ಬೌಲ್ಟ್  ಹ್ಯಾಟ್ರಿಕ್‌ಗೆ ಬೆಚ್ಚಿಬಿದ್ದ ಪಾಕ್‌


Team Udayavani, Nov 9, 2018, 12:27 PM IST

trent-boult-2.jpg

ಅಬುಧಾಬಿ: ವೇಗಿ ಟ್ರೆಂಟ್‌ ಬೌಲ್ಟ್ ಅವರ ಹ್ಯಾಟ್ರಿಕ್‌ ದಾಳಿಗೆ ಬೆಚ್ಚಿದ ಪಾಕಿಸ್ಥಾನ, ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡಿಗೆ 47 ರನ್ನುಗಳಿಂದ ಶರಣಾಗಿದೆ. 

ಬುಧವಾರ ಹೊನಲು ಬೆಳಕಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ನ್ಯೂಜಿಲ್ಯಾಂಡ್‌ 9 ವಿಕೆಟಿಗೆ 266 ರನ್‌ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಪಾಕಿಸ್ಥಾನ 47.2 ಓವರ್‌ಗಳಲ್ಲಿ 219ಕ್ಕೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು.

ಮೊದಲ ಓವರಲ್ಲೇ ಹ್ಯಾಟ್ರಿಕ್‌
ಟ್ರೆಂಟ್‌ ಬೌಲ್ಟ್ ತಮ್ಮ ಮೊದಲ ಓವರಿನಲ್ಲೇ (ಇನ್ನಿಂಗ್ಸಿನ 2ನೇ ಓವರ್‌) ಘಾತಕವಾಗಿ ಎರಗಿ ಹ್ಯಾಟ್ರಿಕ್‌ ಸಾಧಿಸಿದರು. ಓವರಿನ 2ನೇ, 3ನೇ ಹಾಗೂ 4ನೇ ಎಸೆತಗಳಲ್ಲಿ ಕ್ರಮವಾಗಿ ಫ‌ಕಾರ್‌ ಜಮಾನ್‌ (1), ಬಾಬರ್‌ ಆಜಂ (0) ಮತ್ತು ಮೊಹಮ್ಮದ್‌ ಹಫೀಜ್‌ (0) ಅವರನ್ನು ಪೆವಿಲಿಯನ್ನಿಗೆ ಅಟ್ಟಿ ಈ ಸಾಧನೆಗೈದರು. ಫ‌ಕಾರ್‌ ಜಮಾನ್‌ ಕ್ಲೀನ್‌ಬೌಲ್ಡ್‌ ಆದರೆ, ಬಾಬರ್‌ ಆಜಂ ಟಯ್ಲರ್‌ಗೆ ಕ್ಯಾಚಿತ್ತರು. ಹಫೀಜ್‌ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ಹೀಗೆ 2.4 ಓವರ್‌ ಆಗುವಷ್ಟರಲ್ಲಿ 8 ರನ್ನಿಗೆ ಪಾಕಿಸ್ಥಾನದ 3 ವಿಕೆಟ್‌ ಉದುರಿ ಹೋಯಿತು.

ಬಳಿಕ ಇಮಾಮ್‌ ಉಲ್‌ ಹಕ್‌ (34), ಶೋಯಿಬ್‌ ಮಲಿಕ್‌ (30) 4ನೇ ವಿಕೆಟಿಗೆ 63 ರನ್‌ ಜತೆಯಾಟ ನಿಭಾಯಿಸಿ ಕುಸಿತಕ್ಕೆ ತಡೆಯಾದರು. ಈ ಹಂತದಲ್ಲಿ ಮತ್ತೂಂದು ಕುಸಿತ ಅನುಭವಿಸಿದ ಪಾಕ್‌ 85 ರನ್ನಿಗೆ 6 ವಿಕೆಟ್‌ ಕಳೆದುಕೊಂಡು ದೊಡ್ಡ ಸೋಲಿನ ಸೂಚನೆ ನೀಡಿತು. ಆದರೆ 7ನೇ ವಿಕೆಟಿಗೆ ಒಟ್ಟುಗೂಡಿದ ನಾಯಕ ಸಫ‌ìರಾಜ್‌ ಅಹ್ಮದ್‌ (64) ಮತ್ತು ಇಮಾದ್‌ ವಾಸಿಮ್‌ (50) 103 ರನ್‌ ಜತೆಯಾಟ ನಡೆಸಿ ತಂಡವನ್ನು ಹೀನಾಯ ಸ್ಥಿತಿಯಿಂದ ಪಾರುಮಾಡಿದರು. ಲಾಕಿ ಫ‌ರ್ಗ್ಯುಸನ್‌ ಕೂಡ 3 ವಿಕೆಟ್‌ ಕಿತ್ತರು.

ನ್ಯೂಜಿಲ್ಯಾಂಡ್‌ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದವರೆಂದರೆ ರಾಸ್‌ ಟಯ್ಲರ್‌ ಮತ್ತು ಟಾಮ್‌ ಲ್ಯಾಥಂ. ಇಬ್ಬರೂ ಅರ್ಧ ಶತಕ ದಾಖಲಿಸುವ ಜತೆಗೆ 4ನೇ ವಿಕೆಟಿಗೆ 130 ರನ್‌ ಪೇರಿಸಿ ತಂಡದ ಗೌರವಯುತ ಮೊತ್ತಕ್ಕೆ ಕಾರಣರಾದರು. ಟಯ್ಲರ್‌ ಸರ್ವಾಧಿಕ 80 ರನ್‌ ಹೊಡೆದರೆ (112 ಎಸೆತ, 5 ಬೌಂಡರಿ), ಲ್ಯಾಥಂ 64 ಎಸೆತಗಳಿಂದ 68 ರನ್‌ ಬಾರಿಸಿದರು (5 ಬೌಂಡರಿ). ಪಾಕ್‌ ಪರ ಶಹೀನ್‌ ಅಫ್ರಿದಿ ಮತ್ತು ಶಾದಾಬ್‌ ಖಾನ್‌ ತಲಾ 4 ವಿಕೆಟ್‌ ಕಿತ್ತು ಮಿಂಚಿದರು. ಹ್ಯಾಟ್ರಿಕ್‌ ಹೀರೋ ಬೌಲ್ಟ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

ಸಂಕ್ಷಿಪ್ತ ಸ್ಕೋರ್‌ 
ನ್ಯೂಜಿಲ್ಯಾಂಡ್‌-9 ವಿಕೆಟಿಗೆ 266 (ಟಯ್ಲರ್‌ 80, ಲ್ಯಾಥಂ 68, ಶಾದಾಬ್‌ 38ಕ್ಕೆ 4, ಅಫ್ರಿದಿ 46ಕ್ಕೆ 4). ಪಾಕಿಸ್ಥಾನ-47.2 ಓವರ್‌ಗಳಲ್ಲಿ 219 ಆಲೌಟ್‌ (ಸಫ‌ìರಾಜ್‌ 64, ಇಮಾದ್‌ 50, ಬೌಲ್ಟ್ 54ಕ್ಕೆ 3, ಫ‌ರ್ಗ್ಯುಸನ್‌ 36ಕ್ಕೆ 3, ಗ್ರ್ಯಾಂರ್ಡ್‌ಹೋಮ್‌ 40ಕ್ಕೆ 2). ಪಂದ್ಯಶ್ರೇಷ್ಠ: ಟ್ರೆಂಟ್‌ ಬೌಲ್ಟ್.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.