಲಾ ಡ್ಯುಯೆಟ್‌!: ಧಮಾಕಾ ಸಿನಿಮಾಕ್ಕೆ ಕಿಸ್‌ ನಾಯಕಿ

ಒಳ್ಳೆ ಸೇಬು ಇರುವಾಗ ಕೊಳೆತ ಮಾವಿನ ಹಣ್ಣು ಯಾರಿಗ್ರಿ ಬೇಕು : ಕಾಂಗ್ರೆಸ್ ಗೆ ಈಶ್ವರಪ್ಪ ಟಾಂಗ್

ಒಳ್ಳೆ ಸೇಬು ಇರುವಾಗ ಕೊಳೆತ ಮಾವಿನ ಹಣ್ಣು ಯಾರಿಗ್ರಿ ಬೇಕು : ಕಾಂಗ್ರೆಸ್ ಗೆ ಈಶ್ವರಪ್ಪ ಟಾಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuvraj singh and hazel keech

ಮೊದಲ ಮಗುವಿನ ಸಂತಸದಲ್ಲಿ ಯುವರಾಜ್ ಸಿಂಗ್-ಹೇಜಲ್ ಕೀಚ್

ಏಶ್ಯ ಕಪ್‌ ಮಹಿಳಾ ಹಾಕಿ ಸೆಮಿಫೈನಲ್‌: ಇಂದು ಭಾರತಕ್ಕೆ ಕೊರಿಯಾ ಸವಾಲು

ಏಶ್ಯ ಕಪ್‌ ಮಹಿಳಾ ಹಾಕಿ ಸೆಮಿಫೈನಲ್‌: ಇಂದು ಭಾರತಕ್ಕೆ ಕೊರಿಯಾ ಸವಾಲು

ಶ್ರೀಲಂಕಾ ಪ್ರವಾಸ: ಡೇವಿಡ್‌  ವಾರ್ನರ್‌, ಮಿಚೆಲ್‌ ಮಾರ್ಷ್‌ಗೆ ವಿಶ್ರಾಂತಿ

ಶ್ರೀಲಂಕಾ ಪ್ರವಾಸ: ಡೇವಿಡ್‌  ವಾರ್ನರ್‌, ಮಿಚೆಲ್‌ ಮಾರ್ಷ್‌ಗೆ ವಿಶ್ರಾಂತಿ

8ನೇ ಆವೃತ್ತಿ ಪ್ರೊ ಕಬಡ್ಡಿಗೂ ಕೋವಿಡ್‌ ಕಾಟ!

8ನೇ ಆವೃತ್ತಿ ಪ್ರೊ ಕಬಡ್ಡಿಗೂ ಕೋವಿಡ್‌ ಕಾಟ!

“ರಣಜಿ ಕೂಟ ರದ್ದು ಮಾಡಬೇಡಿ’: ರಾಜ್ಯ ಕ್ರಿಕೆಟ್‌ ಸಂಸ್ಥೆ ಮನವಿ

“ರಣಜಿ ಕೂಟ ರದ್ದು ಮಾಡಬೇಡಿ’: ರಾಜ್ಯ ಕ್ರಿಕೆಟ್‌ ಸಂಸ್ಥೆ ಮನವಿ

MUST WATCH

udayavani youtube

೭೩ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾರಾಜಿಸಿದ ಕರ್ನಾಟಕದ ಸ್ತಬ್ಧಚಿತ್ರ

udayavani youtube

ಕಾಂಗ್ರೆಸ್ ಕೊಳೆತು ನಾರುತ್ತಿರುವ ಮಾವಿನ ಹಣ್ಣು : ಈಶ್ವರಪ್ಪ ಲೇವಡಿ

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

udayavani youtube

ಮುದ್ದು ಮಕ್ಕಳ ಜೊತೆ ಮಗುವಾಗಿ ಬೆರೆತ ಸವದತ್ತಿ ಪಿಎಸ್ಐ ಶಿವಾನಂದ ಗುಡಗನಟ್ಟಿ

udayavani youtube

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

ಹೊಸ ಸೇರ್ಪಡೆ

honnavara news

ಸಾವಿನಲ್ಲೂ ಸಾರ್ಥಕತೆ ಮೆರೆದ ಇಂದ್ರಮ್ಮ

h gygghjklm

ಹೀಗೊಂದು ಮೊಬೈಲ್ ಮಾರ್ಚ್ಯುರಿ !

davanagere news

ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

davanagere news

ಯೋಗ್ಯ ವ್ಯಕ್ತಿ ಆಯ್ಕೆಗೆ ಒತ್ತು ಕೊಡಿ

davanagere news

ಎಲ್ಲರೂ ಮತ ಹಕ್ಕು ಚಲಾಯಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.