ಪಾಕಿಸ್ಥಾನ ವಿರುದ್ಧ ಪ್ರಭುತ್ವ; ಮೊದಲ ಪ್ರಶಸ್ತಿಯೇ ಭಾರತಕ್ಕೆ


Team Udayavani, Oct 18, 2021, 5:50 AM IST

ಪಾಕಿಸ್ಥಾನ ವಿರುದ್ಧ ಪ್ರಭುತ್ವ; ಮೊದಲ ಪ್ರಶಸ್ತಿಯೇ ಭಾರತಕ್ಕೆ

ಅ. 23ರಿಂದ ಟಿ20 ವಿಶ್ವಕಪ್‌ ಮುಖ್ಯ ಸುತ್ತು “ಸೂಪರ್‌-12′ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಕಳೆದ 6 ವಿಶ್ವಕಪ್‌ ಗಳ ಮೆಲುಕು ಮೂಡಿಬರಲಿದೆ.

ಮೊದಲ ಟಿ20 ವಿಶ್ವಕಪ್‌ ನಡೆದದ್ದು 2007ರಲ್ಲಿ. ಆತಿಥ್ಯ ದಕ್ಷಿಣ ಆಫ್ರಿಕಾದ್ದಾಗಿತ್ತು. ಅಂದಿನ ಧೋನಿ ನಾಯಕತ್ವದ ಯುವ ಭಾರತೀಯ ತಂಡ ಮೊದಲ ಪ್ರಶಸ್ತಿಯನ್ನೇ ಗೆದ್ದು ಇತಿಹಾಸ ನಿರ್ಮಿಸಿತ್ತು.

ಭಾರತದ ಹೆಜ್ಜೆ ಗುರುತು
ಕೂಟದಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದವು. ಭಾರತ “ಡಿ’ ಗುಂಪಿನಲ್ಲಿತ್ತು. ಇಲ್ಲಿ ಪಾಕಿಸ್ಥಾನದ ವಿರುದ್ಧ ಗೆಲುವು ಸಾಧಿಸಿ, ಸೂಪರ್‌-8 ಹಂತಕ್ಕೇರಿತು. ಇಲ್ಲಿ “ಇ’ ಗುಂಪಿನಲ್ಲಿ ಸ್ಥಾನ ಪಡೆಯಿತು.

ಮೂರು ಪಂದ್ಯಗಳನ್ನಾಡಿ ಎರಡರಲ್ಲಿ ಜಯ ಸಾಧಿಸಿತು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ವನ್ನು ಎದುರಿಸಿತು. ಯುವರಾಜ್‌ ಸಿಂಗ್‌ ಅವರ ಸ್ಫೋಟಕ ಬ್ಯಾಟಿಂಗ್‌ (30 ಎಸೆತ, 70 ರನ್‌) ನೆರವಿನಿಂದ ಆಸ್ಟ್ರೇಲಿಯವನ್ನು ಸೋಲಿಸಿ ಫೈನಲ್‌ಗೇರಿತು.

ಪಾಕ್‌ ವಿರುದ್ಧ ರೋಚಕ ಫೈನಲ್‌
ಇದು ಟಿ20 ವಿಶ್ವಕಪ್‌ ಇತಿಹಾಸದ ಮೊದಲ ಹಾಗೂ ಅಷ್ಟೇ ರೋಚಕ ಫೈನಲ್‌. ಭಾರತ-ಪಾಕಿಸ್ಥಾನ ಅಂತಿಮ ಪಂದ್ಯದಲ್ಲಿ ಎದುರಾದದ್ದೂ ಇದಕ್ಕೊಂದು ಕಾರಣ. ಇದಕ್ಕೆ ಸಾಕ್ಷಿಯಾದದ್ದು ಜೊಹಾನ್ಸ್‌ಬರ್ಗ್‌ನ ವಾಂಡರರ್ ಅಂಗಳ.

ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿತು. ಪಾಕ್‌ 19.3 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟಾಯಿತು.

ಪಾಕ್‌ಗೆ ಕೊನೆಯ ಓವರ್‌ನಲ್ಲಿ 13 ರನ್‌ ಬೇಕಿತ್ತು. ನಾಯಕ ಮಿಸ್ಬಾ ಉಲ್‌ ಹಕ್‌ ಕ್ರೀಸ್‌ನಲ್ಲಿದ್ದರು. ಜೋಗಿಂದರ್‌ ಶರ್ಮ ಎಸೆದ 2ನೇ ಎಸೆತದಲ್ಲಿ ಮಿಸ್ಬಾ ಸಿಕ್ಸರ್‌ ಬಾರಿಸಿದರು. ಮುಂದಿನ ಎಸೆತದಲ್ಲೂ ಸಿಕ್ಸರ್‌ ಬಾರಿಸಲು ಹೋಗಿ ಶ್ರೀಶಾಂತ್‌ಗೆ ಕ್ಯಾಚ್‌ ನೀಡಿದರು. ಭಾರತ 5 ರನ್‌ ಅಂತರದಿಂದ ಜಯಿಸಿತು.

ಇದನ್ನೂ ಓದಿ:ಟಿ20 ವಿಶ್ವಕಪ್‌ ಅರ್ಹತಾ ಸುತ್ತಿನ ಮೊದಲ ಪಂದ್ಯ: ಒಮಾನ್‌ಗೆ 10 ವಿಕೆಟ್‌ ಭರ್ಜರಿ ಗೆಲುವು

ಯುವಿ 6 ಸಿಕ್ಸರ್‌
ಇಡೀ ಕೂಟದಲ್ಲಿ ಮಿಂಚಿದ್ದು ಯುವರಾಜ್‌ ಸಿಂಗ್‌. ಅವರು ಇಂಗ್ಲೆಂಡ್‌ ವಿರುದ್ಧ ಸೂಪರ್‌-8 ಹಂತದ ಪಂದ್ಯದಲ್ಲಿ ಸ್ಟುವರ್ಟ್‌ ಬ್ರಾಡ್‌ ಅವರ ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್‌ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದರು. ಮುಂದೆ ಆಸ್ಟ್ರೇಲಿಯ ವಿರುದ್ಧ ಸೆಮಿಫೈನಲ್‌ನಲ್ಲಿ ಬರೀ 30 ಎಸೆತಗಳಲ್ಲಿ 70 ರನ್‌ ಚಚ್ಚಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ- 5 ವಿಕೆಟಿಗೆ 157 (ಗೌತಮ್‌ ಗಂಭೀರ್‌ 75, ರೋಹಿತ್‌ ಶರ್ಮ ಔಟಾ ಗದೆ 30, ಉಮರ್‌ ಗುಲ್‌ 28ಕ್ಕೆ 3). ಪಾಕಿಸ್ಥಾನ 19.3 ಓವರ್‌ಗಳಲ್ಲಿ 152 (ಮಿಸ್ಬಾ 43, ಇರ್ಫಾನ್‌ ಪಠಾಣ್‌ 16ಕ್ಕೆ 3, ಆರ್‌ಪಿ ಸಿಂಗ್‌ 26ಕ್ಕೆ 3, ಜೋಗಿಂದರ್‌ 20ಕ್ಕೆ 2).
ಪಂದ್ಯಶ್ರೇಷ್ಠ: ಇರ್ಫಾನ್‌ ಪಠಾಣ್‌.

 

ಟಾಪ್ ನ್ಯೂಸ್

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

9cm-bommai

ಬಿಜೆಪಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ: ಸಿಎಂ ಬೊಮ್ಮಾಯಿ

food grains

ಬೇಳೆಕಾಳು, ಆಹಾರ ಧಾನ್ಯಗಳ ಬೆಲೆಯಲ್ಲೂ ಏರಿಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಜಿಗಿತ;17,000 ಅಂಕ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಜಿಗಿತ;17,000 ಅಂಕ ದಾಟಿದ ನಿಫ್ಟಿ

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

4rambhat

ನೇತ್ರದಾನದ ಮೂಲಕ ಅಂಧರ ಬಾಳಿಗೆ ಕಣ್ಣಾದ ಮಾಜಿ ಶಾಸಕ ಉರಿಮಜಲು ರಾಮ ಭಟ್

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆ

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡೇವಿಸ್‌ ಕಪ್‌ ಟೆನಿಸ್‌: ರಶ್ಯಕ್ಕೆ 15 ವರ್ಷ ಬಳಿಕ ಪ್ರಶಸ್ತಿ

ಡೇವಿಸ್‌ ಕಪ್‌ ಟೆನಿಸ್‌: ರಶ್ಯಕ್ಕೆ 15 ವರ್ಷ ಬಳಿಕ ಪ್ರಶಸ್ತಿ

ನಮ್ಮ ಗುರಿ ಭಾರತೀಯ ಕ್ರಿಕೆಟ್‌ ಬೆಳವಣಿಗೆ: ವಿರಾಟ್‌ ಕೊಹ್ಲಿ

ನಮ್ಮ ಗುರಿ ಭಾರತೀಯ ಕ್ರಿಕೆಟ್‌ ಬೆಳವಣಿಗೆ: ವಿರಾಟ್‌ ಕೊಹ್ಲಿ

ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌

ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

virat

ಮೂರು ಮಾದರಿಯಲ್ಲಿ 50 ಕ್ಕೂ ಹೆಚ್ಚು ಜಯ: ವಿರಾಟ್ ಕೊಹ್ಲಿ ನೂತನ ದಾಖಲೆ

MUST WATCH

udayavani youtube

ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

ಹೊಸ ಸೇರ್ಪಡೆ

vaccination pending

ಅವಧಿ ಮುಗಿದ್ರೂ ಲಸಿಕೆಗೆ ಬಾರದ 10 ಲಕ್ಷ ಜನ..!

10false

ಸುಳ್ಳು ಆಶ್ವಾಸನೆಗೆ ಬಲಿಯಾಗಬೇಡಿ: ಅಜಯಸಿಂಗ್

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

9cm-bommai

ಬಿಜೆಪಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ: ಸಿಎಂ ಬೊಮ್ಮಾಯಿ

food grains

ಬೇಳೆಕಾಳು, ಆಹಾರ ಧಾನ್ಯಗಳ ಬೆಲೆಯಲ್ಲೂ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.