4ನೇ ಟಿ20 ಪಂದ್ಯ; ಪಾಕಿಸ್ಥಾನಕ್ಕೆ 3 ರನ್‌ ರೋಚಕ ಜಯ

Team Udayavani, Sep 26, 2022, 5:50 PM IST

4ನೇ ಟಿ20 ಪಂದ್ಯ; ಪಾಕಿಸ್ಥಾನಕ್ಕೆ 3 ರನ್‌ ರೋಚಕ ಜಯ; ಸರಣಿ ಸಮಬಲ

ಕರಾಚಿ: ಪ್ರವಾಸಿ ಇಂಗ್ಲೆಂಡ್‌ ಎದುರಿನ 4ನೇ ಟಿ20 ಪಂದ್ಯವನ್ನು 3 ರನ್ನುಗಳಿಂದ ರೋಚಕವಾಗಿ ಗೆದ್ದ ಪಾಕಿಸ್ಥಾನ, ಸರಣಿಯನ್ನು 2-2 ಸಮಬಲಕ್ಕೆ ತಂದು ನಿಲ್ಲಿಸಿದೆ.

ಇದರೊಂದಿಗೆ ಕರಾಚಿಯ 4 ಪಂದ್ಯಗಳ ಅಭಿಯಾನ ಕೊನೆಗೊಂಡಿದೆ. ಉಳಿದ 3 ಪಂದ್ಯಗಳು ಲಾಹೋರ್‌ನಲ್ಲಿ ನಡೆಯಲಿವೆ.

ಮೊಹಮ್ಮದ್‌ ರಿಜ್ವಾನ್‌ ಅವರ ಮತ್ತೊಂದು ಅಮೋಘ ಬ್ಯಾಟಿಂಗ್‌ ಸಾಹಸದಿಂದ ಪಾಕಿಸ್ಥಾನ 4 ವಿಕೆಟಿಗೆ 166 ರನ್‌ ಗಳಿಸಿತು. ಜವಾಬಿತ್ತ ಇಂಗ್ಲೆಂಡ್‌ ಡೆತ್‌ ಓವರ್‌ಗಳಲ್ಲಿ ತೀವ್ರ ಕುಸಿತ ಅನುಭವಿಸಿ 19.2 ಓವರ್‌ಗಳಲ್ಲಿ 163ಕ್ಕೆ ಆಲೌಟ್‌ ಆಯಿತು.

ಪ್ರಚಂಡ ಫಾರ್ಮ್ ಮುಂದುವರಿಸಿದ ರಿಜ್ವಾನ್‌ ಕೊನೆಯ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು 88 ರನ್‌ ಬಾರಿಸಿದರು (67 ಎಸೆತ, 9 ಬೌಂಡರಿ, 1 ಸಿಕ್ಸರ್‌). ಇದು ಪಂದ್ಯದ ಏಕೈಕ ಅರ್ಧ ಶತಕವಾಗಿತ್ತು. ನಾಯಕ ಬಾಬರ್‌ ಆಜಂ 36 ರನ್‌ ಮಾಡಿದರು. ಮೊದಲ ವಿಕೆಟಿಗೆ 11.5 ಓವರ್‌ಗಳಿಂದ 97 ರನ್‌ ಒಟ್ಟುಗೂಡಿತು.

14ಕ್ಕೆ 3 ವಿಕೆಟ್‌ ಬಿದ್ದಾಗಲೇ ಇಂಗ್ಲೆಂಡಿನ ಸಂಕಟ ಅರಿವಿಗೆ ಬಂದಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಹೋರಾಟ ಸಂಘಟಿಸಿತು. ಬೆನ್‌ ಡಕೆಟ್‌ (33), ಹ್ಯಾರಿ ಬ್ರೂಕ್‌ (34), ನಾಯಕ ಮೊಯಿನ್‌ ಅಲಿ (29), ಲಿಯಮ್‌ ಡಾಸನ್‌ (34) ಗೆಲುವಿನ ಆಸೆ ಚಿಗುರಿಸಿದರು. ಆದರೆ ಡೆತ್‌ ಓವರ್‌ಗಳಲ್ಲಿ ಹ್ಯಾರಿಸ್‌ ರವೂಫ್ ಘಾತಕ ಬೌಲಿಂಗ್‌ ಪ್ರದರ್ಶಿಸಿದರು. ಪಾಕ್‌ ಫೀಲ್ಡಿಂಗ್‌ ಕೂಡ ಉತ್ತಮ ಮಟ್ಟದಲ್ಲಿತ್ತು.

ಮೊಹಮ್ಮದ್‌ ನವಾಜ್‌ ಮತ್ತು ಹ್ಯಾರಿಸ್‌ ರವೂಫ್ ತಲಾ 3 ವಿಕೆಟ್‌ ಕಿತ್ತು ಇಂಗ್ಲೆಂಡ್‌ ಪಾಲಿಗೆ ಕಂಟಕವಾಗಿ ಕಾಡಿದರು. ಅಂತಿಮ ಓವರ್‌ನಲ್ಲಿ ಇಂಗ್ಲೆಂಡ್‌ ಜಯಕ್ಕೆ 4 ರನ್‌ ಅಗತ್ಯವಿತ್ತು. ಆದರೆ ಕೈಲಿದ್ದದ್ದು ಒಂದೇ ವಿಕೆಟ್‌. ಮೊಹಮ್ಮದ್‌ ವಾಸಿಮ್‌ ಜೂನಿಯರ್‌ ದ್ವಿತೀಯ ಎಸೆತದಲ್ಲಿ ಟಾಪ್ಲಿ ಅವರನ್ನು ಔಟ್‌ ಮಾಡಿ ಪಾಕಿಸ್ಥಾನಕ್ಕೆ ರೋಚಕ ಗೆಲುವು ತಂದಿತ್ತರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-4 ವಿಕೆಟಿಗೆ 166 (ರಿಜ್ವಾನ್‌ 88, ಬಾಬರ್‌ 36, ಮಸೂದ್‌ 21, ಟಾಪ್ಲಿ 37ಕ್ಕೆ 2). ಇಂಗ್ಲೆಂಡ್‌-19.2 ಓವರ್‌ಗಳಲ್ಲಿ 163 (ಬ್ರೂಕ್‌ 34, ಡಾಸನ್‌ 34, ಡಕೆಟ್‌ 33, ಅಲಿ 29, ರವೂಫ್ 32ಕ್ಕೆ 3, ನವಾಜ್‌ 35ಕ್ಕೆ 3, ಹಸ್ನೇನ್‌ 40ಕ್ಕೆ 2).

ಪಂದ್ಯಶ್ರೇಷ್ಠ: ಹ್ಯಾರಿಸ್‌ ರವೂಫ್.

ಟಾಪ್ ನ್ಯೂಸ್

ಕಾಬೂಲ್‌: 12 ಮಂದಿಗೆ ಛಡಿ ಏಟಿನ ಶಿಕ್ಷೆ ವಿಧಿಸಿದ ತಾಲಿಬಾನ್ ಸರ್ಕಾರ

ಕಾಬೂಲ್‌: 12 ಮಂದಿಗೆ ಛಡಿ ಏಟಿನ ಶಿಕ್ಷೆ ವಿಧಿಸಿದ ತಾಲಿಬಾನ್ ಸರ್ಕಾರ

ಹಿಂದಿ ಹೇರಿಕೆ  ಖಂಡಿಸಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ವೃದ್ಧ

ಹಿಂದಿ ಹೇರಿಕೆ ಖಂಡಿಸಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ವೃದ್ಧ

1-ddad

ಶ್ರದ್ಧಾ ಪ್ರಕರಣ: ಆಫ್ತಾಬ್ ಗೆ ನ್ಯಾಯಾಂಗ ಬಂಧನ; ನಾರ್ಕೋ ಪರೀಕ್ಷೆಗೆ ದಿನಾಂಕ ನಿಗದಿ

ತೆಲುಗು ನಟ ನಾಗಚೈತನ್ಯ ವಿರುದ್ಧ ಸಮಂತಾ ಅಭಿಮಾನಿಗಳು ಗರಂ!

ತೆಲುಗು ನಟ ನಾಗಚೈತನ್ಯ ವಿರುದ್ಧ ಸಮಂತಾ ಅಭಿಮಾನಿಗಳು ಗರಂ!

1-sadsdasd

ಮಾವೋವಾದಿ ಸಂಪರ್ಕ ಪ್ರಕರಣ : ಆನಂದ್ ತೇಲ್ತುಂಬ್ಡೆ ಬಿಡುಗಡೆ

ಸ್ಮಾರ್ಟ್‌ಫೋನ್‌ ಉತ್ಪಾದನೆಗೆ ಎಲಾನ್‌ ಮಸ್ಕ್ ಚಿಂತನೆ

ಸ್ಮಾರ್ಟ್‌ಫೋನ್‌ ಉತ್ಪಾದನೆಗೆ ಎಲಾನ್‌ ಮಸ್ಕ್ ಚಿಂತನೆ

ಸುಳ್ಯ: ಯುವತಿಯನ್ನು ಕೊಂದು ಚೀಲದಲ್ಲಿ ತುಂಬಿಸಿಟ್ಟ ಪ್ರಕರಣ !: ಆರೋಪಿ ಬಂಧನ

ಸುಳ್ಯ: ಯುವತಿಯನ್ನು ಕೊಂದು ಚೀಲದಲ್ಲಿ ತುಂಬಿಸಿಟ್ಟ ಪ್ರಕರಣ !: ಆರೋಪಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka enters quarter final of the vijay hazare trophy 2022

ವಿಜಯ್ ಹಜಾರೆ: ಜಾರ್ಖಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕ

virat kohli

ಕೊಹ್ಲಿ ನಿವೃತ್ತಿ ಗುಮಾನಿ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್

Raza

ಭಾರತ ನಮ್ಮಲ್ಲಿ ಬರದಿದ್ದರೆ, ಪಾಕಿಸ್ಥಾನವು ವಿಶ್ವಕಪ್ ನಲ್ಲಿ ಆಡುವುದಿಲ್ಲ: ರಮೀಜ್ ರಾಜಾ ಎಚ್ಚರಿಕೆ

Cristiano Ronaldo left press conference after just two questions

FIFA 2022: ಎರಡೇ ಎರಡು ನಿಮಿಷಗಳಲ್ಲಿ ಮುಗಿಯಿತು ರೊನಾಲ್ಡೊ ಪತ್ರಿಕಾಗೋಷ್ಠಿ!

ಜೋರಾಗಿದೆ ಇರಾನ್‌ ಪರ-ವಿರೋಧ ಪ್ರತಿಭಟನೆ

ಜೋರಾಗಿದೆ ಇರಾನ್‌ ಪರ-ವಿರೋಧ ಪ್ರತಿಭಟನೆ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ಕಾಬೂಲ್‌: 12 ಮಂದಿಗೆ ಛಡಿ ಏಟಿನ ಶಿಕ್ಷೆ ವಿಧಿಸಿದ ತಾಲಿಬಾನ್ ಸರ್ಕಾರ

ಕಾಬೂಲ್‌: 12 ಮಂದಿಗೆ ಛಡಿ ಏಟಿನ ಶಿಕ್ಷೆ ವಿಧಿಸಿದ ತಾಲಿಬಾನ್ ಸರ್ಕಾರ

ಹಿಂದಿ ಹೇರಿಕೆ  ಖಂಡಿಸಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ವೃದ್ಧ

ಹಿಂದಿ ಹೇರಿಕೆ ಖಂಡಿಸಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ವೃದ್ಧ

1-ddad

ಶ್ರದ್ಧಾ ಪ್ರಕರಣ: ಆಫ್ತಾಬ್ ಗೆ ನ್ಯಾಯಾಂಗ ಬಂಧನ; ನಾರ್ಕೋ ಪರೀಕ್ಷೆಗೆ ದಿನಾಂಕ ನಿಗದಿ

ತೆಲುಗು ನಟ ನಾಗಚೈತನ್ಯ ವಿರುದ್ಧ ಸಮಂತಾ ಅಭಿಮಾನಿಗಳು ಗರಂ!

ತೆಲುಗು ನಟ ನಾಗಚೈತನ್ಯ ವಿರುದ್ಧ ಸಮಂತಾ ಅಭಿಮಾನಿಗಳು ಗರಂ!

1-sadsdasd

ಮಾವೋವಾದಿ ಸಂಪರ್ಕ ಪ್ರಕರಣ : ಆನಂದ್ ತೇಲ್ತುಂಬ್ಡೆ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.