ಅಂಡರ್-19 ಏಶ್ಯ ಕಪ್:ಭಾರತಕ್ಕೆ ಶರಣಾದ ಪಾಕ್
Team Udayavani, Sep 8, 2019, 5:02 AM IST
ಮೊರಟುವಾ (ಶ್ರೀಲಂಕಾ): ಅಂಡರ್-19 ಏಶ್ಯ ಕಪ್ ಕ್ರಿಕೆಟ್ ಕೂಟದ ಬಹು ನಿರೀಕ್ಷೆಯ ಮುಖಾಮುಖೀಯಲ್ಲಿ ಭಾರತ 60 ರನ್ನುಗಳಿಂದ ಪಾಕಿಸ್ಥಾನವನ್ನು ಪರಾಭವಗೊಳಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಆರಂಭಕಾರ ಅರ್ಜುನ್ ಆಜಾದ್ (121) ಮತ್ತು ವನ್ಡೌನ್ ಆಟಗಾರ ತಿಲಕ್ ವರ್ಮ (110) ಅವರ ಶತಕ ಸಾಹಸದಿಂದ 9 ವಿಕೆಟಿಗೆ 305 ರನ್ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಪಾಕಿಸ್ಥಾನ 46.4 ಓವರ್ಗಳಲ್ಲಿ 245ಕ್ಕೆ ಆಲೌಟ್ ಆಯಿತು. ಪಾಕ್ ಸರದಿಯಲ್ಲಿ ನಾಯಕ ರೊಹೈಲ್ ನಜೀರ್ 117 ರನ್ ಬಾರಿಸಿ ಹೋರಾಟ ಜಾರಿಯಲ್ಲಿರಿಸಿದರೂ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ.
ಭಾರತದ ಬೌಲಿಂಗ್ ಸರದಿಯಲ್ಲಿ ಅಥರ್ವ ಅಂಕೋಲೆಕರ್ 36ಕ್ಕೆ 3 ವಿಕೆಟ್ ಉಡಾಯಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಅಥರ್ವ ಮುಂಬಯಿಯ “ಬೆಸ್ಟ್’ ಬಸ್ ನಿರ್ವಾಹಕಿಯ ಮಗನೆಂಬುದು ವಿಶೇಷ. ಉಳಿದಂತೆ ವಿದ್ಯಾಧರ್ ಪಾಟೀಲ್ ಮತ್ತು ಸುಶಾಂತ್ ಮಿಶ್ರಾ ತಲಾ 2 ವಿಕೆಟ್ ಕಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ