ಪಾಕಿಗೆ ಗೆಲುವು; ಸರಣಿ ಸಮಬಲ
Team Udayavani, Nov 11, 2018, 6:10 AM IST
ಅಬುಧಾಬಿ: ನ್ಯೂಜಿಲ್ಯಾಂಡ್ ಎದುರಿನ 2ನೇ ಏಕದಿನ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ಪಾಕಿಸ್ಥಾನ ಸರಣಿಯನ್ನು 1-1 ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.
ಶುಕ್ರವಾರ ರಾತ್ರಿಯ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 9 ವಿಕೆಟಿಗೆ 209 ರನ್ನುಗಳ ಸಣ್ಣ ಮೊತ್ತ ಪೇರಿಸಿದರೆ, ಪಾಕಿಸ್ಥಾನ 40.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು.
4 ವಿಕೆಟ್ ಕಿತ್ತು ಕಿವೀಸ್‌ಗೆ ಕಡಿವಾಣ ಹಾಕಿದ ಶಹೀನ್ ಅಫ್ರಿದಿ ಪಂದ್ಯಶ್ರೇಷ್ಠರೆನಿಸಿದರು. ಕಿವೀಸ್ ಸರದಿಯಲ್ಲಿ ರಾಸ್ ಟಯ್ಲರ್ ಅವರದು ಏಕಾಂಗಿ ಹೋರಾಟವಾಗಿತ್ತು (ಅಜೇಯ 86). ಪಾಕ್ ಪರ ಫಕಾರ್ ಜಮಾನ್ 88 ರನ್ ಹೊಡೆದರು.