ವಿಂಡೀಸ್ ಕ್ರಿಕೆಟಿಗ ಸ್ಯಾಮಿಗೆ ಶೀಘ್ರ ಪಾಕಿಸ್ತಾನ ಪೌರತ್ವ
Team Udayavani, Feb 22, 2020, 9:30 AM IST
ಕರಾಚಿ: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಡ್ಯಾರೆನ್ ಸ್ಯಾಮಿ ಶೀಘ್ರ ಪಾಕಿಸ್ತಾನದ ಪೌರತ್ವ ಪಡೆಯಲಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟಿ20 ಕೂಟದ ಪ್ರಮುಖ ತಂಡವಾಗಿರುವ ಪೇಶಾವರ ಝಲ್ಮಿ ಮಾಲೀಕ ಜಾವೇದ್ ಅಫ್ರಿದಿ ತಿಳಿಸಿದ್ದಾರೆ.
“ನಮ್ಮ ತಂಡ ಪೇಶಾವರ ಝಲ್ಮಿ ನಾಯಕ ಡ್ಯಾರೆನ್ ಸ್ಯಾಮಿಗೆ ಗೌರವ ಪೌರತ್ವ ನೀಡಬೇಕೆಂದು ಈಗಾಗಲೇ ಪಾಕ್ ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಎಹ್ಸಾನ್ ಮಣಿ ಕೂಡ ಆಸಕ್ತಿ ವಹಿಸಿದ್ದರಿಂದ ಕೆಲವೇ ದಿನಗಳಲ್ಲಿ ಸ್ಯಾಮಿಗೆ ಪೌರತ್ವ ಸಿಗಬಹುದು’ ಎಂದು ಅಫ್ರಿದಿ ತಿಳಿಸಿದ್ದಾರೆ.
ಉಗ್ರರ ಕೃತ್ಯಗಳಿಂದಾಗಿ ಪಾಕ್‌ನಲ್ಲಿ ಕ್ರಿಕೆಟ್ ಆಡಲು ವಿಶ್ವದ ಹಲವು ರಾಷ್ಟ್ರದ ಆಟಗಾರರು ಹಿಂದೇಟು ಹಾಕಿದರೂ ಸ್ಯಾಮಿ ಮಾತ್ರ ಪಾಕ್‌ಗೆ ತೆರಳಲು ತಕರಾರು ತೆಗೆಯದ್ದನ್ನು ಇಲ್ಲಿ ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಟಿವಿಎಸ್ ನಿಂದ ಹೊಸ ಮಾದರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆ
ತೈಲ ಸೋರಿಕೆಯಿಂದ ಕಪ್ಪಾದ ಸುಂದರ ಗೋವಾ ಬೀಚ್ : ಓಡಾಡುವುದೇ ಕಷ್ಟಕರ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ
ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ