ಆಸೀಸ್‌ ಬೌಲಿಂಗ್‌ ವೇಗಕ್ಕೆ ಕುಸಿದ ಪಾಕಿಸ್ಥಾನ

Team Udayavani, Nov 22, 2019, 12:18 AM IST

ಬ್ರಿಸ್ಬೇನ್‌: ಆಸ್ಟ್ರೇಲಿಯದ ತ್ರಿವಳಿ ವೇಗಿಗಳ ದಾಳಿಗೆ ಕುಸಿದ ಪಾಕಿಸ್ಥಾನ, ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ಮೊದಲ ದಿನ 240 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟ್‌ ಆಗಿದೆ.

ಮಿಚೆಲ್‌ ಸ್ಟಾರ್ಕ್‌ (52ಕ್ಕೆ 4), ಪ್ಯಾಟ್‌ ಕಮಿನ್ಸ್‌ (60ಕ್ಕೆ 3) ಮತ್ತು ಜೋಶ್‌ ಹ್ಯಾಝಲ್‌ವುಡ್‌ (46ಕ್ಕೆ 2) ಸೇರಿಕೊಂಡು ಪಾಕಿಸ್ಥಾನದ ಮೇಲೆರಗಿದರು.

ಪಾಕಿಸ್ಥಾನದ ಆರಂಭ ಉತ್ತಮವಾಗಿಯೇ ಇತ್ತು. ನಾಯಕ ಅಜರ್‌ ಅಲಿ (39) ಮತ್ತು ಶಾನ್‌ ಮಸೂದ್‌ (27) ಮೊದಲ ವಿಕೆಟಿಗೆ 33 ಓವರ್‌ಗಳಿಂದ 75 ರನ್‌ ಪೇರಿಸುವಲ್ಲಿ ಯಶಸ್ವಿಯಾಗಿದ್ದರು. ಲಂಚ್‌ ವೇಳೆ ವಿಕೆಟ್‌ ನಷ್ಟವಿಲ್ಲದೆ 57 ರನ್‌ ಮಾಡುವ ಮೂಲಕ ಎಚ್ಚರಿಕೆಯ ಆರಂಭ ಒದಗಿಸಿದ್ದರು. ಆದರೆ ಭೋಜನ ವಿರಾಮದ ಬಳಿಕ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಯಿತು. ಆಸೀಸ್‌ ಬೌಲರ್‌ಗಳು ಅಮೋಘ ಹಿಡಿತ ಸಾಧಿಸಿದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಸದ್‌ ಶಫೀಕ್‌ 134 ಎಸೆತಗಳಿಂದ 76 ರನ್‌ ಬಾರಿಸಿ (7 ಬೌಂಡರಿ) ಹೋರಾಟ ಸಂಘಟಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಯಲ್ಲಿ ಕೀಪರ್‌ ರಿಜ್ವಾನ್‌ (37) ಮತ್ತು ಯಾಸಿರ್‌ ಶಾ (26) ಸೇರಿಕೊಂಡು ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ